ವಿಶ್ವಕಪ್ ಕೂಟದಿಂದ ಹೊರಗುಳಿದ ಎಲೀಸ ಪೆರ್ರಿ:ಸೆಮಿ ತಲುಪಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತ
Team Udayavani, Mar 3, 2020, 7:50 PM IST
ಮೆಲ್ಬರ್ನ್: ಸೆಮಿಫೈನಲ್ ತಲುಪಿರುವ ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಆಘಾತವೊಂದು ಎದುರಾಗಿದೆ. ಕಿವೀಸ್ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ತುತ್ತಾಗಿರುವ ಆಲ್ರೌಂಡರ್ ಎಲೀಸ ಪೆರ್ರಿ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದ 11ನೇ ಓವರ್ನಲ್ಲಿ ಕ್ಷೇತ್ರರಕ್ಷಣೆ ಮಾಡುವ ವೇಳೆ ಪೆರ್ರಿ ತಮ್ಮ ತೊಡೆಯ ಸ್ನಾಯುವಿನ ನೋವಿನ ಸಮಸ್ಯೆಗೆ ಸಿಲುಕಿದರು. ಸಮಸ್ಯೆ ಕೊಂಚ ಗಂಭೀರವಾಗಿದ್ದ ಕಾರಣ ಸಹ ಆಟಗಾರ್ತಿ ಹಾಗೂ ಫಿಸಿಯೋ ನೆರವಿನೊಂದಿಗೆ ಕುಂಟುತ್ತಾ ಪೆವಿಲಿಯನ್ ಕಡೆಗೆ ಸಾಗಿದ ಪೆರಿಯನ್ನು ವೈದ್ಯಕೀಯ ಪರಿಶೀಲನೆಗೆ ಒಳಪಡಿಸಲಾಯಿತು. ಗಾಯದ ತೀವ್ರತೆ ಹೆಚ್ಚಿರುವ ಕಾರಣ ಸುದೀರ್ಘಾವಧಿಯ ಕಾಲ ವಿಶ್ರಾಂತಿ ಅಗತ್ಯವಿದೆ ಅವರ ಚೇತರಿಕೆಗೆ ಎಲ್ಲ ರೀತಿಯ ಬೆಂಬಲ ಒದಗಿಸಲಿದ್ದೇವೆ, ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ. ಇದರೊಂದಿಗೆ ಇದೇ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಪೆರಿ ಹೊರಗುಳಿಯಲಿದ್ದಾರೆ.
ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಪೆರ್ರಿ ಅವರ ಸ್ಥಾನಕ್ಕೆ ಬದಲಿ ಆಟಗಾರ್ತಿಯನ್ನು ಹೆಸರಿಸಿಲ್ಲದ ಕಾರಣ ಅವರು ವಿಶ್ವಕಪ್ ಮುಗಿಯುವವರೆಗೂ ಆಸ್ಟ್ರೇಲಿಯಾ ತಂಡದ ಭಾಗವಾಗಿಯೇ ಉಳಿಯಲಿದ್ದಾರೆ. ಮಾರ್ಚ್ 5ರಂದು ಸೆಮಿಫೈನಲ್ಸ… ಪಂದ್ಯಗಳು ನಡೆಯಲಿದ್ದು, “ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ತಂಡ “ಬಿ’ ಗುಂಪಿನ ಅಗ್ರಸ್ಥಾನಿಯೊಂದಿಗೆ ಪೈಪೋಟಿ ನಡೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್