ಒಂದು ವೇಳೆ ಮತ ಹಾಕದಿದ್ರೂ ತೊಂದರೆ ಇಲ್ಲ, ನಿಮಗಾಗಿ ಕೆಲಸ ಮಾಡುವೆ: ವರುಣ್ 

Team Udayavani, Apr 22, 2019, 1:12 PM IST

ಪಿಲಿಭಿತ್:ತನಗೆ ಬಿಟ್ಟು ಬೇರೆಯವರಿಗೆ ಮತ ಹಾಕಿದರೆ, ನಾನು ನಿಮ್ಮ(ಮುಸ್ಲಿಮರ) ಯಾವುದೇ ಸಮಸ್ಯೆಯನ್ನು ಆಲಿಸುವುದಿಲ್ಲ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ವಿವಾದಿತ ಹೇಳಿಕೆ ಕೊಟ್ಟ ಬಳಿಕ ಇದೀಗ ಪುತ್ರ, ಭಾರತೀಯ ಜನತಾ ಪಕ್ಷದ ಮುಖಂಡ, ಸಂಸದ ವರುಣ್ ಗಾಂಧಿ ಸಮಜಾಯಿಷಿಯ ಹೇಳಿಕೆ ನೀಡುವ ಮೂಲಕ ಸಮತೋಲನ ಸಾಧಿಸಲು ಮುಂದಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಉತ್ತರಪ್ರದೇಶದ ಪಿಲಿಭಿತ್ ನಲ್ಲಿ ಚುನಾವಣಾ ಸಮಾರಂಭ ಉದ್ದೇಶಿಸಿ ಮಾತನಾಡಿದ ವರುಣ್, ನನ್ನ ಮುಸ್ಲಿಂ ಬಾಂಧವರಿಗೆ ನಾನು ಒಂದು ಮಾತನ್ನು ಹೇಳಬಯಸುತ್ತೇನೆ, ಒಂದು ವೇಳೆ ನೀವು ನನಗೆ ಮತ ಹಾಕಿದರೆ ತುಂಬಾ ಖುಷಿ, ಆದರೆ ಒಂದು ವೇಳೆ ನನಗೆ ಮತ ಹಾಕದಿದ್ದರು ಏನೂ ಸಮಸ್ಯೆ ಇಲ್ಲ. ನಿಮ್ಮ ಯಾವುದೇ ಕೆಲಸವಾಗಬೇಕಾದರು ನೀವು ನನ್ನ ಬಳಿ ಬರಬಹುದು ಎಂದು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.

ಆದರೆ ಒಂದು ವೇಳೆ ನನ್ನ ಟೀಯೊಳಗೆ ನಿಮ್ಮ ಸಕ್ಕರೆ ಮಿಶ್ರಣವಾದರೆ..ನಂತರ ನನ್ನ ಟೀ ಸಿಹಿಯಾಗಲಿದೆ ಎಂದು ವರುಣ್ ಉಪಮೆ ಮೂಲಕ ಮುಸ್ಲಿಮ್ ಮತದಾರರ ಮನವೊಲಿಕೆಗೆ ಮುಂದಾಗಿರುವುದಾಗಿ ವರದಿ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ