ಆಗ್ರಾ ನಿವಾಸದಲ್ಲೀಗ ಭಾರೀ ಸಂತಸ, ಸಂಭ್ರಮ

Team Udayavani, Nov 12, 2019, 5:28 AM IST

ಆಗ್ರಾ : ದೀಪಕ್‌ ಚಹರ್‌ ಅವರ ಬೌಲಿಂಗ್‌ ಮ್ಯಾಜಿಕ್‌ ಸಹಜವಾಗಿಯೇ ಕುಟುಂದವರನ್ನು ಸಂತಸದಲ್ಲಿ ತೇಲಾಡಿಸಿದೆ. ಅವರ ಆಗ್ರಾ ನಿವಾಸದಲ್ಲೀಗ ಸಂಭ್ರಮಕ್ಕೆ ಪಾರವೇ ಇಲ್ಲ. ನಮ್ಮಿಬ್ಬರ ಕನಸೂ ನನಸಾದ ಕ್ಷಣ ಇದಾಗಿದೆ ಎಂಬುದು ತಂದೆ ಲೋಕೇಂದ್ರ ಸಿಂಗ್‌ ಅವರ ಪ್ರತಿಕ್ರಿಯೆ. ರಾಜಸ್ಥಾನದಲ್ಲಿ ಅವರು ಇಂಡಿಯನ್‌ ಏರ್‌ ಫೋರ್ಸ್‌ ಅಧಿಕಾರಿಯಾಗಿದ್ದಾರೆ.

18ರ ಹರೆಯದಲ್ಲೇ ಹೈದರಾಬಾದ್‌ ಎದುರಿನ ರಣಜಿ ಪದಾರ್ಪಣ ಪಂದ್ಯದಲ್ಲಿ 10 ರನ್ನಿಗೆ 8 ವಿಕೆಟ್‌ ಹಾರಿಸಿದ ಸಾಹಸಿ ದೀಪಕ್‌ ಚಹರ್‌. ಅಂದು ಹೈದರಾಬಾದ್‌ 21 ರನ್ನಿಗೆ ಆಲೌಟ್‌ ಆದುದನ್ನು ಲೋಕೇಂದ್ರ ನೆನಪಿಸಿಕೊಳ್ಳುತ್ತಾರೆ.

ಆದರೆ ಕ್ರಿಕೆಟಿನ ಉತ್ತುಂಗ ದಲ್ಲಿರುವಾಗಲೇ ಎದುರಾದ ಗಾಯದ ಸಮಸ್ಯೆ ದೀಪಕ್‌ ಅವರಿಗೆ ಮಾರಕವಾಗಿ ಪರಿಣಮಿಸಿತು; ಇಲ್ಲವಾದರೆ ಆತ ಎಂದೋ ಭಾರತ ತಂಡದಲ್ಲಿರಬೇಕಿತ್ತು ಎನ್ನುತ್ತಾರೆ. ದೇಶಿ ಕ್ರಿಕೆಟ್‌ನಲ್ಲಿ ದೀಪಕ್‌ ಚಹರ್‌ ರಾಜಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ