ವಿಶಿಷ್ಟ ಆರೋಗ್ಯ ಖಾತೆಗೆ ಆಭಾ ಎಂದು ನಾಮಕರಣ?
Team Udayavani, Jan 11, 2022, 6:10 AM IST
ಹೊಸದಿಲ್ಲಿ: ಪ್ರತಿಯೊಬ್ಬ ಭಾರತೀಯನಿಗೂ 14 ಅಂಕಿಗಳ ವಿಶಿಷ್ಟ ಆರೋಗ್ಯ ಗುರುತಿನ ಸಂಖ್ಯೆ ನೀಡುವ ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಯೋಜನೆಗೆ “ಆರೋಗ್ಯ ಭಾರತ ಆರೋಗ್ಯ ಖಾತೆ’ (ಆಭಾ) ಎಂದು ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ.
ಈ ಬಗ್ಗೆ ಜ.26ರಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡುವ ಸಾಧ್ಯತೆಗಳಿವೆ. ದೇಶದ ಎಲ್ಲ ಜನರಿಗೂ ಆರೋಗ್ಯ ಖಾತೆ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ.
ಈ ಖಾತೆ ಹೊಂದಿದ್ದರೆ, ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ, ನಿಮ್ಮ ಸಂಪೂರ್ಣ ಆರೋಗ್ಯ ಮಾಹಿತಿಯು ಡಿಜಿಟಲ್ ಹೆಲ್ತ್ ರೆಕಾರ್ಡ್‌ನಲ್ಲಿ ದಾಖಲಾಗಿರುತ್ತದೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ : ದೀಪಕ್ ಕೊಚ್ಚರ್‌ಗೆ ಸುಪ್ರೀಂ ರಿಲೀಫ್
ಇದರಿಂದಾಗಿ ಬೇರೆ ಆಸ್ಪತ್ರೆಯ ವೈದ್ಯರಿಗೂ, ನಿಮಗಿರುವ ಅಥವಾ ಇದ್ದ ಕಾಯಿಲೆ, ಅದಕ್ಕೆ ನೀಡಲಾಗಿದ್ದ ಚಿಕಿತ್ಸೆಯ ವಿವರಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ.
2020ರಲ್ಲಿ ಈ ಯೋಜನೆ ಜಾರಿಯಾದ ಬಳಿಕ ಇದುವರೆಗೆ 15 ಕೋಟಿ ಆರೋಗ್ಯ ಗುರುತಿನ ಸಂಖ್ಯೆ ನೀಡಲಾಗಿದೆ. ಜತೆಗೆ 15 ಸಾವಿರ ಆರೋಗ್ಯ ಕೇಂದ್ರಗಳನ್ನು ಈ ಯೋಜನೆ ವ್ಯಾಪ್ತಿಗೆ ತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್: ವಿದ್ಯಾರ್ಥಿನಿಯರಿಗೆ ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ಕಾಂಗ್ರೆಸ್ ಆಕ್ಷೇಪ
ಜೆಟ್ಏರ್ ವೇಸ್ಗೆ ವಿಮಾನ ಯಾರು ಕೊಡ್ತಾರೆ?
ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ
ನನ್ನ ಕೇಸಲ್ಲೂ ಸುಳ್ಳು ಹೇಳಿದ್ದ ಶ್ರೀಕುಮಾರ್: ನಂಬಿ ನಾರಾಯಣನ್
ಮುರುಘರಾಜೇಂದ್ರ ಶ್ರೀ ಗಳ 50ನೇ ಹುಟ್ಟುಹಬ್ಬ :ಬೈನಾ ಕನ್ನಡ ವಿದ್ಯಾರ್ಥಿಗಳಿಗೆ ನೆರವು