Udayavni Special

“ಧರ್ಮದಂತೆ ಕರ್ಮವೂ ಇದ್ದರೆ ಮಾತ್ರ ಜೀವನದಲ್ಲಿ ಆನಂದ’


Team Udayavani, Feb 13, 2021, 9:05 PM IST

“ಧರ್ಮದಂತೆ ಕರ್ಮವೂ ಇದ್ದರೆ ಮಾತ್ರ ಜೀವನದಲ್ಲಿ ಆನಂದ’

ನವಿಮುಂಬಯಿ: ಮನುಷ್ಯರು ಯಾವುದೇ ಧರ್ಮ ದವರಾದರೂ ಅವರ ಕರ್ತವ್ಯ, ಅವರ ಸಮಾಜಮುಖೀ ಕೆಲಸಗಳು ಅವರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ತರುವುದೇ ಹೊರತು, ಗಾಡಿ, ಬಂಗಲೆ, ಐಶ್ವರ್ಯ ಯಾವುದೂ ಅಲ್ಲ. ಮನುಷ್ಯನು ಪಾಪ ಮಾಡಿದರೂ ಅಂತರಂಗದ ಶುದ್ಧೀಕರಣ ಮಾಡದೆ ಗಂಗಾನದಿಯಲ್ಲಿ ಎಷ್ಟು ಮುಳುಗಿ ದರೂ ಮುಕ್ತಿ ಪ್ರಾಪ್ತಿಯಾಗದು ಎಂದು ನವಿ ಮುಂಬಯಿಯ ಮಾಜಿ ಉಸ್ತುವಾರಿ ಸಚಿವ, ಬಿಜೆಪಿ ಮುಖಂಡ ಗಣೇಶ್‌ ನಾಯ್ಕ್ ತಿಳಿಸಿದರು.

ಸೆಲ್ಯೂಟ್‌ ತಿರಂಗಾ ರಾಷ್ಟ್ರೀಯ ಸಂಸ್ಥೆಯ ಮಹಾರಾಷ್ಟ್ರ ಪ್ರದೇಶವು ಗಣರಾಜ್ಯೋತ್ಸವ ಅಂಗವಾಗಿ ನವಿಮುಂಬಯಿ ಕನ್ನಡ ಸಂಘ ವಾಶಿ ಇದರ ಎಂ. ಬಿ. ಕುಕ್ಯಾನ್‌ ಸಭಾಗೃಹದಲ್ಲಿ ಆಯೋಜಿಸಿದ್ದ ಯೋಧರ ಗೌರವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸೆಲ್ಯೂಟ್‌ ತಿರಂಗಾ ಸಂಸ್ಥೆಯು ದೇಶಕ್ಕೆ ಸೇವೆಗೈದ ನಿವೃತ್ತ ಭೂದಳ, ವಾಯುದಳ ಮತ್ತು ನೌಕಾದಳ ಜವಾನರನ್ನು ಗುರುತಿಸಿ ಸಮ್ಮಾನಿಸುವ ಕಾರ್ಯ ತನ್ನ ಕಾರ್ಯಕ್ಷೇತ್ರದಲ್ಲಿ, ರಾಜೇಶ್‌ ರಾಯ್‌ ಅವರ ನೇತೃತ್ವದಲ್ಲಿ ನಡೆಯುತ್ತಿರುವುದು ಬಹಳ ಶ್ಲಾಘನೀಯ. ತಮ್ಮಿಂದಾದಷ್ಟು ಪರೋಪಕಾರ, ದೇಶ ಸೇವೆ ಮಾಡುವುದೇ ಸರ್ವೋತ್ಕೃಷ್ಟ ಧರ್ಮವಾಗಿದೆ ಎಂದರು.

ಈ ಕಾರ್ಯಕ್ರಮವನ್ನು ಸಂಸ್ಥೆಯ ಮಹಾರಾಷ್ಟ್ರ ಅಧ್ಯಕ್ಷ ರಾಜೇಶ್‌ ರಾಯ್‌ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಕರ್ನಾಟಕ, ತಮಿಳುನಾಡು, ಕೇರಳ ಘಟನೆಗಳು ಸಹಕಾರ ನೀಡಿದವು. ಈ ಸಂದರ್ಭದಲ್ಲಿ ನಿವೃತ್ತ ಕರ್ನಲ್‌ ಆರ್‌. ವಿ. ರಮಣ್‌, ನಿವೃತ್ತ ಸೇನಾನಿ ಗೋವಿಂದ್‌ ಮೋಹಿತೆ ಮತ್ತು ನಿವೃತ್ತ ಮಹಿಳಾ ಪೊಲೀಸ್‌ ಅಧಿಕಾರಿ ರಾಜಶ್ರೀ ಗೋರೆ ಅವರನ್ನು ಗಣೇಶ್‌ ನಾಯ್ಕ್ ಅವರ ಹಸ್ತದಿಂದ ವಿಶೇಷವಾಗಿ ಗೌರವಿಸಲಾಯಿತು. ಸೆಲ್ಯೂಟ್‌ ತಿರಂಗದ ಪದಾಧಿ ಕಾರಿಗಳನ್ನೂ ಗೌರವಿಸಲಾಯಿತು. ಪ್ರಾರಂಭದಲ್ಲಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಕರ್ನಾಟಕ ಘಟಕದ ಮಹಿಳಾ ಸದಸ್ಯೆಯರ ಭಕ್ತಿಗಾಯನ ನಡೆಯಿತು.

ಈ ಸಂದರ್ಭದಲ್ಲಿ ಮಾಹಾರಾಷ್ಟ್ರ ಮಹಿಳಾ ವಿಭಾಗದ ಉಪಾಧ್ಯಕ್ಷೆ ಅಂಬಿಕಾ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ, ಸವಿತಾ ಪೂಜಾರಿ, ಜತೆ ಕಾರ್ಯದರ್ಶಿ ಉಷಾ ಪೂಜಾರಿ, ನವಿ ಮುಂಬಯಿ ಮಹಿಳಾಧ್ಯಕ್ಷೆ ಪ್ರಭಾವತಿ ದೇವಾಡಿಗ, ಕಾರ್ಯದರ್ಶಿ ಹರಿಣಾ ಅಮೀನ್‌, ಜತೆ ಕಾರ್ಯದರ್ಶಿ ಶೈಲಜಾ ಶೆಟ್ಟಿ, ಆಶಾ ದೇವಾಡಿಗ, ಮುಂಬಯಿ ಸಮಿತಿಯ ಉಪಾಧ್ಯಕ್ಷೆ ಉಮಾ ದೇವಾಡಿಗ ಮೊದಲಾದವರು ವೀರ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಮಹಾರಾಷ್ಟ್ರ ಕರ್ನಾಟಕ ಘಟಕದ ಪ್ರದೇಶಾಧ್ಯಕ್ಷ ಹಾಗೂ ಸಯೋಜಕ ಹರೀಶ್‌ ಪೂಜಾರಿ ಅವರ ಮುತುವರ್ಜಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಸಂಸ್ಥೆಯ ಕರ್ನಾಟಕ ಘಟಕದ, ಮುಂಬಯಿ, ನವಿ ಮುಂಬಯಿ, ಥಾಣೆ, ಮೀರಾ-ಭಾಯಂದರ್‌ ವಿಭಾಗಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮೀರಾರೋಡ್‌ ಮಹಾರಾಷ್ಟ್ರ ಸಮಿತಿಯ ಉಪಾಧ್ಯಕ್ಷ ಜಯಕರ ಡಿ. ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಕೋಟ್ಯಾನ್‌, ಕರ್ನಾಟಕ ಘಟಕದ ದಹಿಸರ್‌-ವಿರಾರ್‌ ವಿಭಾಗದ ಮಹಿಳಾ ಸಮಿತಿಯ ಅಧ್ಯಕ್ಷೆ ಆಶಾ ಶೆಟ್ಟಿ, ಕಾರ್ಯದರ್ಶಿ ಲೀಲಾ ಗಣೇಶ್‌ ಕಾರ್ಕಳ, ಮುಂಬಯಿ ಮಹಿಳಾ ವಿಭಾಗದ ಉಪಾಧ್ಯಕ್ಷೆ ಉಮಾ ದೇವಾಡಿಗ ಅವರ ನೇತೃತ್ವದಲ್ಲಿ ನಿವೃತ್ತ ಸೇನೆಯ ಜವಾನರನ್ನು ಅವರ ಮನೆಯಲ್ಲಿ ಸತ್ಕರಿಸಿದ ಕಾರ್ಯಕ್ರಮದ ಬಗ್ಗೆಯೂ ಅವರು ತಿಳಿಸಿದರು.

ನವಿಮುಂಬಯಿಯ ಖಾರ್ಘ‌ ರ್‌ನಲ್ಲಿ ತಿರಂಗಾ ಯಾತ್ರಾ, ತಲೋಜಾ ಮಿಲಿಟರಿ ಕ್ಯಾಂಪ್‌ನಲ್ಲಿ ವಿವಿಧ ಕಾರ್ಯಕ್ರಮಗಳು ಅಲ್ಲದೆ ನವಿ ಮುಂಬಯಿಯ ಉಲ್ವೆಯಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲಾ ಗಿತ್ತು. ಕಾರ್ಯಕ್ರಮದಲ್ಲಿ ಸೆಲ್ಯೂಟ್‌ ತಿರಂಗ ಮಹಾರಾಷ್ಟ್ರದ ಸಂಚಾಲಕರಾದ ವಿಕ್ರಂ ಪರಾಜುಲಿ, ಉಪ ಸಂಚಾಲಕ ಆನಂದ ಸನ್ಹೋತ್ರ, ಬಿಜೆಪಿ ಐಟಿ ಸೆಲ್‌ ಮಹಾರಾಷ್ಟ್ರ ಇದರ ಸಂಯೋಜಕ ಸತೀಶ್‌ ನಿಕಂ, ಸಲ್ಯೂಟ್‌ ತಿರಂಗಾದ ರಾಷ್ಟೀಯ ಸಂಯೋಜಕ ಬಂದನಾ ತ್ರಿಪಾಠಿ, ನೀತಿ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಘಟಕದ ಮಹಾರಾಷ್ಟ್ರ ಘಟಕದ ಪ್ರದಾನ ಕಾರ್ಯದರ್ಶಿ ಪ್ರಭಾಕರ ದೇವಾಡಿಗ, ಜತೆ ಕಾರ್ಯದರ್ಶಿ ದಿರೇಶ್‌ ಬಂಗೇರ, ನವಿಮುಂಬಯಿ ಸಮಿತಿಯ ಉಪಾಧ್ಯಕ್ಷ ರಾಜರಾಮ ಆಚಾರ್ಯ, ಜನಾರ್ದನ ದೇವಾಡಿಗ, ಥಾಣೆ ಸಮಿತಿಯ ಅಧ್ಯಕ್ಷ ಸುಕುಮಾರ ಶೆಟ್ಟಿ, ನವಿಮುಂಬಯಿ ಸಮಿತಿಯ ಜತೆ ಕಾರ್ಯದರ್ಶಿ ಜಗದೀಶ್‌ ರೈ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಡ್ವೋಕೇಟ್‌ ಪ್ರಭಾಕರ ದೇವಾಡಿಗ ಅವರು ಕರ್ನಾಟಕ ಘಟಕ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಗಳ ಆಯೋಜಕರಿಗೆ ವಂದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರಗಳನ್ನು ಹರೀಶ್‌ ಪೂಜಾರಿ ಯವರ ಉಪಸ್ಥಿತಿಯಲ್ಲಿ ಅತಿಥಿಗಳ ಹಸ್ತದಿಂದ ವಿತರಿಸಲಾಯಿತು. ಪ್ರಭಾ ಕರ ದೇವಾಡಿಗರು ಪದಾಧಿಕಾರಿಗಳ ಹೆಸರು ವಾಚಿಸಿದರು. ಶ್ಯಾಮ ಎನ್‌. ಶೆಟ್ಟಿ, ವಿ. ಕೆ. ಸುವರ್ಣ, ಜಯಂತಿ ಆರ್‌. ಮೊಲಿ ಶುಭ ಹಾರೈಸಿದರು.

ಟಾಪ್ ನ್ಯೂಸ್

MMMMMM movie

ಆಸ್ಕರ್ ರೇಸಿನಲ್ಲಿ ಬುಡಕಟ್ಟು ಭಾಷೆಯ ‘ಮ್ಮ್ಮ‍್ಮ’ ಸಿನಿಮಾ

Prosperous Maharashtra, Karnataka hide a disparity within. Development is not for all: Study

ಮಹಾರಾಷ್ಟ್ರ ಹಾಗೂ ಕರ್ನಾಟಕಗಳ ಅಸಮತೋಲನಗಳನ್ನು ಮರೆಮಾಚುವ ಸಮೃದ್ಧಿ : ಅಧ್ಯಯನ

Kim

ಪತಿಗೆ ಡಿವೋರ್ಸ್ ನೀಡಿದ ಮರುದಿನವೇ ಬೆತ್ತಲೆ ಫೋಟೊ ಹರಿಬಿಟ್ಟ ನಟಿ ಕಿಮ್

ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ:ಅಶ್ವತ್ಥನಾರಾಯಣ

ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ:ಅಶ್ವತ್ಥನಾರಾಯಣ

Hrutik Roshan

‘ಫೇಕ್ ಇಮೇಲ್ ಪ್ರಕರಣ…ಪೊಲೀಸ್ ಠಾಣೆಗೆ ನಟ ಹೃತಿಕ್ ಹಾಜರು   

ಸಂಪಾಜೆ: ಕಾಡಾನೆ ದಾಳಿಗೆ 40 ಅಡಿಕೆ ಮರ, 2 ತೆಂಗಿನಮರ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ

ಸಂಪಾಜೆ: ಕಾಡಾನೆ ದಾಳಿಗೆ 40 ಅಡಿಕೆ ಮರ, 2 ತೆಂಗಿನಮರ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ

ಹಿಂದೂ ಧರ್ಮ- ಹಿಂದುತ್ವ ಬೇರೆ ಬೇರೆ, ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ: ಯತೀಂದ್ರ

ಹಿಂದೂ ಧರ್ಮ- ಹಿಂದುತ್ವ ಬೇರೆ ಬೇರೆ, ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ: ಯತೀಂದ್ರ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲ್ಯಾಣ್‌-ಡೊಂಬಿವಲಿ: 17 ಕಟ್ಟಡ ಸೀಲ್‌ಡೌನ್‌

ಕಲ್ಯಾಣ್‌-ಡೊಂಬಿವಲಿ: 17 ಕಟ್ಟಡ ಸೀಲ್‌ಡೌನ್‌

ಹೊಟೇಲಿಗರ ಸಮಸ್ಯೆ ಬಗೆಹರಿಸುವುದು ಸಂಸ್ಥೆಯ ಧ್ಯೇಯ: ಶಿವಾನಂದ ಡಿ. ಶೆಟ್ಟಿ

ಹೊಟೇಲಿಗರ ಸಮಸ್ಯೆ ಬಗೆಹರಿಸುವುದು ಸಂಸ್ಥೆಯ ಧ್ಯೇಯ: ಶಿವಾನಂದ ಡಿ. ಶೆಟ್ಟಿ

Cultivate virtue

“ಕಠಿನ ಪರಿಶ್ರಮದೊಂದಿಗೆ ಸದ್ಗುಣ ಬೆಳೆಸಿಕೊಳ್ಳಿ”

Governing Board Election

ಫೆ. 28: ಕರ್ನಾಟಕ ಸಂಘ ಡೊಂಬಿವಲಿ ಆಡಳಿತ ಮಂಡಳಿ ಚುನಾವಣೆ

Modell Bank’s service is reliable during covid

“ಕೋವಿಡ್ ಸಮಯದಲ್ಲೂ ಮೋಡೆಲ್‌ ಬ್ಯಾಂಕಿನ ಸೇವೆ ವಿಶ್ವಾಸಾರ್ಹ”

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ಕಸ ವಿಲೇವಾರಿ ಅಸಮರ್ಪಕ: ದೂರು

ಕಸ ವಿಲೇವಾರಿ ಅಸಮರ್ಪಕ: ದೂರು

27-9

ಜಿಲ್ಲಾಡಳಿತ ಮೌನಕ್ಕೆ ಭುಗಿಲೆದ್ದ ಆಕ್ರೋಶ

ತಹಶೀಲ್ದಾರ್‌ಗೂ ಕ್ಯಾರೇ ಎನ್ನದ ಐಆರ್‌ಬಿ ಅಧಿಕಾರಿಗಳು

ತಹಶೀಲ್ದಾರ್‌ಗೂ ಕ್ಯಾರೇ ಎನ್ನದ ಐಆರ್‌ಬಿ ಅಧಿಕಾರಿಗಳು

ಶಾಲೆ ಶುರು, ಬಿಸಿಯೂಟ ಸ್ಥಗಿತ!

ಶಾಲೆ ಶುರು, ಬಿಸಿಯೂಟ ಸ್ಥಗಿತ!

MMMMMM movie

ಆಸ್ಕರ್ ರೇಸಿನಲ್ಲಿ ಬುಡಕಟ್ಟು ಭಾಷೆಯ ‘ಮ್ಮ್ಮ‍್ಮ’ ಸಿನಿಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.