ಇದು ಅತ್ಯಂತ ಕೆಟ್ಟ ಅಂಪೈರಿಂಗ್: ಸಿಟ್ಟಾದ ಗೌತಮ್ ಗಂಭೀರ್, ಗ್ರೇಮ್ ಸ್ವಾನ್
Team Udayavani, Oct 2, 2021, 9:43 AM IST
ದುಬೈ: ಐಪಿಎಲ್ ಕೂಟ ದಿನಕ್ಕೊಂದು ರೋಚಕತೆ ಪಡೆಯುತ್ತಿದೆ. ಪ್ರತಿ ಪಂದ್ಯವೂ ರೋಮಾಂಚನಕಾರಿ ತಿರುವು ಪಡೆಯುತ್ತಿದೆ. ಶುಕ್ರವಾರ ನಡೆದ ಕೆಕೆಆರ್ ಮತ್ತು ಪಂಜಾಬ್ ನಡುವೆ ನಡೆದ ಪಂದ್ಯವೂ ಇಂತಹ ಘಟನೆಗಳಿಗೆ ಸಾಕ್ಷಿಯಾಗಿದೆ.
ಈ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಹಿಡಿದ ಕ್ಯಾಚ್ ಇದೀಗ ಚರ್ಚೆಯ ವಿಷಯವಾಗಿದೆ. ಪಂಜಾಬ್ ಗೆಲುವಿಗೆ 9 ಎಸೆತದಲ್ಲಿ 11 ರನ್ ಅವಶ್ಯಕತೆಯಿತ್ತು. ಈ ವೇಳೆ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಚೆಂಡನ್ನು ಮಿಡ್ ವಿಕೆಟ್ ಕಡೆಗೆ ಬಾರಿಸಿದರು. ಫೀಲ್ಡರ್ ರಾಹುಲ್ ತ್ರಿಪಾಠಿ ಓಡಿ ಬಂದು ಡೈವ್ ಹಾಕಿ ಚೆಂಡನ್ನು ಹಿಡಿದು ಸಂಭ್ರಮಿಸಿದರು.
ಇದನ್ನೂ ಓದಿ:ಫುಟ್‌ಬಾಲ್ ದಿಗ್ಗಜ ಮೆಸ್ಸಿ ಹೋಟೆಲ್ ಕೊಠಡಿಗೇ ಕನ್ನ!
ಆದರೆ ಕ್ಯಾಚ್ ಪರಿಶೀಲಿಸಿದ ಥರ್ಡ್ ಅಂಪೈರ್, ಚೆಂಡು ನೆಲ ಸ್ಪರ್ಷಿಸಿದೆ ಎಂದು ನಾಟೌಟ್ ಎಂದು ತೀರ್ಪಿತ್ತರು. ನಂತರ ಪಂಜಾಬ್ ಗೆಲುವು ಸಾಧಿಸಿತು.
ಆದರೆ ಈ ತೀರ್ಪಿನ ವಿರುದ್ಧ ಗೌತಮ್ ಗಂಭೀರ್ ಮತ್ತು ಗ್ರೇಮ್ ಸ್ವಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ ಇದು ನಾನು ನೋಡಿದ ಅತ್ಯಂತ ಕೆಟ್ಟ ಅಂಪೈರಿಂಗ್ ನಿರ್ಧಾರ’ ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.
ಅವರು ರಿಪ್ಲೇ ಒಂದು ಬಾರಿಗಿಂತ ಹೆಚ್ಚು ನೋಡಿಲ್ಲ. ಒಂದು ವೇಳೆ ಕೆ ಎಲ್ ರಾಹುಲ್ ಔಟಾಗಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು. ಇಂತಹ ಘಟನೆಗಳು ಐಪಿಎಲ್ ನಲ್ಲಿ ಮರುಕಳಿಸಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮತದಾನ ಸಂವಿಧಾನ ನೀಡಿದ ಅವಕಾಶ, ಒಂದು ಓಟಿನಲ್ಲಿ ಅಪಾರ ಶಕ್ತಿ ಅಡಗಿದೆ: ತೇಜಸ್ವಿ ಸೂರ್ಯ
ಮದರಸಾಗಳನ್ನು ಮುಚ್ಚಬೇಕೆನ್ನುವ ಅಸ್ಸಾಂ ಸಿಎಂ ಹೇಳಿಕೆ ಖಂಡಿಸಿದ ಗಾಲಿ ರೆಡ್ಡಿ
ಈ ದೇಶ ಯಾರೋ ಒಬ್ಬರ, ಅದಾನಿ ಸ್ವತ್ತಲ್ಲ : ಬೆಳಗಾವಿಯಲ್ಲಿ ರಾಹುಲ್ ಗಾಂಧಿ
ಉಡುಪಿ:ಹೊಟೇಲ್‌ಗಳಿಗೆ ತಟ್ಟಿದ ನೀರಿನ ಬಿಸಿ – ಹೆಚ್ಚಿದ ಟ್ಯಾಂಕರ್‌ಗಳ ಓಡಾಟ
ಅಮೃತಪಾಲ್ ಗಾಗಿ ಶೋಧ; ಐದು ಸಹಚರರರ ವಿರುದ್ಧ NSA ; ಐಎಸ್‌ಐ ಪಾತ್ರ?