ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ವಾರ್ಡ್‌ಗಳಿಗೆ ಶೀಘ್ರ ರಾಮಭಕ್ತರ ಹೆಸರು?
Team Udayavani, Jul 5, 2022, 10:40 PM IST
ಲಕ್ನೋ: ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ವಾರ್ಡ್‌ಗಳಿಗೆ ರಾಮ ಮಂದಿರ ಹೋರಾಟಗಾರರ ಹೆಸರನ್ನು ಇಡುವಂತೆ ಕೋರಿ ಅಯೋಧ್ಯೆ ನಗರ ಪಾಲಿಕೆಯು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ರಾಮ ಮಂದಿರಕ್ಕಾಗಿ ಹೋರಾಡಿದ ಕಲ್ಯಾಣ್ ಸಿಂಗ್, ಅಶೋಕ್ ಸಿಂಘಾಲ್, ಮಹಂತ ಅಭಿರಾಮ್ ದಾಸ್ ಸೇರಿ ಮುಂತಾದವರು ಹೆಸರಿಡುವಂತೆ ಕೋರಲಾಗಿದೆ.
ಹಾಗೆಯೇ ರಥೆÌàಲಿ ವಾರ್ಡ್‌ಗೆ ಶಹೀದ್ ವೀರ್ ಅಬ್ದುಲ್ ಹಮೀದ್ ವಾರ್ಡ್, ಬೇಗಂಗಜ್ ಗಡಯ್ಯ ವಾರ್ಡ್‌ಗೆ ಅಂಬೇಡ್ಕರ್ ವಾರ್ಡ್, ಫತೇಹ್‌ಗಂಜ್ ವಾರ್ಡ್‌ಗೆ ಜಯಪ್ರಕಾಶ್ ನಾರಾಯಣ್ ವಾರ್ಡ್, ಹೈದರ್‌ಗಂಜ್ ವಾರ್ಡ್‌ಗೆ ನಾನಕ್‌ಪುರ್ ವಾರ್ಡ್ ಎಂದು ಮರುನಾಮಕರಣ ಮಾಡಲು ಮನವಿ ಸಲ್ಲಿಸಲಾಗಿದೆ. ಅಯೋಧ್ಯೆಯಲ್ಲಿ ಒಟ್ಟು 60 ವಾರ್ಡ್‌ಗಳಿವೆ.