ಎಂವಿಎ ಸರಕಾರ ಸ್ಥಿರವಾಗಿ ನಡೆಯುತ್ತಿದೆ: ಜಯಂತ್ ಪಾಟೀಲ್
Team Udayavani, May 30, 2021, 1:03 PM IST
ಮುಂಬಯಿ: ಎಲ್ಲರೂ ನಿರೀಕ್ಷೆಯಲ್ಲಿರುವಾಗ ಮಹಾ ವಿಕಾಸ್ ಅಘಾಡಿ ಸರಕಾರ ಬೀಳಲಿದೆ ಎಂಬ ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಗೆ ರಾಜ್ಯ ಎನ್‌ಸಿಪಿ ಮುಖ್ಯಸ್ಥ ಮತ್ತು ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ವಾಗ್ಧಾಳಿ ನಡೆಸಿದ್ದು, ಚಂದ್ರಕಾಂತ್ ಪಾಟೀಲ್ ಅವರಿಗೆ ಕನಸು ಕಾಣುವ ಹವ್ಯಾಸವಿದ್ದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಎಂವಿಎ ಸರಕಾರ ಸುಗಮವಾಗಿ ನಡೆಯುತ್ತಿದೆ, ಅದು ಸ್ಥಿರವಾಗಿದೆ ಮತ್ತು ಮೂವರು ಪಾಲುದಾರ ರೊಂದಿಗೆ ಎಲ್ಲವೂ ಚೆನ್ನಾಗಿದೆ ಎಂದು ಜಯಂತ್ ಪಾಟೀಲ್‌ಹೇಳಿದರು. ಕೊರೊನಾ ಸೋಂಕು, ಮರಾಠಾ ಕೋಟಾ ಮತ್ತು ಭ್ರಷ್ಟಾಚಾರವನ್ನು ನಿಭಾಯಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಜ್ಯ ಬಿಜೆಪಿ ಮುಖ್ಯಸ್ಥರು ಎಂವಿಎ ಸರಕಾರದ ವಿರುದ್ಧ ಆಪಾಧಿಸುತ್ತಿದ್ದಾರೆ. ಎಂವಿಎ ಸರಕಾರ ಬೀಳಲಿದೆ ಎಂದು ಅವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ.
ಸರಕಾರವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಮುಖ್ಯಸ್ಥ ಪಾಟೀಲ್ ಹೇಳಿಕೆಯನ್ನು ಎನ್‌ಸಿಪಿ ಮುಖ್ಯಸ್ಥರು ಬಲವಾಗಿ ನಿರಾಕರಿಸಿದರು.ಮರಾಠಾ ಕೋಟಾವನ್ನು ಸುಪ್ರೀ ಕೋರ್ಟ್ ತಿಸ್ಕರಿಸಿದ ಅನಂತರ ಈ ಕುರಿತು ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ರಾಜ್ಯ ಬಿಜೆಪಿ ಮುಖ್ಯಸ್ಥರು ಬೇಡಿಕೆ ಇರಿಸಿದ್ದು, ಎನ್‌ಸಿಪಿಸಚಿವರು 2ನೇ ಅಲೆ ಮತ್ತು ಕೋವಿಡ್ 3ನೇ ಅಲೆದೃಷ್ಟಿಯಿಂದ,
ರಾಜ್ಯವು ಶಾಸಕಾಂಗದ ವಿಶೇಷ ಅಧಿ ವೇಶನವನ್ನು ಕರೆಯಲು ಸಾಧ್ಯವಿಲ್ಲ ಎಂದಿದ್ದಾರೆ.ಲಾಕ್‌ಡೌನ್ ವಿಸ್ತರಣೆ ಮತ್ತು ಸಡಿಲಿಕೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೊರೊನಾ ಪಾಸಿಟಿವಿಟಿ ದರ ಕುಸಿದಿದ್ದರೂ, ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಎನ್‌ಸಿಪಿ ಸಚಿವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಟ್ವಾಳ : ಭಾರಿ ಮಳೆಗೆ ಮನೆಯ ಮೇಲೆ ಕುಸಿದ ಗುಡ್ಡ : ಓರ್ವನ ರಕ್ಷಣೆ, ಮೂವರಿಗಾಗಿ ಶೋಧ
ಮುದ್ದೇಬಿಹಾಳ: ಶಿಕ್ಷಕನ ಮೇಲೆ ವಿದ್ಯಾರ್ಥಿನಿಯ ಪೋಷಕರಿಂದ ಗಂಭೀರ ಹಲ್ಲೆ : ಪ್ರಕರಣ ದಾಖಲು
ಡಾ.ಹೆಗ್ಗಡೆ ನಾಮನಿರ್ದೇಶನ ರಾಜ್ಯಕ್ಕೆ ಸಂದ ಗೌರವ : ಸಚಿವ ವಿ.ಸುನೀಲ್ ಕುಮಾರ್
ದಯಾನಿಧಿ ಉಚ್ಚಾಟನೆ ಖಂಡಿಸಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಮೋಂಬತ್ತಿ ಮೆರವಣಿಗೆ
ವೀರೇಂದ್ರ ಹೆಗ್ಗಡೆ, ಇಳಯರಾಜ,ವಿಜಯೇಂದ್ರ ಪ್ರಸಾದ್, ಪಿಟಿ ಉಷಾ, ರಾಜ್ಯಸಭೆಗೆ ನಾಮನಿರ್ದೇಶನ