ಈ ತಂಡಗಳಲ್ಲಿ ಒಂದು ಈ ಬಾರಿಯ ಐಪಿಎಲ್ ಚಾಂಪಿಯನ್ ಆಗಲಿದೆ: ಬ್ರಾಡ್ ಹಾಗ್ ಭವಿಷ್ಯ
Team Udayavani, Jul 26, 2020, 5:33 PM IST
ಮುಂಬೈ: ಆಸೀಸ್ ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡಿಕೆಯಾಗಿದ್ದೇ ಐಪಿಎಲ್ ನ ತಯಾರಿಗಳು ಆರಂಭವಾಗಿದೆ. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯುಎಇನಲ್ಲಿ ನಡೆಯುವುದು ಬಹುತೇಕ ಅಂತಿಮವಾಗಿದೆ. ಈ ಮಧ್ಯೆ ಮಾಜಿ ಆಸ್ಟ್ರೇಲಿಯನ್ ಆಟಗಾರ ಬ್ರಾಡ್ ಹಾಗ್ ಐಪಿಎಲ್ ನ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬ್ರಾಡ್ ಹಾಗ್ ಪ್ರಕಾರ ಮುಂಬೈ ಇಂಡಿಯನ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಪಟ್ಟ ಮುಡಿಗೇರಿಸಲದೆ.
ನನ್ನ ಪ್ರಕಾರ ಈ ಬಾರಿಯು ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆಲ್ಲಬಹುದು. ಯಾಕೆಂದರೆ ಆರಂಭಿಕ ಆಟಗಾರರು ಉತ್ತಮವಾಗಿದ್ದಾರೆ. ಉತ್ತಮ ಆಲ್ ರೌಂಡರ್ಸ್ ಇದ್ದಾರೆ. ಮುಂಬೈ ತಂಡದ ಡೆತ್ ಬೌಲಿಂಗ್ ಬಲಿಷ್ಟವಾಗಿದೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ನೇತೃತ್ವದ ಆರ್ ಸಿಬಿಯೂ ಈ ಬಾರಿಯ ನೆಚ್ಚಿನ ತಂಡವಾಗಿದೆ ಎಂದು ಹಾಗ್ ಹೇಳಿದ್ದಾರೆ. ಆರ್ ಸಿಬಿ ತಂಡ ಉತ್ತಮವಾಗಿದೆ. ಆರೋನ್ ಫಿಂಚ್ ತಂಡಕ್ಕೆ ಬಂದ ಕಾರಣ ಪವರ್ ಪ್ಲೇ ಓವರ್ ನಲ್ಲಿ ಉತ್ತಮವಾಗಿ ಆಡಬಹುದು. ಬೌಲಿಂಗ್ ನಲ್ಲೂ ಸ್ಟೇನ್, ರಿಚರ್ಡ್ ಸನ್ ಮುಂತಾದವರು ಇರುವುದರಿಂದ ೀ ಬಾರಿ ಕಪ್ ಗೆಲ್ಲುವ ಅವಕಾಶವಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಕೆಕೆಆರ್ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ