ಧೋನಿ ಸ್ಟೆಂಪಿಂಗ್ ವಿಡಿಯೊ ವೈರಲ್
Team Udayavani, Jun 27, 2017, 3:45 AM IST
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ವಿಕೆಟ್ ಕೀಪರ್ ಧೋನಿ ನಡೆಸಿದ ಸ್ಟಂಪಿಂಗ್ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಾಸನ್ ಹೋಲ್ಡರ್ರನ್ನು ತಮಾಷೆಯ ರೀತಿಯಲ್ಲಿ ಧೋನಿ ಸ್ಟಂಪ್ ಮಾಡಿರುವುದು ಚರ್ಚೆಯ ವಿಷಯವಾಗಿದೆ. ವಿಂಡೀಸ್ ಗೆಲ್ಲಲು 52 ಎಸೆತದಲ್ಲಿ 138 ರನ್ ಬೇಕಿತ್ತು. ಹೋಲ್ಡರ್ ಹಾಗೂ ರೋಸ್ಟನ್ ಸೇರಿಕೊಂಡು ಸಣ್ಣ ಜತೆಯಾಟ ನಿರ್ವಹಿಸಿ ಗೆಲುವಿನ ಆಸೆ ಉಳಿಸಿದ್ದರು. ಈ ಹಂತದಲ್ಲಿ ಕುಲದೀಪ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಹೋಲ್ಡರ್ ಕೀಪರ್ ಧೋನಿ ಸ್ಟಂಪ್ಗೆ ಬಲಿಯಾಗಬೇಕಾಯಿತು. ಕ್ವಿಕ್ ಸ್ಟಂಪಿಂಗ್ನಿಂದ ಖ್ಯಾತಿ ಪಡೆದಿರುವ ಧೋನಿ ನಿಧಾನವಾಗಿ ಸ್ಟಂಪ್ ಮಾಡಿದರು. ಒಂದು ರೀತಿಯಲ್ಲಿ ನೋಡುವುದಾದರೆ ಹೋಲ್ಡರ್ ಅವರನ್ನು ಧೋನಿ ಅಣಕಿಸಿದಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ