ಟಿ20; ಆಸ್ಟ್ರೇಲಿಯ ವನಿತೆಯರಿಗೆ 2-0 ಸರಣಿ


Team Udayavani, Oct 10, 2021, 11:18 PM IST

ಟಿ20; ಆಸ್ಟ್ರೇಲಿಯ ವನಿತೆಯರಿಗೆ 2-0 ಸರಣಿ

ಗೋಲ್ಡ್‌ ಕೋಸ್ಟ್‌: ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಅಂತಿಮ ಟಿ20 ಪಂದ್ಯವನ್ನು 14 ರನ್ನುಗಳಿಂದ ಕಳೆದುಕೊಂಡ ಭಾರತದ ವನಿತೆಯರು ಸರಣಿ ಸೋಲಿಗೆ ತುತ್ತಾಗಿದ್ದಾರೆ.

ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯ 5 ವಿಕೆಟಿಗೆ 149 ರನ್‌ ಪೇರಿ ಸಿತು. ಈ ಕಠಿನ ಸವಾಲಿಗೆ ಜವಾಬು ನೀಡುವಲ್ಲಿ ಎಡವಿದ ಭಾರತ 6 ವಿಕೆಟಿಗೆ 135 ರನ್‌ ಗಳಿಸಿ ಶರಣಾಯಿತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, ದ್ವಿತೀಯ ಮುಖಾಮುಖಿಯನ್ನು ಆಸೀಸ್‌ 4 ವಿಕೆಟ್‌ಗಳಿಂದ ಜಯಿಸಿತ್ತು.

ಕಾಂಗರೂಗಳ ಬೃಹತ್‌ ಮೊತ್ತಕ್ಕೆ ಕಾರಣರಾದವರು ಓಪನರ್‌ ಬೆತ್‌ ಮೂನಿ ಮತ್ತು ಆಲ್‌ರೌಂಡರ್‌ ಟಹ್ಲಿಯಾ ಮೆಗ್ರಾತ್‌. ಮೂನಿ 18ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು 61 ರನ್‌ ಬಾರಿಸಿದರು. 43 ಎಸೆತಗಳ ಈ ಇನ್ನಿಂಗ್ಸ್‌ ನಲ್ಲಿ 10 ಬೌಂಡರಿ ಒಳಗೊಂಡಿತ್ತು. ಮೆಗ್ರಾತ್‌ 31 ಎಸೆತನಿಭಾಯಿಸಿ ಅಜೇಯ 44 ರನ್‌ ಬಾರಿಸಿದರು (6 ಬೌಂಡರಿ, 1 ಸಿಕ್ಸರ್‌).

ಇದನ್ನೂ ಓದಿ:ಪ್ರತಿ ಜಿಲ್ಲೆಯಲ್ಲಿ ಮಾದರಿ ಕೋವಿಡ್‌ಫೀಲ್ಡ್‌ ಆಸ್ಪತ್ರೆ ತೆರೆಯಲು ಸರ್ಕಾರ ಸಿದ್ಧವಿದೆ

ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ (1) ಅಗ್ಗಕ್ಕೆ ಔಟಾದದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಮಧ್ಯಮ ಕ್ರಮಾಂಕವೂ ಕೈಕೊಟ್ಟಿತು. ಆದರೆ ಸ್ಮತಿ ಮಂಧನಾ ಹಾಗೂ ಕೆಳ ಕ್ರಮಾಂಕದಆಟಗಾರ್ತಿ ರಿಚಾ ಘೋಷ್‌ ದಿಟ್ಟ ಹೋರಾಟ ಸಂಘಟಿಸಿದರು. ಮಂಧನಾ 49 ಎಸೆತಗಳಿಂದ 52 ರನ್‌ ಮಾಡಿದರೆ (8 ಬೌಂಡರಿ), ರಿಚಾ 11 ಎಸೆತಗಳಿಂದ ಅಜೇಯ 23 ರನ್‌ ಬಾರಿಸಿದರು. ಪಂದ್ಯದ ಅಂತಿಮ ಓವರ್‌ನಲ್ಲಿ ಸಿಡಿದ ದೀಪ್ತಿ-ರಿಚಾ 21 ರನ್‌ ಸೂರೆಗೈದರು. ರಿಚಾ ಬೇಗನೇ ಕ್ರೀಸಿಗೆ ಬಂದದ್ದಿದ್ದರೆ ಭಾರತಕ್ಕೆ ಸರಣಿ ಸಮಬಲದ ಅವಕಾಶ ಹೆಚ್ಚಿರುತ್ತಿತ್ತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-5 ವಿಕೆಟಿಗೆ 149 (ಮೂನಿ 61, ಮೆಗ್ರಾತ್‌ ಔಟಾಗದೆ 44, ರಾಜೇಶ್ವರಿ 37ಕ್ಕೆ 2). ಭಾರತ-6 ವಿಕೆಟಿಗೆ 135 (ಮಂಧನಾ 52, ಜೆಮಿಮಾ 23, ರಿಚಾ ಔಟಾಗದೆ 23, ಕೌರ್‌ 13, ಕ್ಯಾರಿ 42ಕ್ಕೆ 2).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಟಹ್ಲಿಯಾ ಮೆಗ್ರಾತ್‌.

ಟಾಪ್ ನ್ಯೂಸ್

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

Untitled-1

ಸಂಕೇಶ್ವರ: ಮಹಿಳೆಯೋರ್ವಳ ಗುಂಡಿಕ್ಕಿ ಹತ್ಯೆ; ಬೆಚ್ಚಿ ಬಿದ್ದ ಗ್ರಾಮಸ್ಥರು

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

baby

ಬೆಳಗಾವಿ: ಚುಚ್ಚುಮದ್ದು ಪಡೆದ ಬಳಿಕ ಮೂರು ಶಿಶುಗಳ ನಿಗೂಢ ಸಾವು; ತನಿಖೆ ಆರಂಭ

1wer

ಭಯಗೊಳ್ಳದೆ ಚುನಾವಣೆ ಎದುರಿಸಿ: ಅರ್ಚನಾಗೆ ಧೈರ್ಯ ತುಂಬಿದ ಪ್ರಿಯಾಂಕಾ ಗಾಂಧಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gangully

ನಾಯಕತ್ವ ತ್ಯಜಿಸುವ ಕೊಹ್ಲಿ ನಿರ್ಧಾರ ವೈಯಕ್ತಿಕ: ಸೌರವ್ ಗಂಗೂಲಿ

ರೋಹಿತ್, ರಾಹುಲ್,ಅಶ್ವಿನ್, ಬುಮ್ರಾ ಬೇಡ.. ಈತನನ್ನು ಟೆಸ್ಟ್ ಕ್ಯಾಪ್ಟನ್ ಮಾಡಿ: ಗಾವಸ್ಕರ್

ರೋಹಿತ್, ರಾಹುಲ್,ಅಶ್ವಿನ್, ಬುಮ್ರಾ ಬೇಡ.. ಈತನನ್ನು ಟೆಸ್ಟ್ ಕ್ಯಾಪ್ಟನ್ ಮಾಡಿ: ಗಾವಸ್ಕರ್

virat-kohli

ವಿರಾಟ್ ಕೊಹ್ಲಿ ಭಾರತದ ಅತ್ಯುತ್ತಮ ನಾಯಕ ಎನ್ನುವುದಕ್ಕೆ ಇಲ್ಲಿದೆ ದಾಖಲೆಗಳ ಸಾಕ್ಷಿ

A winning start to India U19’s World Cup campaign

ಅಂಡರ್ 19 ವಿಶ್ವಕಪ್: ಹರಿಣಗಳನ್ನು ಮಣಿಸಿ ಶುಭಾರಂಭಗೈದ ಟೀಂ ಇಂಡಿಯಾ

thumb 3

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌ಗೆ ಫೈನಲ್‌; ಸಿಂಧು ಫೇಲ್‌

MUST WATCH

udayavani youtube

ನಾವು ಬದಲಾಗೋಣ ಪ್ರಕೃತಿಯನ್ನು ಘೋಷಿಸೋಣಭೂಮಿ ಸುಪೋಷನ ಆಂದೋಲನ

udayavani youtube

ಒಂದು ಕೆ.ಜಿ. ಬಾಳೆ ಹಣ್ಣಿಗೆ 2 ರೂ. : ಸಂಕಷ್ಟದಲ್ಲಿ ಬಾಳೆ ಬೆಳೆದ ರೈತ

udayavani youtube

3-IN-ONE ಮಾದರಿ ವಾಕಿಂಗ್‌ ಸ್ಟಿಕ್‌ ! ಗ್ರಾಮೀಣ ಭಾಗದ ವಿದ್ಯಾರ್ಥಿಯ ಆವಿಷ್ಕಾರ

udayavani youtube

ಉಡುಪಿಯ ರಸ್ತೆಗಳಲ್ಲಿ ಓಡಾಡಿದ Corona Virus !! ವಿಶಿಷ್ಟ ರೀತಿಯಲ್ಲಿ ಜನಜಾಗೃತಿ

udayavani youtube

ಉಡುಪಿ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಕೊರೊನಾ ವೈರಸ್ !

ಹೊಸ ಸೇರ್ಪಡೆ

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

18tipper

ಮರಳು ಸಾಗಾಟ: ಟಿಪ್ಪರ್‌ ವಶ

17women

ಹೆಣ‍್ಣನ್ನು ದೈವತ್ವಕ್ಕೇರಿಸಿದ್ದು 12ನೇ ಶತಮಾನದ ಬಸವಾದಿ ಶರಣರು

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

ಪ್ರಯಾಣಿಕರ ಕೊರತೆ – ಸಂಕಷ್ಟದಲ್ಲಿ ಆಟೋ ಚಾಲಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.