ಉಗ್ರರಿಗೆ ಸೇನೆಯ ಶ್ವಾನಭಯ: “ರಫ್ಲಿಂಗ್‌ ರೋಶ್‌’ಗೆ ಬೆಚ್ಚಿ ಬೀಳುವ ಉಗ್ರರು

Team Udayavani, Oct 5, 2020, 7:28 AM IST

ಉಗ್ರರಿಗೆ ಸೇನೆಯ ಶ್ವಾನಭಯ: “ರಫ್ಲಿಂಗ್‌ ರೋಶ್‌’ಗೆ ಬೆಚ್ಚಿ ಬೀಳುವ ಉಗ್ರರು

ಶ್ರೀನಗರ: ಕಣಿವೆ ರಾಜ್ಯದಲ್ಲಿ ಯೋಧರ ಬಂದೂಕು ಗುಡುಗಿದರಷ್ಟೇ ಉಗ್ರರ ಎದೆ ನಡುಗುವುದಿಲ್ಲ. ಭದ್ರತಾ ಪಡೆಯ ಶ್ವಾನ ಬೊಗಳಿದರೂ ಪಾತಕಿಗಳ ಜೀವ ಮೇಲೆ ಕೆಳಗಾಗುತ್ತದೆ!

ಹೌದು, ಉಗ್ರರ ದಮನಕ್ಕಾಗಿಯೇ ಮೀಸಲಾಗಿರುವ “44 ರಾಷ್ಟ್ರೀಯ ರೈಫ‌ಲ್ಸ್‌’ ಪಡೆಯಲ್ಲಿ 6 ಶ್ವಾನಗಳು ಕೂಡ ಹೀರೋ! ಸಾಕಷ್ಟು ಬಾರಿ ಉಗ್ರರ ಮೈಚಳಿ ಬಿಡಿಸಿದ್ದಲ್ಲದೆ, ಹಲವು ಅಪಾಯಗಳನ್ನು ತಪ್ಪಿಸಿವೆ.

ಅದರಲ್ಲೂ ರೋಶ್‌, ತಾಪಿ ಮತ್ತು ಕ್ಲೈಡ್‌ ಶ್ವಾನಗಳು ದಕ್ಷಿಣ ಕಾಶ್ಮೀರದ ಅತಿಸೂಕ್ಷ್ಮ ಪ್ರದೇಶದ ಗಸ್ತು ಹೊಣೆ ಹೊತ್ತಿವೆ. ಪುಲ್ವಾ ಮಾದ ಲಸ್ಸಿಪುರ, ಇಮಾಮ್‌ ಸಾಹೇಬ್‌, ಶೋಪಿಯಾನ್‌ ಪಟ್ಟಣಗಳನ್ನು ಕಣ್ಣಲ್ಲಿ ಕಣ್ಣಿಟ್ಟು ರಕ್ಷಿಸುತ್ತಿರೋದು ಇದೇ ಶ್ವಾನಗಳು. ಸುಧಾರಿತ ಸ್ಫೋಟಕಗಳ ಪತ್ತೆ, ಉಗ್ರರ ಶೋಧದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ.

ರೋಶ್‌ ಎಂಬ ಹೀರೋ: “2 ವರ್ಷದ ರಫ್ಲಿಂಗ್‌ ರೋಶ್‌ ಶ್ವಾನ ನಮ್ಮ ಪಡೆಯ ಸೆಲೆಬ್ರಿಟಿ’ ಅಂತಾರೆ 44 ರಾಷ್ಟ್ರೀಯ ರೈಫ‌ಲ್ಸ್‌ ಮುಖ್ಯಸ್ಥ ಕ್ಯಾ| ಎ.ಕೆ. ಸಿಂಗ್‌. “ಕಳೆದ ವರ್ಷ ಎನ್‌ಕೌಂಟರ್‌ ನಡೆದ ಸ್ಥಳದಿಂದ 1.5 ಕಿ.ಮೀ. ದೂರದಲ್ಲಿ ಅವಿತಿದ್ದ ಹಿಜ್ಬುಲ್‌ ಮುಜಾ ಹಿದೀನ್‌ ಉಗ್ರನನ್ನು ರೋಶ್‌ ಜೀವಂತವಾಗಿ ಹಿಡಿದು ಕೊಟ್ಟಿತ್ತು. ಶೋಪಿಯನ್‌ನ ದ್ರಾಗರ್‌ ಹಳ್ಳಿಯಲ್ಲಿದ್ದ ಉಗ್ರರ ಅಡಗುತಾಣವನ್ನೂ ಪತ್ತೆಹಚ್ಚಿತ್ತು’ ಎಂದು ಸಿಂಗ್‌ ಹೇಳಿದ್ದಾರೆ.

ಕಾಡಿನಲ್ಲೂ ನಿಸ್ಸೀಮ: “ಸೇಬು ತೋಟಗಳಲ್ಲಿ, ದಟ್ಟ ಕಾಡಿನಲ್ಲಿ ಅಡಗಿ ಕುಳಿತ ಉಗ್ರರನ್ನು ಶೋಧಿಸುವಲ್ಲಿ ರೋಶ್‌ ನಿಸ್ಸೀಮ. ನಿಷೇಧಿತ ಹಿಜ್ಬುಲ್‌ ಸಂಘಟನೆ ಕಮಾಂಡರ್‌ ಆಬಿದ್‌ ಮನ್ಸೂರ್‌ ಮಾಗ್ರೇಯನ್ನೂ ಇದೇ ಶ್ವಾನ ಹಿಡಿದುಕೊಟ್ಟಿತ್ತು’ ಎಂದು ಶ್ಲಾಘಿಸಿದ್ದಾರೆ. ರೋಶ್‌ ಜತೆಗಿರುವ ಐದು ಶ್ವಾನಗಳೂ ವಿವಿಧ ಕಾರ್ಯಾಚರಣೆಗಳಲ್ಲಿ ದಿಟ್ಟ ಪಾತ್ರ ವಹಿಸಿ, ಸೇನಾ ಪದಕಗಳನ್ನು ಪಡೆದಿವೆ. “44 ರಾಷ್ಟ್ರೀಯ ರೈಫ‌ಲ್ಸ್‌’ ಪಡೆಗೆ ನಿಯೋಜನೆ ಗೊಂಡಿದ್ದ ಮೊದಲ ಶ್ವಾನ “ಮಾನ್ಸಿ’. ಅದರ ತ್ಯಾಗದ ವಿವರಗಳು “ಗೆಜೆಟ್‌ ಆಫ್ ಇಂಡಿಯಾ’ದಲ್ಲಿ ಉಲ್ಲೇಖವಾಗಿದೆ.

“ವರ್ಚುವಲ್‌ ಸಿಮ್‌’ ತಲೆನೋವು: ಕಾಶ್ಮೀರದಲ್ಲಿ ಭದ್ರತಾ ಪಡೆಗೆ ಈಗ ವರ್ಚುವಲ್‌ ಸಿಮ್‌ಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ. 2019ರಲ್ಲಿ ಪುಲ್ವಾಮಾ ದಾಳಿಗೆ ಜೆಇಎಂ ಉಗ್ರ ಸಂಘಟನೆ 40ಕ್ಕೂ ಅಧಿಕ ವರ್ಚುವಲ್‌ ಸಿಮ್‌ಗಳನ್ನು ಬಳಸಿ ಕೃತ್ಯ ಎಸಗಿದ್ದ ವಿಚಾರ ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇಂಥದ್ದೇ ಸಿಮ್‌ಗಳನ್ನು ಈಗ ಗಡಿಯುದ್ದಕ್ಕೂ ಉಗ್ರರು ಬಳಸುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ವಿದೇಶಿ ನೆಟ್‌ವರ್ಕ್‌ ಸಂಸ್ಥೆಗಳು ವರ್ಚುವಲ್‌ ಸಿಮ್‌ಗಳನ್ನು ಪೂರೈಸುತ್ತವೆ. ಇವು ಮಾಮೂಲಿ ಸಿಮ್‌ಗಳಲ್ಲ. ಕಂಪ್ಯೂಟರ್‌ ಮೂಲಕ ಒಂದು ದೂರವಾಣಿ ಸಂಖ್ಯೆ ರಚಿಸಿ, ನಿರ್ದಿಷ್ಟ ಆ್ಯಪ್‌ ಡೌನ್‌ಲೋಡ್‌ ಮಾಡಿ ಕೊಂಡು ಇದನ್ನು ನಿರ್ವಹಿಸಲಾಗುತ್ತದೆ. ಈ ನಂಬರ್‌ ಮೂಲಕ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌, ಟೆಲಿಗ್ರಾಂನಂಥ ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು.

ಟಾಪ್ ನ್ಯೂಸ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Haveri: ಲೋಕಸಭಾ ಚುನಾವಣೆ… ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

12

The Family Man 3: ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farooq Abdullah

ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

Delhi Police has busted a fake spice racket at Karawal Nagar

Delhi Police; ಮರದ ಪುಡಿ, ಕೆಮಿಕಲ್ ಬಳಸಿ ಮಸಾಲೆ ಪದಾರ್ಥ ತಯಾರು; ಮೂವರ ಬಂಧನ

Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!

Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Israel War- ಭೂ ದಾಳಿಗೂ ಮುನ್ನ ರಾಫಾದಿಂದ 1 ಲಕ್ಷ ಜನರ ಸ್ಥಳಾಂತರ: WHO

Casino Financial Institution Repayment Methods: A Comprehensive Guide

How to Play Roulette Free Online

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.