ಕಮಲ ಹ್ಯಾರಿಸ್ ಗೆ ಕೊಲೆ ಬೆದರಿಗೆ : ಮಹಿಳೆ ಬಂಧನ
Team Udayavani, Apr 17, 2021, 10:15 PM IST
ನವದೆಹಲಿ : ಅಮೆರಿಕಾದ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಫ್ಲೋರಿಡಾದ ನಿವಿಯೆನ್ ಪೆಟಿಟ್ ಫೆಲ್ಪ್ಸ್ ಎಂಬುವವರನ್ನು ಬಂಧಿಸಲಾಗಿದೆ.
ನಿವಿಯೆನ್ ಪೆಟಿಟ್ ಫೆಲ್ಪ್ಸ್ ಜಾಕ್ಸನ್ ಹೆಲ್ತ್ ಸಿಸ್ಟಂನಲ್ಲಿ 2001 ರಿಂದಲೂ ಕೆಲಸ ಮಾಡುತ್ತಿದ್ದರು. ಇವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಆ ದೂರಿನಲ್ಲಿ ಕಮಲ ಹ್ಯಾರಿಸ್ ಅವರನ್ನು ಫೆ. 13 ರಿಂದ ಫೆ. 18 ರ ಒಳಗಾಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಸಿದ್ದಾರೆ.
ನಿವಿಯೆನ್ ಪೆಟಿಟ್ ಫೆಲ್ಪ್ಸ್ ಜೈಲಿನಲ್ಲಿದ್ದ ತನ್ನ ಪತಿಗೆ ವಿಡಿಯೋ ಕಳುಹಿಸಿದ್ದಾಳೆ ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಮಹಿಳೆಯು ಕೋಪದಿಂದ ಮಾತನಾಡಿದ್ದು, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಕಮಲ ಹ್ಯಾರಿಸ್ ಬಗ್ಗೆ ಕೋಪದಿಂದ ಮಾತನಾಡಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.
ಒಂದು ವಿಡಿಯೋ ತುಣುಕಿನಲ್ಲಿ ಮಹಿಳೆಯು ಕಮಲ ಹ್ಯಾರಿಸ್ ಕುರಿತು ಮಾತನಾಡಿದ್ದು ಅದರಲ್ಲಿ ‘ಕಮಲ ಹ್ಯಾರಿಸ್ ನೀವು ಸಾಯುವಿರಿ, ಈಗಾಗಲೇ ನಿಮ್ಮ ಸಾವಿನ ದಿನಾಂಕ ನಿಗದಿಯಾಗಿದೆ’ ಎಂದು ಹೇಳಿರುವ ವಿಡಿಯೋ ಕೂಡಾ ಅಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್