ಈಗ ಬಿಸಿಸಿಐ ನಿಯೋಗದ ಅಧಿಕಾರಿಗೆ ಕೋವಿಡ್ ಕಾಟ
Team Udayavani, Sep 3, 2020, 7:08 PM IST
ಸಾಂದರ್ಭಿಕ ಚಿತ್ರ
ದುಬಾೖ: ಐಪಿಎಲ್ಗಾಗಿ ಯುಎಇಗೆ ಆಗಮಿಸಿದರೂ ಕೋವಿಡ್ ಬೆಂಬಿಡಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದರಿಂದ ಗರಿಷ್ಠ ಸಮಸ್ಯೆ ಎದುರಾಗಿದೆ. ಇದೀಗ ಐಪಿಎಲ್ ಆಯೋಜನೆಯ ಮೇಲ್ವಿಚಾರಣೆಗಾಗಿ ಬಂದ ಬಿಸಿಸಿಐ ನಿಯೋಗದ ಸದಸ್ಯರೊಬ್ಬರಿಗೂ ಈ ಮಾರಿ ಅಂಟಿಕೊಂಡಿದೆ.
“ಬಿಸಿಸಿಐ ನಿಯೋಗದ ಓರ್ವರಿಗೆ ಪಾಸಿಟಿವ್ ದೃಢಪಟ್ಟಿದೆ. ಇದು ಕ್ರಿಕೆಟ್ ಆಪರೇಶನ್ಸ್ ತಂಡದ ಸದಸ್ಯರಿಗೋ ಅಥವಾ ವೈದ್ಯಕೀಯ ತಂಡದ ಸದಸ್ಯರಿಗೋ ಎಂಬುದನ್ನು ಹೇಳಲಾಗದು. ಕೋವಿಡ್ ಟೆಸ್ಟ್ ಮುಂದುವರಿಯುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ…’ ಎಂಬುದಾಗಿ ಐಪಿಎಲ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.