ದೇಶಾದ್ಯಂತ ಮತ್ತೆ ಏರಿಕೆಯಾದ ಪೆಟ್ರೋಲ್-ಡೀಸೆಲ್ ದರ: ದೆಹಲಿಯಲ್ಲಿ ದುಬಾರಿಯಾದ ಡೀಸೆಲ್ !
Team Udayavani, Jun 27, 2020, 9:10 AM IST
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಳೆದ 20 ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದು ಇಂದು ಮತ್ತೆ ತೈಲ ಕಂಪೆನಿಗಳು ದರ ಏರಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 25 ಪೈಸೆ ಮತ್ತು ಡೀಸೆಲ್ ಬೆಲೆ 21 ಪೈಸೆ ಎರಿಕೆ ಕಂಡಿವೆ. ಹಾಗಾಗಿ ಗ್ರಾಹಕರು ಇದೀಗ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 80,38 ರೂ ಮತ್ತು ಡೀಸೆಲ್ ಗೆ 80,40 ರೂ ಪಾವತಿಸಬೇಕಿದೆ. ದೆಹಲಿಯ ಪೆಟ್ರೋಲ್ ಗಿಂತ ಡೀಸೆಲ್ ಬೆಲೆ ಅಧಿಕವಾಗಿರುವುದು ಜನರನ್ನು ಚಿಂತೆಗೀಡುಮಾಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಶುಕ್ರವಾರ ಕೂಡ (26-6-2020) ಪೆಟ್ರೋಲ್ 21 ಪೈಸೆ ಮತ್ತು ಡೀಸೆಲ್ 17 ಪೈಸೆ ಹೆಚ್ಚಳವಾಗಿತ್ತು. ಮುಂಬೈ ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 87.14 ರೂ ಇದ್ದು, ಡೀಸೆಲ್ ಬೆಲೆ 78.71 ಎಂದು ವರದಿಯಾಗಿದೆ.
ಕೋವಿಡ್ -19 ಕಾರಣದಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು 82 ದಿನಗಳ ನಂತರ ಅಂದರೇ ಜೂನ್ 7 ರಿಂದ ದೈನಂದಿನ ಬೆಲೆ ಪರಿಷ್ಕರಣೆಯನ್ನು ಮಾಡಲಾರಂಭಿಸಿವೆ. ಹಾಗಾಗಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿಯಮಿತವಾಗಿ ಏರಿಕೆಯಾಗುತ್ತಿದೆ. ಮಾತ್ರವಲ್ಲದೆ ವ್ಯಾಟ್ ಗೆ ಅನುಗುಣವಾಗಿ ಈ ದರಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.
ಇಂಧನ ಬೆಲೆ ಏರಿಕೆ ಕುರಿತು ವಿರೋಧ ಪಕ್ಷಗಳು ಸರ್ಕಾರದ ಮೇಲೆ ದಾಳಿ ನಡೆಸುತ್ತಿದ್ದು ಸೋಮವಾರ (29-06-2020) ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು