ವೈಟ್ ಬಾಲ್ ಸರಣಿ: ನವೆಂಬರ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸ
Team Udayavani, Jun 29, 2022, 12:02 AM IST
ವೆಲ್ಲಿಂಗ್ಟನ್: ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ ಬಳಿಕ ಭಾರತೀಯ ಕ್ರಿಕೆಟ್ ತಂಡವು ವೈಟ್ ಬಾಲ್ ಸರಣಿಗಾಗಿ ನ್ಯೂಜಿಲ್ಯಾಂಡಿಗೆ ಪ್ರಯಾಣಿಸಲಿದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ (ಎನ್‌ಝೆಡ್ ಸಿ) ಮಂಗಳವಾರ ತಿಳಿಸಿದೆ.
ನವೆಂಬರ್ 18ರಿಂದ 30ರ ನಡುವೆ ನಡೆಯಲಿರುವ ಈ ಸರಣಿಯಲ್ಲಿ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳು ಒಳಗೊಂಡಿವೆ. ಆ ಬಳಿಕ ನ್ಯೂಜಿಲ್ಯಾಂಡ್ ತಂಡವು ಮುಂದಿನ ವರ್ಷದ ಜನವರಿಯಲ್ಲಿ ವೈಟ್ ಬಾಲ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲಿದೆ.
ನ್ಯೂಜಿಲ್ಯಾಂಡ್ ವಿರುದ್ಧ ವೆಲ್ಟಿಂಗ್ಟನ್, ತೌರಂಗ ಮತ್ತು ನೇಪಿಯರ್‌ನಲ್ಲಿ ಭಾರತ ತಂಡವು ಟಿ20 ಪಂದ್ಯಗಳನ್ನು ಆಡಲಿದ್ದರೆ ಏಕದಿನ ಪಂದ್ಯಗಳು ಆಕ್ಲಂಡ್, ಹ್ಯಾಮಿಲ್ಟನ್ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ಗೆ ಸಕಲ ಸಿದ್ಧತೆ
ಇಂದಿನಿಂದ ಏಕದಿನ ಸರಣಿ: ಜಿಂಬಾಬ್ವೆ ವಿರುದ್ಧ ಜಬರ್ದಸ್ತ್ ಆಟದ ನಿರೀಕ್ಷೆ
2023-2027 ಕ್ರಿಕೆಟ್ ಋತು: 38 ಟೆಸ್ಟ್ , 39 ಏಕದಿನ ಪಂದ್ಯ ಆಡಲಿದೆ ಭಾರತ
ವಿನೋದ್ ಕಾಂಬ್ಳಿ ಈಗ ನಿರುದ್ಯೋಗಿ; ಬಿಸಿಸಿಐ ಪಿಂಚಣಿಯೇ ಜೀವನಕ್ಕೆ ಆಧಾರ
ಪ್ಯಾರಾ ಏಷ್ಯನ್ ಗೇಮ್ಸ್ :ಪರಿಷ್ಕೃತ ದಿನಾಂಕ ಪ್ರಕಟ