ಪಶ್ಚಿಮ ಬಂಗಾಲ ಸರಕಾರದ ವಿರುದ್ಧ ಅಚಿಂತ ಕುಟುಂಬ ಬೇಸರ
Team Udayavani, Aug 5, 2022, 6:55 AM IST
ಕೋಲ್ಕತಾ: ಕಾಮನ್ವೆಲ್ತ್ ಗೇಮ್ಸ್‌ನ 73 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಪಶ್ಚಿಮ ಬಂಗಾಲದ ಅಚಿಂತ ಶಿಯುಲಿ ಚಿನ್ನ ಗೆದ್ದು ಅದ್ಭುತ ಸಾಧನೆ ಮಾಡಿದ್ದಾರೆ. ಇವರಿಗೆ ಈಗ ಕೇವಲ 20 ವರ್ಷ. ಹೌರಾ ಜಿಲ್ಲೆಯ ದೇವಲಪುರ ಎಂಬ ಹಳ್ಳಿಯವರು. ಇಂತಹ ಸಂಭ್ರಮದ ಹೊತ್ತಿನಲ್ಲೂ ಅಚಿಂತ ಕುಟುಂಬದಲ್ಲಿ ಬೇಸರದ ವಾತಾವರಣವಿದೆ. ಕಾರಣವೇನು ಗೊತ್ತೇ? ಪಶ್ಚಿಮ ಬಂಗಾಲ ಸರಕಾರದ ನಿರ್ಲಕ್ಷ್ಯ!
ಅಚಿಂತ ಚಿನ್ನ ಗೆದ್ದ ಅನಂತರ ಪ್ರತಿಕ್ರಿಯಿಸಿರುವ ಸಹೋದರ ಆಲೋಕ್, “ಇಂತಹ ಪುಟ್ಟ ಹಳ್ಳಿಯೊಂದರ ಹುಡುಗ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದೇ ಪಶ್ಚಿಮ ಬಂಗಾಲ ಸರಕಾರಕ್ಕೆ ಗೊತ್ತಿಲ್ಲ. ರಾಜ್ಯದ ಕ್ರೀಡಾ ಸಚಿವರಿಗೂ ಈ ವಿಷಯ ಗೊತ್ತಿದ್ದಂತಿಲ್ಲ. ನಮಗೆ ತುರ್ತಾಗಿ ನೆರವು ಬೇಕಾಗಿದೆ. ಸರಕಾರ ಎಷ್ಟು ಆರ್ಥಿಕ ನೆರವು ನೀಡುತ್ತದೆ ಎಂಬುದನ್ನು ನೋಡೋಣ’ ಎಂದಿದ್ದಾರೆ.
ಬೇರೆ ರಾಜ್ಯಕ್ಕೆ ವಲಸೆ:
ಈ ನಿರ್ಲಕ್ಷ್ಯದ ಬಗ್ಗೆ 2020ರಲ್ಲೇ “ಟೆಲಿಗ್ರಾಫ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಅಚಿಂತ ಬೇಸರ ವ್ಯಕ್ತಪಡಿಸಿದ್ದರು. “ಬೇರೆ ರಾಜ್ಯಗಳಲ್ಲಿ ವೇಟ್‌ಲಿಫ್ಟರ್‌ಗಳಿಗೆ ಆಯಾ ರಾಜ್ಯ ಸರಕಾರಗಳು ಬೆಂಬಲ ನೀಡುತ್ತವೆ. ನಮ್ಮ ರಾಜ್ಯದಲ್ಲಿ ಆ ಪರಿಸ್ಥಿತಿಯಿಲ್ಲ. ಹೀಗೆಯೇ ಆದರೆ ನಾನು ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾಗುತ್ತದೆ. ಹರ್ಯಾಣ, ಅರುಣಾಚಲಪ್ರದೇಶ, ಮಣಿಪುರಗಳ ಪೈಕಿ ಒಂದನ್ನು ಆಯ್ಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದಿದ್ದರು. ಆದರೆ ಅವರು ಇಲ್ಲಿಯ ತನಕ ಈ ಕೆಲಸ ಮಾಡಿಲ್ಲ.
ಅಚಿಂತ ಶಿಯುಲಿ ಮತ್ತವರ ಕುಟುಂಬ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರೂ ಸರಕಾರ ಇದುವರೆಗೆ ಆರ್ಥಿಕ ನೆರವನ್ನು ಘೋಷಿಸಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟರ್ ಮೂಲಕ ಶುಭಾಶಯ ಕೋರಿ ಸುಮ್ಮನಾಗಿದ್ದಾರೆ. ಅಲ್ಲಿನ ಕ್ರೀಡಾ ಸಚಿವ ಮನೋಜ್ ತಿವಾರಿ ಒಬ್ಬ ಕ್ರಿಕೆಟಿಗನಾಗಿದ್ದರೂ ಈವರೆಗೆ ವಿಶೇಷ ಘೋಷಣೆಗಳೇನೂ ಆಗದಿರುವುದೊಂದು ಅಚ್ಚರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ಪ್ರವೀಣ್ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ
3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ
ಹೊಸ ಸೇರ್ಪಡೆ
ಉಪ್ಪುಂದ: ಕಾಲುಸಂಕ ದಾಟುವಾಗ ವಿದ್ಯಾರ್ಥಿನಿ ನೀರುಪಾಲು; 48 ಗಂಟೆ ಬಳಿಕ ಮೃತ ದೇಹ ಪತ್ತೆ
ಸುಳ್ಯ: ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಹಿಡಿದು ಓಡಾಟ; ವಿಡಿಯೋ ವೈರಲ್
ಕಾಶ್ಮೀರಿ ಪಂಡಿತ ರಾಹುಲ್ ರನ್ನು ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ಉಗ್ರರಿಬ್ಬರ ಎನ್ಕೌಂಟರ್
ದೂರು ನೋಂದಾಯಿಸಲು ತಾಂತ್ರಿಕ ಅಡಚಣೆ
ವಿದ್ಯುಚ್ಛಕ್ತಿ ಕಾಯ್ದೆ-2022: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ