ಅತ್ಯಾಚಾರ, ಬ್ಲಾಕ್‌ ಮೇಲ್‌ ಕೇಸ್‌ : ನಟ ಕರಣ್‌ ಒಬೆರಾಯ್‌ಗೆ 14 ದಿನ ನ್ಯಾಯಾಂಗ ಕಸ್ಟಡಿ

Team Udayavani, May 9, 2019, 7:02 PM IST

ಮುಂಬಯಿ : ‘ಟಿವಿ ನಟ ಕರಣ್‌ ಒಬೆರಾಯ್‌ ವಿರುದ್ಧದ ಅತ್ಯಾಚಾರ ಮತ್ತು ಬ್ಲಾಕ್‌ ಮೇಲ್‌ ಕೇಸು ಫೇಕ್‌ ಆಗಿದ್ದು ಜೈಲು ಪಾಲಾಗಿರುವ ಆತ ಬೇಗನೆ ಬೇಲ್‌ ನಲ್ಲಿ ಬಿಡುಗಡೆಯಾಗಲಿದ್ದಾರೆ’ ಎಂದು ಆತನ ಗೆಳತಿ, ನಟಿ ಮತ್ತು ಅಂಕಣಕಾರ್ತಿ ಪೂಜಾ ಬೇಡಿ ಹೇಳಿದ್ದಾರೆ.

40 ವರ್ಷ ಪ್ರಾಯದ ಕರಣ್‌ ಒಬೆರಾಯ್‌ ಅವರನ್ನು ಮುಂಬಯಿ ಕೋರ್ಟ್‌ ಇಂದು ಗುರುವಾರ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.

ಈ ಪ್ರಕರಣದಲ್ಲಿ ಕೋರ್ಟ್‌ ನಿರ್ಧಾರವು ಮೊದಲ ಧನಾತ್ಮಕ ಹೆಜ್ಜೆಯಾಗಿದ್ದು ಆತನ ಈಗ ಜಾಮೀನು ಬಿಡುಗಡೆ ಕೋರಿ ಅರ್ಜಿ ಹಾಕಬಹುದಾಗಿದೆ ಎಂದು ಬೇಡಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ