ಕಲ್ಯಾಣ್-ಡೊಂಬಿವಲಿ: ಶೇ. 20 ಫಲಾನುಭವಿಗಳಿಗೆ ಮಾತ್ರ ಲಸಿಕೆ
Team Udayavani, Apr 22, 2021, 11:28 AM IST
ಥಾಣೆ: ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದರೂ ಕಲ್ಯಾಣ್-ಡೊಂಬಿವಲಿ, ಭಿವಂಡಿ ಮತ್ತು ಉಲ್ಲಾಸ್ ನಗರದಲ್ಲಿ ಅಭಿ ಯಾನ ವೇಗ ಪಡೆದುಕೊಂಡಿಲ್ಲ. ಜಿಲ್ಲೆಯ ಶೇ. 28ರಷ್ಟು ಅರ್ಹ ನಾಗರಿಕರಿಗೆ ಲಸಿಕೆ ನೀಡಲಾಗಿದ್ದರೆ, ಈ ಮೂರು ನಗರಗಳಲ್ಲೂ ಶೇ. 20ಕ್ಕಿಂತ ಕಡಿಮೆ ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಇನ್ನೊಂದೆಡೆ ಲಸಿಕೆ ಶೇಕಡಾವಾರು ಪ್ರಮಾಣದಲ್ಲಿ ಥಾಣೆ, ನವಿಮುಂಬಯಿ ಮತ್ತು ಮೀರಾ-ಭಾಯಂದರ್ ಉಪನಗರ ಗಳು ಮುಂದಿವೆ. ಥಾಣೆ ಜಿಲ್ಲೆಯಲ್ಲಿ ಪ್ರತೀದಿನ ಸರಾಸರಿ ಐದು ಸಾವಿರ ರೋಗಿಗಳು ಕಂಡುಬರು ತ್ತಿದ್ದು, 35ರಿಂದ 40 ಮಂದಿ ಸಾವನ್ನಪ್ಪುತ್ತಿದ್ದಾರೆ.
ಸೋಮವಾರದವರೆಗೆ ಜಿಲ್ಲೆಯಲ್ಲಿ 8,96,860 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 6,63,742 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಗರಿಕರು ಸೇರಿದ್ದಾರೆ. ಅದರಲ್ಲಿ 6,16,895 ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಎರಡನೇ ಡೋಸ್ ಅನ್ನು 46,847 ಮಂದಿಗೆ ನೀಡಲಾಗಿದೆ. ಉಳಿದ 2,33,118 ಮಂದಿಯಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸ್ವತ್ಛತಾ ಸಿಬಂದಿ ಸೇರಿದ್ದಾರೆ.
ನವಿಮುಂಬಯಿಯ ಜನಸಂಖ್ಯೆ 15,2,120ರಷ್ಟಿದ್ದು, ಈ ಪ್ರದೇಶದ 4,50,636 ನಾಗರಿಕರು 45 ವರ್ಷ ವಯಸ್ಸಿನವರಾಗಿ¨ªಾರೆ. ಈ ಸ್ಥಳದಲ್ಲಿ ಶೇ. 42ರಷ್ಟು ಲಸಿಕೆ ಹಾಕಲಾಗಿದೆ. ಮೀರಾ- ಭಾಯಂದರ್‌ನಲ್ಲೂ 10,47,346 ಜನಸಂಖ್ಯೆ ಇದ್ದು, 3, 14,238 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಇಲ್ಲಿ ಶೇ. 40ರಷ್ಟು ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಥಾಣೆ ಜನಸಂಖ್ಯೆ 22,06,060ರಷ್ಟಿದ್ದು, ಇಲ್ಲಿ ಶೇ. 34ರಷ್ಟು ನಾಗರಿಕರಿಗೆ ಲಸಿಕೆ ನೀಡಲಾಗಿದೆ.
ಕಲ್ಯಾಣ್- ಡೊಂಬಿವಲಿಯ ಜನಸಂಖ್ಯೆ 19,16,863ರಷ್ಟಿದ್ದು, 5,75,059 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಾಗಿ¨ªಾರೆ. ಇಲ್ಲಿ ಶೇ. 20ರಷ್ಟು ಲಸಿಕೆ ಹಾಕಲಾಗಿದೆ. ಥಾಣೆ ಗ್ರಾಮೀಣ ಪ್ರದೇಶದಲ್ಲಿ 20,58,755ರಷ್ಟು ಜನಸಂಖ್ಯೆಯಿದ್ದು, 6,17, 627 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಿ¨ªಾರೆ. ಇಲ್ಲಿ ಶೇ. 22 ರಷ್ಟು ಲಸಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂರು ದಿನವಾದರೂ ಪತ್ತೆಯಾಗಿಲ್ಲ ಕೊಚ್ಚಿಹೋದ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ
ವೃದ್ಧೆ ಕೈಕಾಲು ಕಟ್ಟಿ 10 ಲಕ್ಷ ನಗದು, 100 ಗ್ರಾಂ ಚಿನ್ನ ದೋಚಿದವರ ಸೆರೆ
ಕಡಲ್ಕೊರೆತದ ಕುರಿತು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಿಎಂ ಬೊಮ್ಮಾಯಿ
ಭಾರತದಲ್ಲಿ 24ಗಂಟೆಯಲ್ಲಿ 18,930 ಕೋವಿಡ್ ಪ್ರಕರಣ ದೃಢ; 35 ಮಂದಿ ಸಾವು
ಬಂಟ್ವಾಳ: ಪಂಜಿಕಲ್ಲು ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ ಸುನೀಲ್ ಭೇಟಿ