ಪಿತ್ರೋಡ ಜೀ, ನಿಮಗೆ ನಾಚಿಕೆಯಾಗಬೇಕು, ನೀವು ದೇಶದ ಕ್ಷಮೆಯಾಚಿಸಬೇಕು: ರಾಹುಲ್‌

Team Udayavani, May 13, 2019, 7:15 PM IST

ಖನ್ನಾ , ಪಂಜಾಬ್‌ : 1984ರ ಸಿಕ್ಖ್ ವಿರೋಧಿ ನರಮೇಧಕ್ಕೆ ಸಂಬಂಧಿಸಿ ‘ಹುವಾ ತೋ ಹುವಾ – ಆದದ್ದು ಆಗಿ ಹೋಯಿತು, ಏನೀಗ ?’ ಎಂದು ಕಾಂಗ್ರೆಸ್‌ ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಕಾಂಗ್ರೆಸ್‌ ಮುಖ್ಯಸ್ಥ ರಾಹುಲ್‌ ಗಾಂಧಿ ಅವರಿಗೆ ಪಂಜಾಬ್‌ ನಲ್ಲಿ ತಿರುಗುಬಾಣವಾಗಿದೆ.

ಪಂಜಾಬ್‌ ನ ಮೊದಲ ಚುನಾವಣಾ ರಾಲಿಯಲ್ಲಿಂದು ಮಾತನಾಡಿದ ರಾಹುಲ್‌ ಗಾಂಧಿ, “ಹುವಾ ತೋ ಹೇಳಿಕೆ ನೀಡಿದ್ದ ಪಿತ್ರೋಡ ಗೆ ನಾಚಿಕೆಯಾಗಬೇಕು; ಅವರು ಈ ಹೇಳಿಕೆಗಾಗಿ ದೇಶದ ಕ್ಷಮೆಯಾಚಿಸಬೇಕು’ ಎಂದು ಬಹಿರಂಗವಾಗಿ ಹೇಳುವ ಮೂಲಕ ಪಕ್ಷಕ್ಕೆ ಈಗಾಗಲೇ ಆಗಿರುವ ಭಾರೀ ಹಾನಿಯನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದರು.

ರಾಹುಲ್‌ ಗಾಂಧಿ ಅವರು ಈ ಮೊದಲೇ ಪಿತ್ರೋಡ ಅವರ ಹುವಾ ತೋ ಹುವಾ ಹೇಳಿಕೆಗೆ ತನ್ನ ಸಹಮತ ಇಲ್ಲ ಎಂದಿದ್ದರಲ್ಲದೆ ಅವರ ಹೇಳಿಕೆಯಿಂದ ದೂರ ಸರಿದಿದ್ದರು.

‘1984ರ ಸಿಕ್ಖ್ ವಿರೋಧಿ ಹಿಂಸೆ ಬಗ್ಗೆ ಸ್ಯಾಮ್‌ ಪಿತ್ರೋಡ ನೀಡಿದ್ದ ಹೇಳಿಕೆ ಸಂಪೂರ್ಣವಾಗಿ ತಪ್ಪು; ಅದಕ್ಕಾಗಿ ಅವರು (ಪಿತ್ರೋಡ) ದೇಶದ ಕ್ಷಮೆಯಾಚಿಸಬೇಕು; ನಾನಿದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದೇನೆ; ಅವರಿಗೆ ಫೋನ್‌ ಮೂಲಕ ಈಗಾಗಲೇ ನಾನಿದನ್ನು ಹೇಳಿದ್ದೇನೆ. ಪಿತ್ರೋಡ ಜೀ, ನೀವು ಹೇಳಿರುವುದು ಸಂಪೂರ್ಣ ತಪ್ಪು; ಆ ಬಗ್ಗೆ ನಿಮಗೆ ನಾಚಿಕೆಯಾಗಬೇಕು; ಅದಕ್ಕಾಗಿ ನೀವು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂದು ರಾಹುಲ್‌ ಗಾಂಧಿ ಇಂದಿಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದ ಕೊನೆಯಲ್ಲಿ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ