ರಾಜ್ಯದ ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ಪ್ಯಾನ್‌ ಇಲ್ಲ

Team Udayavani, Feb 14, 2019, 12:30 AM IST

ಹೊಸದಿಲ್ಲಿ: ಕರ್ನಾಟಕವೂ ಸಹಿತ 12 ರಾಜ್ಯಗಳಲ್ಲಿ ಕಂಪೆನಿಗಳಲ್ಲಿರುವ ಶೇ.95ರಷ್ಟು ಸಂಸ್ಥೆಗಳು ತೆರಿಗೆ ವ್ಯಾಪ್ತಿಯಿಂದ ಹೊರತಾಗಿಯೇ ಇವೆ. ಅದನ್ನು ತಿಳಿದುಕೊಳ್ಳಲು ಇಲಾಖೆ ಬಳಿ ಯಾವುದೇ ವ್ಯವಸ್ಥೆ ಇಲ್ಲ ಎಂದು ಮಹಾಲೇಖಪಾಲ (ಸಿಎಜಿ)ರ ವರದಿ ತಿಳಿಸಿದೆ. ಕರ್ನಾಟಕದಲ್ಲಿ ಒಟ್ಟು, 3,048 ಸಂಸ್ಥೆಗಳು ಉದ್ದಿಮೆಯಲ್ಲಿ ತೊಡಗಿಸಿಕೊಂಡಿವೆ. ಈ ಪೈಕಿ 1,853ಗಳಿಗೆ ಪ್ಯಾನ್‌ ಸಂಖ್ಯೆ (ಶೇ. 60) ಹೊಂದಿಲ್ಲ.  ಕೇರಳದಲ್ಲಿ 1,787 ಸಂಸ್ಥೆಗಳು ಉದ್ದಿಮೆಯಲ್ಲಿ ತೊಡಗಿದ್ದು, 1,161 ಸಂಸ್ಥೆಗಳು ಪ್ಯಾನ್‌ (ಶೇ.65.8) ಹೊಂದಿಲ್ಲ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿರುವ ಈ ಕ್ಷೇತ್ರದ ಸಂಸ್ಥೆಗಳು ಶೇ.100ರಷ್ಟು ಪ್ಯಾನ್‌ ನಂಬರ್‌ ಹೊಂದಿಯೇ ಇಲ್ಲ.  

ಜತೆಗೆ ದೇಶದ ರಿಯಲ್‌ಎಸ್ಟೇಟ್‌ ವಲಯದಲ್ಲಿ ಕಾರ್ಯ ವೆಸಗುತ್ತಿರುವ ಕಂಪೆನಿಗಳ ಪೈಕಿ ಎಷ್ಟಕ್ಕೆ ಪ್ಯಾನ್‌ ಕಾರ್ಡ್‌ಗಳಿವೆ ಮತ್ತು  ಅವುಗಳ ಪೈಕಿ ಎಷ್ಟು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುತ್ತವೆ ಎಂದು ಕೇಳಿದೆ. “ಪರಿಶೀಲನೆ ಮಾಡಿದ 78,647 ಅಸೆಸ್‌ಮೆಂಟ್‌ಗಳ ಪೈಕಿ 17,155 ದಾಖಲೆಗಳು 1,02,106 ಕೋಟಿ ರೂ.ಆದಾಯ ತೋರಿಸಿವೆ’ ಎಂದಿದೆ ವರದಿ. ಈ ಬಗ್ಗೆ ರಿಜಿಸ್ಟ್ರಾರ್‌ ಆಫ್ ಕಂಪೆನೀಸ್‌ ಗೆ ಕೂಡ ಮಾಹಿತಿ ಇಲ್ಲ.
 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ