ಗಾಯದ ಮೇಲೆ ಬರೆ: ಮುಂದಿನ ಆರು ತಿಂಗಳ ಕಾಲ ಭುವನೇಶ್ವರ್ ಕುಮಾರ್ ಕ್ರಿಕೆಟ್ ನಿಂದ ಔಟ್!
Team Udayavani, Dec 25, 2020, 11:32 AM IST
ಮುಂಬೈ: ಟೀಂ ಇಂಡಿಯಾಗೆ ಗಾಯದ ಮೇಲೆ ಬರೆ ಬಿದ್ದ ಹಾಗಾಗಿದೆ. ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ತಂಡದಿಂದ ಆರು ತಿಂಗಳ ಕಾಲ ಹೊರಬಿದ್ದಿದ್ದಾರೆ.
ಕಳೆದ ಐಪಿಎಲ್ ನ ಆರಂಭದಲ್ಲಿ ಗಾಯದ ಸಮಸ್ಯೆಗೆ ಸಿಲುಕಿದ್ದ ಭುವನೇಶ್ವರ್ ಕುಮಾರ್ ಇನ್ನೂ ಚೇತರಿಸಿಕೊಂಡಿಲ್ಲ. ಇನ್ನು ಅವರು ಕ್ರಿಕೆಟ್ ಗೆ ಲಭ್ಯವಾಗುವುದು ಮುಂದಿನ ಐಪಿಎಲ್ ಗೆ ಎನ್ನುತ್ತದೆ ವರದಿಗಳು.
ಗಾಯದ ಸಮಸ್ಯೆಗೆ ಸಿಲುಕಿದ್ದ ಭುವನೇಶ್ವರ್ ಕುಮಾರ್ ಕಳೆದ ಐಪಿಎಲ್ ಗೆ ವಾಪಾಸಾಗಿದ್ದರು. ಆದರೆ ಟೂರ್ನಿಯ ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ಸಿಲುಕಿದ್ದರು.
ಇದನ್ನೂ ಓದಿ:ಧನಾತ್ಮಕ ಅಂಶಗಳನ್ನು ಸ್ವೀಕರಿಸಿ: ಗೌತಮ್ ಗಂಭೀರ್ ಸಲಹೆ
ಕೆಲವೇ ವಾರಗಳಲ್ಲಿ ನಡೆಯಲಿರುವ ಸಯ್ಯದ್ ಮುಷ್ತಕ್ ಆಲಿ ಟ್ರೋಫಿ ಟಿ20 ಕೂಟಕ್ಕೂ ಭುವಿ ಆಯ್ಕೆಯಾಗಿಲ್ಲ. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಭುವನೇಶ್ವರ್ ಅಲಭ್ಯರಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಡಿಯೋ; ರಿಂಗ್ ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಜರ್ಮನಿಯ ಬಾಕ್ಸರ್ ಮೂಸಾ ಯಮಕ್!
ಮುಚ್ಚಿದ ಬಾಗಿಲಿನ ಹಿಂದೆ ಆರ್ಸಿಬಿ: ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ಅಂತಿಮ ಪಂದ್ಯ
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ನಿಖತ್ ಜರೀನ್ ಫೈನಲಿಗೆ
ಇಂಗ್ಲೆಂಡ್ ತಂಡಕ್ಕೆ ಮರಳಿದ ಜೇಮ್ಸ್ ಆ್ಯಂಡರ್ಸನ್,ಸ್ಟುವರ್ಟ್ ಬ್ರಾಡ್
ಥಾಯ್ಲೆಂಡ್ ಓಪನ್: ಶ್ರೀಕಾಂತ್, ಸಿಂಧು ದ್ವಿತೀಯ ಸುತ್ತಿಗೆ