ಹೇಳಿದ್ದು 20 ಸಾವಿರ; ಬಂದದ್ದು ಕೇವಲ 700 ವೈದ್ಯರು

ವೈದ್ಯರ ಕೊರತೆಯನ್ನು ಎದುರಿಸುತ್ತಿರುವ ಕೋವಿಡ್‌-19 ಸೆಂಟರ್‌ಗಳು

Team Udayavani, Jun 18, 2020, 10:19 AM IST

ಹೇಳಿದ್ದು 20 ಸಾವಿರ; ಬಂದದ್ದು ಕೇವಲ 700 ವೈದ್ಯರು

ಮುಂಬಯಿ: ರಾಜ್ಯದಲ್ಲಿ ಒಂದೆಡೆ ಕೋವಿಡ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇನ್ನೊಂದೆಡೆ ಕೋವಿಡ್‌-19 ಆರೈಕೆ ಕೇಂದ್ರಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಈ ಮಧ್ಯೆ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯ (ಡಿಎಂಇಆರ್‌) ಮೇ ತಿಂಗಳಲ್ಲಿ ಕರ್ತವ್ಯಕ್ಕಾಗಿ ವೈದ್ಯರು ವರದಿ ಮಾಡಬೇಕೆಂಬ ಆದೇಶಕ್ಕೆ 20,000 ವೈದ್ಯರು ಪ್ರತಿಕ್ರಿಯಿಸಿದ್ದು, ಇಲ್ಲಿಯವರೆಗೆ ಕೇವಲ 700 ಮಂದಿ ವೈದ್ಯರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಮೂಲಗಳು ತಿಳಿಸಿವೆ.

ಗೈರು ಹಾಜರಾದರೆ ಕ್ರಮ
ಮೇ 4 ರಂದು ಡಿಎಂಇಆರ್‌ ನಗರದ 25 ಸಾವಿರ ನೋಂದಾಯಿತ ವೈದ್ಯರನ್ನು 15 ದಿನಗಳ ಕಡ್ಡಾಯ ಕೋವಿಡ್‌-19 ಕರ್ತವ್ಯಕ್ಕಾಗಿ ವರದಿ ಮಾಡುವಂತೆ ಸುತ್ತೋಲೆ ಹೊರಡಿಸಿತ್ತು. ಒಂದು ವೇಳೆ ಗೈರು ಹಾಜರಾದರೆ ವೈದ್ಯಕೀಯ ಕೌನ್ಸಿಲ್‌ ಆಫ್ ಇಂಡಿಯಾ ಕೋಡ್‌ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದು ವೈದ್ಯರ ಪರವಾನಗಿಯನ್ನು ಅಮಾನತುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು ಎಂದು ಆದೇಶಿಸಲಾಗಿತ್ತು. ಸುತ್ತೋಲೆಗೆ ಪ್ರತಿಕ್ರಿಯಿಸಿದ 20, 000 ನೋಂದಾಯಿತ ವೈದ್ಯರಲ್ಲಿ, ಡಿಎಂಇಆರ್‌ 4,246 ಜನರನ್ನು ಆಯ್ಕೆ ಮಾಡಿ ಈ ಪಟ್ಟಿಯ ನ್ನು ತಪಾಸಣೆಗಾಗಿ ಬಿಎಂಸಿಗೆ ಕಳುಹಿಸಿದೆ. ಕೋವಿಡ್‌ ಕರ್ತವ್ಯಕ್ಕಾಗಿ ಡಿಎಂಇಆರ್‌ 55 ವರ್ಷಕ್ಕಿಂತ ಮೇಲ್ಪಟ್ಟ ವೈದ್ಯರನ್ನು ಅನರ್ಹಗೊಳಿ ಸುವುದರಿಂದ ಶಾರ್ಟ್‌ಲಿಸ್ಟ್‌ ಮಾಡಿದ ವೈದ್ಯರು 25ರಿಂದ 45 ವರ್ಷ ವಯಸ್ಸಿನವರಾಗಿದ್ದರು.

ಸರಕಾರಿ ವೈದ್ಯರಿಗೆ ವಿನಾಯಿತಿ
ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ನಡೆಸುವ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ವಿನಾಯಿತಿ ನೀಡಲಾಗಿತ್ತು. ಈಗಾಗಲೇ ಆಸ್ಪತ್ರೆಗಳಲ್ಲಿ ಅಭ್ಯಾಸ ಮಾಡುತ್ತಿದ್ದ ವೈದ್ಯರಿಗೂ ವಿನಾಯಿತಿ ನೀಡಲಾಗಿದೆ. ಶಾರ್ಟ್‌ಲಿಸ್ಟ್‌ ಮಾಡಿದ ವೈದ್ಯರನ್ನು ಪರೀಕ್ಷಿಸಿದ ಅನಂತರ ಬಿಎಂಸಿ 700 ವೈದ್ಯರು ಮಾತ್ರ ಲಭ್ಯವಿರುವುದು ಎಂದು ತಿಳಿಸಿದೆ. ಹೆಚ್ಚಿನ ವೈದ್ಯರು ಭಾರತದ ಹೊರಗಿದ್ದಾರೆ. ಮುಂಬಯಿಯಲ್ಲಿ ನಾವು ಅವರನ್ನು ಕೋವಿಡ್‌ ಡ್ನೂಟಿಗೆ ನಿಯೋಜಿಸುವುದು ಹೇಗೆ? ಅಲ್ಲದೆ ಅನೇಕ ವೈದ್ಯರು ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅಲ್ಲೇ ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಿದ್ದೇವೆ. ಕೋವಿಡ್‌ ಅಲ್ಲದ ವೈದ್ಯರ ಅವಶ್ಯಕತೆಯೂ ನಮಗಿದೆ. ಚಿಕಿತ್ಸಾಲಯಗಳನ್ನು ನಡೆಸುವ ಸಾಮಾನ್ಯ ವೈದ್ಯರು ನಮಗೆ ಬೇಕಾಗಿದ್ದಾರೆ ಎಂದು ಬಿಎಂಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಚಿಕಿತ್ಸಾಲಯಗಳ ವೈದ್ಯರ ಅಗತ್ಯತೆ
ಖಾಸಗಿ ಚಿಕಿತ್ಸಾಲಯಗಳನ್ನು ನಡೆಸುತ್ತಿರುವ ವೈದ್ಯರ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೂ, ಮಹಾರಾಷ್ಟ್ರ ವೈದ್ಯಕೀಯ ಮಂಡಳಿ ಅಂದಾಜಿನ ಪ್ರಕಾರ ಮುಂಬಯಿಯಲ್ಲಿ ಸುಮಾರು 5,000 ವೈದ್ಯರು ಲಭ್ಯವಿದ್ದಾರೆ, ಅವರು 55 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ನೋಟಿಸ್‌ ಮುಖ್ಯವಾಗಿ ಚಿಕಿತ್ಸಾಲಯಗಳನ್ನು ಹೊಂದಿರುವ ವೈದ್ಯರನ್ನು ಗುರಿಯಾಗಿರಿಸಿಕೊಂಡಿದೆ. ಅವರು ನಾಗರಿಕ ಆಸ್ಪತ್ರೆಗಳಲ್ಲಿ ಮತ್ತು ಅವರ ಚಿಕಿತ್ಸಾಲಯಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡಬಹುದು ಎಂದು ಎಂಎಂಸಿಯ ಅಧ್ಯಕ್ಷ ಡಾ| ಶಿವಕುಮಾರ್‌ ಉತ್ತೂರ್‌ ಹೇಳಿದ್ದಾರೆ, ವಿಶೇಷವೆಂದರೆ ನೋಂದಾಯಿತ ಸುಮಾರು ಶೇ. 5ರಷ್ಟು ಜನರು ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಸಕ್ರಿಯ ಕೋವಿಡ್‌ -19 ಪ್ರಕರಣಗಳ ಸಂಖ್ಯೆ ಏರುತ್ತಿರುವುದರಿಂದ, ಹೆಚ್ಚಿನ ವೈದ್ಯರು ತುರ್ತಾಗಿ ಅಗತ್ಯವಿದೆ ಎಂದು ಬಿಎಂಸಿ ಹೇಳಿದೆ. ವೈದ್ಯರ ಕೊರತೆಯನ್ನು ಪೂರೈಸಲು ನಮಗೆ ಶಾಶ್ವತ ಪರಿಹಾರ ಬೇಕು. ಪ್ರತಿ 15 ದಿನಗಳ ಅನಂತರ, ನಾವು ವೈದ್ಯರನ್ನು ಸ್ಕ್ಯಾನ್‌ ಮತ್ತು ಪರೀಕ್ಷೆಗೊಳಪಡಿಸುವ ಪ್ರಕ್ರಿಯೆಯ ಮೂಲಕ ಸಾಗುತ್ತಿ ದ್ದೇವೆ ಎಂದು ಬಿಎಂಸಿಯ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

ಟಾಪ್ ನ್ಯೂಸ್

4-letter-1

ಸತ್ತ 9 ವರ್ಷದ ಬಳಿಕ ತಂದೆ ಬರೆದ ಪತ್ರ ಪತ್ತೆ:ಮಕ್ಕಳಿಗೆ ಹೇಳಿದ ಸಂದೇಶವೇನು?; ಪೋಸ್ಟ್ ವೈರಲ್‌

ಚಿತ್ರ ವಿಮರ್ಶೆ: ಕೆಂಪು ಹಾದಿಯಲ್ಲಿ ಜಾನಕಿರಾಮ್‌ ಪ್ರೇಮ ಪ್ರಸಂಗ

ಚಿತ್ರ ವಿಮರ್ಶೆ: ಕೆಂಪು ಹಾದಿಯಲ್ಲಿ ಜಾನಕಿರಾಮ್‌ ಪ್ರೇಮ ಪ್ರಸಂಗ

ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ : ಜನಜೀವನ ಅಸ್ತವ್ಯಸ್ಥ, ರಕ್ಷಣಾ ಕಾರ್ಯ ಚುರುಕು

ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ : ಜನಜೀವನ ಅಸ್ತವ್ಯಸ್ಥ, ರಕ್ಷಣಾ ಕಾರ್ಯ ಚುರುಕು

3-egg

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ 9 ಮಂದಿ ಹಿಂದೂ ಕಾರ್ಯಕರ್ತರ ವಿರುದ್ದ ಎಫ್‌ಐಆರ್

ಶಾಲಾ ಬಸ್ -ಕ್ಯಾಂಟರ್ ಅಪಘಾತ :ಇಬ್ಬರು ಚಾಲಕರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಶಾಲಾ ಬಸ್ -ಕ್ಯಾಂಟರ್ ಅಪಘಾತ :ಇಬ್ಬರು ಚಾಲಕರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಭಲೇ ದ್ಯಾಮಣ್ಣ.. :1ಕ್ವಿಂಟಲ್ 53 ಕೆ.ಜಿ.ಭಾರ ಎತ್ತಿ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿದ ಯುವಕ

ಭಲೇ ದ್ಯಾಮಣ್ಣ.. :1ಕ್ವಿಂಟಲ್ 53 ಕೆ.ಜಿ.ಭಾರ ಎತ್ತಿ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿದ ಯುವಕ

2-car

ಲಾರಿಗೆ ಕಾರು ಢಿಕ್ಕಿ: ತಂದೆ, ಮಗಳು ಸಾವು; ಮಗು ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-1

ಬಂಟರ ಸಂಘ ಪೊವಾಯಿ ಎಸ್‌.ಎಂ. ಶೆಟ್ಟಿ  ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

ಸಾಧಿಸುವ ಛಲ ಬಂಟರಲ್ಲಿ  ರಕ್ತಗತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಾಧಿಸುವ ಛಲ ಬಂಟರಲ್ಲಿ ರಕ್ತಗತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಲೆ, ಸಾಹಿತ್ಯ, ಸಂಸ್ಕೃತಿ ಆರಾಧಕರಾಗೋಣ: ಜ್ಯೋತಿ ಪ್ರಕಾಶ್‌ ಕುಂಠಿನಿ

ಕಲೆ, ಸಾಹಿತ್ಯ, ಸಂಸ್ಕೃತಿ ಆರಾಧಕರಾಗೋಣ: ಜ್ಯೋತಿ ಪ್ರಕಾಶ್‌ ಕುಂಠಿನಿ

ಮುಂಬಯಿ ಕನ್ನಡ ಪತ್ರಿಕಾರಂಗದಲ್ಲಿ ಅಪೂರ್ವ ಕಾರ್ಯಕ್ರಮ: ಜ್ಯೋತಿ ಪ್ರಕಾಶ್‌ ಕುಂಠಿನಿ

ಮುಂಬಯಿ ಕನ್ನಡ ಪತ್ರಿಕಾರಂಗದಲ್ಲಿ ಅಪೂರ್ವ ಕಾರ್ಯಕ್ರಮ: ಜ್ಯೋತಿ ಪ್ರಕಾಶ್‌ ಕುಂಠಿನಿ

TDY-1

ದೇಶವನ್ನು ಕೃಷಿ ಪ್ರಧಾನ ರಾಷ್ಟ್ರವಾಗಿಸಿ ವಿಶ್ವಕ್ಕೆ ಮಾದರಿಯಾಗಿಸಬೇಕು: ಗೋಪಾಲ್‌ ಶೆಟ್ಟಿ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

7-telengana

ತೆಲಂಗಾಣಕ್ಕೆ ರಾಯಚೂರು ವಿಲೀನ ಹೇಳಿಕೆಗೆ ಆಕ್ರೋಶ

6award

ಛಾಯಾಗ್ರಹಣ ದಿನಾಚರಣೆ; ಪುರಸ್ಕೃತರಿಗೆ ಸನ್ಮಾನ

4-letter-1

ಸತ್ತ 9 ವರ್ಷದ ಬಳಿಕ ತಂದೆ ಬರೆದ ಪತ್ರ ಪತ್ತೆ:ಮಕ್ಕಳಿಗೆ ಹೇಳಿದ ಸಂದೇಶವೇನು?; ಪೋಸ್ಟ್ ವೈರಲ್‌

5photo-‘

ಛಾಯಾಗ್ರಾಹಕರಿಗೆ ಭದ್ರತೆ ಒದಗಿಸಿ: ತೇಗಲತಿಪ್ಪಿ

ಚಿತ್ರ ವಿಮರ್ಶೆ: ಕೆಂಪು ಹಾದಿಯಲ್ಲಿ ಜಾನಕಿರಾಮ್‌ ಪ್ರೇಮ ಪ್ರಸಂಗ

ಚಿತ್ರ ವಿಮರ್ಶೆ: ಕೆಂಪು ಹಾದಿಯಲ್ಲಿ ಜಾನಕಿರಾಮ್‌ ಪ್ರೇಮ ಪ್ರಸಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.