ಪ್ಲಾಸ್ಟಿಕ್ಗೆ ಪರ್ಯಾಯ ಬಿದಿರಿನ ನೀರಿನ ಬಾಟಲ್!
Team Udayavani, Mar 2, 2020, 11:05 AM IST
ಗ್ಯಾಂಗ್ಟಕ್: ಅಪಾಯಕಾರಿ ಪ್ಲಾಸ್ಟಿಕ್ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಅರಿತು ಎಂಟು ವರ್ಷಗಳ ಹಿಂದೆ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಿದ್ದ ಸಿಕ್ಕಿಂ ರಾಜ್ಯದ ಪುಟ್ಟ ಹಳ್ಳಿ ಇದೀಗ ಪರಿಸರ ಕಾಳಜಿಯತ್ತ ಮತ್ತೂಂದು ಹೆಜ್ಜೆ ಇರಿಸಿದೆ.
2011ರಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ ಬಳಿಕ ಲಾಚೆನ್ ಗ್ರಾಮದಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಬರುವ ನೀರಿನ ಬಳಕೆಯನ್ನೂ ಸಂಪೂರ್ಣವಾಗಿ ಕೈಬಿಡಲಾಗಿತ್ತು. ಈಗ ಪ್ಲಾಸ್ಟಿಕ್ ಬಾಟಲಿಗಳಿಗೆ ಪರ್ಯಾಯವಾಗಿ ಬಿದಿರಿನ ಬಾಟಲಿಗಳನ್ನು ಬಳಸಲು ಲಾಚೆನ್ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ನಿರ್ಧರಿಸಿದೆ.
ಗ್ರಾಮಸ್ಥರಿಗೆ ಅಗತ್ಯ ವಿರುವ ಪರಿಸರಸ್ನೇಹಿ ಬಿದಿರಿನ ಬಾಟಲಿಗಳನ್ನು ಅಸ್ಸಾಂನಿಂದ ತರಿಸಿಕೊಳ್ಳಲಾಗುತ್ತಿದೆ. ಸಿಕ್ಕಿಂನ ರಾಜ್ಯಸಭಾ ಸದಸ್ಯ ಹಿಶೆತ್ ಲಾಚುಂಗುಪಾ ಅವರು ಅಸ್ಸಾಂನಿಂದ ಬಿದಿರಿನ ಬಾಟಲು ತಂದುಕೊಡುವ ಹೊಣೆ ಹೊತ್ತಿದ್ದಾರೆ.
ರಾಜಧಾನಿ ಗ್ಯಾಂಗ್ಟಕ್ನಿಂದ 129 ಕಿ.ಮೀ. ದೂರವಿರುವ ಲಾಚೆನ್, ತನ್ನ ಪ್ರಕೃತಿ ಸೌಂದರ್ಯದಿಂದಾಗಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಆದರೆ, ಪ್ರವಾಸಿಗರು ತರುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಇಲ್ಲಿನ ಪರಿಸರಕ್ಕೆ ಇನ್ನಿಲ್ಲದಂತೆ ಹಾನಿ ಮಾಡಿದ್ದವು.