ಭಾರತದಲ್ಲೂ ಬುರ್ಖಾ ನಿಷೇಧಕ್ಕೆ ಪ್ರಧಾನಿ ನಿರ್ಧಾರ ಕೈಗೊಳ್ಳಲಿ: ಶಿವಸೇನೆ
Team Udayavani, May 1, 2019, 12:09 PM IST
ಮುಂಬಯಿ: ಈಸ್ಟರ್ ಸಂಡೇ ದುರಂತದ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೂಪದ ಬುರ್ಖಾ ಧರಿಸುವುದಕ್ಕೆ ಶ್ರೀಲಂಕಾ ಸರಕಾರ ನಿಷೇಧ ಹೇರಿದಂತೆ ಭಾರತದಲ್ಲೂ ಕಾನೂನು ಜಾರಿಯಾಗಬೇಕು ಎಂದು ಶಿವಸೇನೆ ಆಗ್ರಹಿಸಿದೆ.
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಫ್ರಾನ್ಸ್ , ಶ್ರೀಲಂಕಾ ಸರಕಾರಗಳು ಭದ್ರತೆ ದೃಷ್ಟಿಯಿಂದ ಬುರ್ಖಾ ನಿಷೇಧಿಸಿರುವುದನ್ನು ಉಲ್ಲೇಖ ಮಾಡಿ ಭಾರತದಲ್ಲೂ ಇದು ಜಾರಿಯಾಗಬೇಕು ಎಂದು ಬರೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮಾದರಿಯಲ್ಲಿ ಬುರ್ಖಾ ನಿಷೇಧದ ಬಗ್ಗೆ ದೊಡ್ಡ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ ಎಂದು ಬರೆಯಲಾಗಿದೆ.
ಶ್ರೀಲಂಕಾದಲ್ಲಿ ಮುಖದ ಗುರುತನ್ನು ಮರೆಮಾಚುವ ಯಾವುದೇ ಬಟ್ಟೆಯನ್ನು ಧರಿಸುವುದೂ ನಿಷೇಧವಾಗಿದೆ. ದೇಶದ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!