ಕ್ರಿಕೆಟ್‌ ಪಂದ್ಯದ ವಿವಾದ: ಪೊಲೀಸ್‌ ಠಾಣೆಯಲ್ಲಿ ಹೊಡೆದಾಟ

Team Udayavani, Nov 25, 2018, 6:05 AM IST

ಕರಾಚಿ: ಕ್ರಿಕೆಟ್‌ ಪಂದ್ಯದ ವಿವಾದದಿಂದಾಗಿ ಎರಡೂ ಬಣಗಳು ಪೊಲೀಸ್‌ ಠಾಣೆಯೊಂದರಲ್ಲಿ ಮುಖಾಮುಖೀಯಾದ ವೇಳೆ ಗುಂಡಿನ ದಾಳಿ ನಡೆಸಿದ್ದರಿಂದ ಏಳು ಮಂದಿ ಮೃತಪಟ್ಟ ಘಟನೆ ಪಾಕಿಸ್ಥಾನದ ಖೈಬರ್‌ ಪಕು¤ಂಕ್ವ ಪ್ರದೇಶದಲ್ಲಿ ನಡೆದಿದೆ.

ಉಭಯ ತಂಡಗಳ ಗುಂಡಿನ ದಾಳಿಯಿಂದಾಗಿ ಅಬೋಟಾಬಾದ್‌  ಜಿಲ್ಲೆಯ ಪೊಲೀಸ್‌ ಠಾಣೆ ಕದನದ ತಾಣವಾಗಿ ಮಾರ್ಪಟ್ಟಿತ್ತು. ಮಕ್ಕಳು ಕ್ರಿಕೆಟ್‌ ಪಂದ್ಯ ಆಡುತ್ತಿದ್ದ ವೇಳೆ ಆದ ಜಗಳ ಏಳು ಮಂದಿಯನ್ನು ಬಲಿ ತೆಗೆದುಕೊಂಡಿತು. ಜಗಳದ ಹಿನ್ನೆಲೆಯಲ್ಲಿ ಮಕ್ಕಳ ಹೆತ್ತವರು ದೂರು ನೀಡಲು ಠಾಣೆಗೆ ಆಗಮಿಸಿದಾಗ ಎರಡೂ ತಂಡಗಳ ಸದಸ್ಯರು ಮುಖಾಮುಖೀಯಾದರು. ಸ್ವಲ್ಪಹೊತ್ತಿನಲ್ಲಿಯೇ ತಂಡಗಳ ನಡುವೆ ಗುಂಡಿನ ದಾಳಿ ಆರಂಭವಾಯಿತು ಎಂದು ಡಿವೈಎಸ್‌ಪಿ ಇಜಾಸ್‌ ಖಾನ್‌ ಹೇಳಿದ್ದಾರೆ.

ಒಂದು ಬಣದ ಸದಸ್ಯರು ಗುಂಡಿನ ದಾಳಿ ಆರಂಭಿಸಿದಾಗ ಶಸ್ತ್ರಸಜ್ಜಿತರಾಗಿ ಬಂದಿದ್ದ ಇನ್ನೊಂದು ಬಣದ ಸದಸ್ಯರೂ ಕೂಡ ಗುಂಡಿನ ದಾಳಿಯೊಂದಿಗೆ ಉತ್ತರ ನೀಡಿದ್ದರು. ಗುಂಡಿನ ದಾಳಿಯಿಂದಾಗಿ ಎರಡೂ ಬಣದ ಒಟ್ಟು ಏಳು ಮಂದಿ ಮೃತಪಟ್ಟರೆ ಓರ್ವ ಗಾಯಗೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ