ರಿಯಲ್‌ ಮ್ಯಾಡ್ರಿಡ್‌ ಮಾಜಿ ಅಧ್ಯಕ್ಷ ಲೊರೆಂಝೊ ಕೋವಿಡ್‌ 19 ವೈರಸ್‌ಗೆ ಬಲಿ

Team Udayavani, Mar 23, 2020, 12:00 AM IST

ರಿಯಲ್‌ ಮ್ಯಾಡ್ರಿಡ್‌ ಮಾಜಿ ಅಧ್ಯಕ್ಷ ಲೊರೆಂಝೊ ಕೋವಿಡ್‌ 19 ವೈರಸ್‌ಗೆ ಬಲಿ

ಮ್ಯಾಡ್ರಿಡ್‌: ಕೋವಿಡ್‌ 19 ಮಾರಿ ಕ್ರೀಡಾಲೋಕಕ್ಕೆ ಬಂದಪ್ಪಳಿಸಿದೆ. ಸ್ಪೇನಿನ ದೈತ್ಯ ಫ‌ುಟ್‌ಬಾಲ್‌ ತಂಡವಾದ ರಿಯಲ್‌ ಮ್ಯಾಡ್ರಿಡ್‌ನ‌ ಮಾಜಿ ಅಧ್ಯಕ್ಷ ಲೊರೆಂಝೊ ಸ್ಯಾಂಜ್‌ (76) ಕೋವಿಡ್‌ 19 ಕ್ಕೆ ಬಲಿಯಾಗಿದ್ದಾರೆ. ಅವರ ಪುತ್ರ, ಬಾಸ್ಕೆಟ್‌ಬಾಲ್‌ ಆಟಗಾರನೂ ಆಗಿರುವ ಸ್ಯಾಂಜ್‌ ಜೂನಿಯರ್‌ ಈ ವಿಷಯವನ್ನು ತಿಳಿಸಿದ್ದಾರೆ.

1995-2000ದ ಅವಧಿಯಲ್ಲಿ ಲೊರೆಂಝೊ ಸ್ಯಾಂಜ್‌ ರಿಯಲ್‌ ಮ್ಯಾಡ್ರಿಡ್‌ ತಂಡದ ಅಧ್ಯಕ್ಷ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಅವರ ತಂಡ 2 ಚಾಂಪಿಯನ್ಸ್‌ ಲೀಗ್‌ಗಳಲ್ಲಿ ಪ್ರಶಸ್ತಿ ಎತ್ತಿತ್ತು.ತನ್ನ ತಂದೆಯನ್ನು ಮ್ಯಾಡ್ರಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕೋವಿಡ್‌ 19 ತಗಲಿರುವುದು ದೃಢಪಟ್ಟಿದೆ ಎಂದು ಜೂ. ಸ್ಯಾಂಜ್‌ 3 ದಿನಗಳ ಹಿಂದೆ ತಿಳಿಸಿದ್ದರು.

1995ರಲ್ಲಿ ಅಧ್ಯಕ್ಷಗಿರಿ
ಲೊರೆಂಝೊ ಸ್ಯಾಂಜ್‌ 1980ರ ನಡು ಅವಧಿಯಲ್ಲಿ ರಿಯಲ್‌ ಮ್ಯಾಡ್ರಿಡ್‌ ತಂಡವನ್ನು ಪ್ರವೇಶಿಸಿದ್ದರು. ಆಗ ರಮೋನ್‌ ಮೆಂಡೋಂಝ ಇದರ ಅಧ್ಯಕ್ಷರಾಗಿದ್ದರು. 1995ರಲ್ಲಿ ಇವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು.

ಜುಪ್‌ ಹೆಂಕೆಸ್‌ ಕೋಚ್‌ ಆಗಿದ್ದ ಈ ತಂಡದಲ್ಲಿ ಡೇವರ್‌ ಸುಕರ್‌, ರಾಬರ್ಟೊ ಕಾರ್ಲೋಸ್‌, ಕ್ಲಾರೆನ್ಸ್‌ ಸೀಡಾಫ್ì, ಫೆರ್ನಾಂಡೊ ಹೀರೊ ಮತ್ತು ರಾಲ್‌ ಮೊದಲಾದ ಸ್ಟಾರ್‌ ಆಟಗಾರರಿದ್ದರು. 1998ರಲ್ಲಿ ಜುವೆಂಟಸ್‌ ತಂಡವನ್ನು ಸೋಲಿಸುವ ಮೂಲಕ ರಿಯಲ್‌ ಮ್ಯಾಡ್ರಿಡ್‌ “ಚಾಂಪಿಯನ್ಸ್‌ ಲೀಗ್‌’ ಚಾಂಪಿಯನ್‌ ಆಗಿತ್ತು. ಇದು ರಿಯಲ್‌ ಮಾಡ್ರಿಡ್‌ ತಂಡಕ್ಕೆ ಒಲಿದ 7ನೇ, ಆದರೆ 32 ವರ್ಷಗಳ ಬಳಿಕ ಒಲಿದ ಮೊದಲ ಯುರೋಪಿಯನ್‌ ಕಪ್‌ ಪ್ರಶಸ್ತಿ ಆಗಿತ್ತು. 2 ವರ್ಷಗಳ ಬಳಿಕ ಪ್ಯಾರಿಸ್‌ನಲ್ಲಿ ವೆಲೆನ್ಸಿಯಾ ತಂಡವನ್ನು ಪರಾಭವಗೊಳಿಸಿ 8ನೇ ಪ್ರಶಸ್ತಿಯನ್ನೆತ್ತಿತು.

ಮ್ಯಾಡ್ರಿಡ್‌ ನಾಯಕನ ಸಂತಾಪ
“ಇದು ರಿಯಲ್‌ ಮ್ಯಾಡ್ರಿಡ್‌ ತಂಡದ ಪಾಲಿಗೆ ಅತ್ಯಂತ ದುಃಖದ ದಿನ. ಲೊರೆಂಝೊ ಸ್ಯಾಂಜ್‌ ನಿನ್ನೆ ಹಾಗೂ ಇಂದಿನ ನಡು ವಿನ ಕೊಂಡಿಯಾಗಿದ್ದರು. ಅವರ ಕುಟುಂಬಕ್ಕೆ ದುಃಖ ವನ್ನು ಸಹಿಸುವ ಶಕ್ತಿ ಲಭಿಸಲಿ, ಸ್ಯಾಂಜೊ ಆತ್ಮಕ್ಕೆ ಶಾಂತಿ ಲಭಿ ಸಲಿ’ ಎಂದು ರಿಯಲ್‌ ಮ್ಯಾಡ್ರಿಡ್‌ ತಂಡದ ನಾಯಕ, ಸ್ಪೇನ್‌ ತಂಡದ ಆಟಗಾರ ಸರ್ಗಿಯೊ ರಮೋಸ್‌ ಟ್ವೀಟ್‌ ಮಾಡಿದ್ದಾರೆ.

ಟಾಪ್ ನ್ಯೂಸ್

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮರಣಾಂತಿಕ ಹಲ್ಲೆ; ಓರ್ವ ಸಾವು

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

14-hospete

Hospete: ಸ್ಮಾರಕಗಳ ಮಹತ್ವ, ಸಂರಕ್ಷಣೆ ಮುಂದಿನ ಪೀಳಿಗೆಗೆ ತಿಳಿಸೋದು ಅಗತ್ಯ: ಡಿಸಿ ದಿವಾಕರ್

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

14

ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್

No court relief, Arvind Kejriwal to remain in jail till July 3

Delhi Liquor Case: ಸಿಎಂ ಅರವಿಂದ್‌ ಕೇಜ್ರಿವಾಲ್‌ ನ್ಯಾಯಾಂಗ ಬಂಧನ ಜು.3ವರೆಗೆ ವಿಸ್ತರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

t20 world cup; usa facing south africa in super 8 clash

T20 World Cup; ದ. ಆಫ್ರಿಕಾ-ಅಮೆರಿಕ ಎಂಟರ ಆಟ; ಇಂದಿನಿಂದ ಸೂಪರ್‌-8

INDWvsSAW; ಇಂದು ದ್ವಿತೀಯ ಏಕದಿನ: ಸರಣಿ ಗೆಲುವಿಗೆ ವನಿತೆಯರ ಸ್ಕೆಚ್‌

INDWvsSAW; ಇಂದು ದ್ವಿತೀಯ ಏಕದಿನ: ಸರಣಿ ಗೆಲುವಿಗೆ ವನಿತೆಯರ ಸ್ಕೆಚ್‌

Match fixing during T20 World Cup?

T20 World Cup ವೇಳೆ ಮ್ಯಾಚ್‌ ಫಿಕ್ಸಿಂಗ್‌?

T20 World Cup; Haris Rauf was about to hit the fan

T20 World Cup; ಅಭಿಮಾನಿಗೆ ಹೊಡೆಯಲು ಮುಂದಾದ ಹ್ಯಾರಿಸ್‌ ರೌಫ್

Gautam Gambhir made a new demand to become the coach of Team India

Head Coach; ಟೀಂ ಇಂಡಿಯಾ ಕೋಚ್ ಆಗಲು ಹೊಸ ಬೇಡಿಕೆ ಇಟ್ಟ ಗೌತಮ್ ಗಂಭೀರ್

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

16-koppala

ತೈಲ ಬೆಲೆ ಏರಿಕೆ ಖಂಡಿಸಿ ಜೂ.20 ರಂದು ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ: ಗುಳಗಣ್ಣನವರ್

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮರಣಾಂತಿಕ ಹಲ್ಲೆ; ಓರ್ವ ಸಾವು

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.