ಮಾನಸಿಕವಾಗಿ ಜರ್ಝರಿತನಾಗಿದ್ದೆ: ಗ್ಲೆನ್‌ ಮ್ಯಾಕ್ಸ್‌ವೆಲ್‌

Team Udayavani, Dec 13, 2019, 11:25 PM IST

ಮೆಲ್ಬರ್ನ್: “ನಾನು ಮಾನಸಿಕವಾಗಿ ಜರ್ಝರಿತನಾಗಿ ಹೋಗಿದ್ದೆ, ಅದಕ್ಕಾಗಿಯೇ ವಿಶ್ರಾಂತಿ ಪಡೆದೆ’ ಎಂದು ಆಸ್ಟ್ರೇಲಿಯ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಿಳಿಸಿದ್ದಾರೆ.
ವಿಶ್ರಾಂತಿ ಪಡೆಯುತ್ತಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

“ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಬಳಲಿದ್ದೆ. ಕಳೆದ 8 ತಿಂಗಳಿನಿಂದ ಒತ್ತಡ ಹೆಚ್ಚಾಗಿತ್ತು. ಕಳೆದ ನಾಲ್ಕಾರು ವರ್ಷಗಳಲ್ಲಿ ವಿಪರೀತ ಒತ್ತಡದಲ್ಲೇ ಇದ್ದೆ. ಕೊನೆಗೂ ನನ್ನಲ್ಲಿನ ಬದಲಾವಣೆಯನ್ನು ನನ್ನ ಗೆಳತಿ ಮೊದಲ ಬಾರಿಗೆ ಗುರುತಿಸಿ ತಿಳಿಸಿದಳು. ನಾನು ಎಚ್ಚೆತ್ತುಕೊಂಡು ವಿಶ್ರಾಂತಿಗೆ ನಿರ್ಧರಿಸಿದೆ. ಇದನ್ನು ನಾನು ಕ್ರಿಕೆಟ್‌ ಆಸ್ಟ್ರೇಲಿಯಕ್ಕೆ ತಿಳಿಸಿದೆ. ಅವರು ನನ್ನ ಪರಿಸ್ಥಿತಿಯನ್ನು ಅರಿತುಕೊಂಡು ರಜೆ ನೀಡಿದರು. ಅವರಿಗೆ ಆಭಾರಿಯಾಗಿದ್ದೇನೆ, ಜತೆಗೆ ನಾನು ಪ್ರತಿನಿಧಿಸುತ್ತಿರುವ ಕ್ರಿಕೆಟ್‌ ವಿಕ್ಟೋರಿಯ ಹಾಗೂ ಮೆಲ್ಬರ್ನ್ ಸ್ಟಾರ್ ತಂಡಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ’ ಎಂದರು.

ಸದ್ಯ ಚೇತರಿಸುತ್ತಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮುಂದಿನ ತಿಂಗಳು ನಡೆಯುತ್ತಿರುವ ದೇಶಿ ಕ್ರಿಕೆಟ್‌ ಬಿಗ್‌ ಬಾಶ್‌ ಟಿ20 ಕ್ರಿಕೆಟ್‌ ಲೀಗ್‌ಗೆ ಸಜ್ಜಾಗುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮಾನಸಿಕ ಖನ್ನತೆಗೆ ತುತ್ತಾಗಿದ್ದರು ಎನ್ನುವ ಸುದ್ದಿ ಕ್ರೀಡಾಲೋಕವನ್ನು ತಲ್ಲಣಗೊಳಿಸಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ