ಒದ್ದೆ ಅಂಗಳ; 8 ಓವರ್‌ ಪಂದ್ಯ; ರೋಹಿತ್‌ ಸಾಹಸ; ಸರಣಿ ಸಮಬಲ

Team Udayavani, Sep 23, 2022, 11:07 PM IST

indಒದ್ದೆ ಅಂಗಳ; 8 ಓವರ್‌ ಪಂದ್ಯ; ರೋಹಿತ್‌ ಸಾಹಸ; ಸರಣಿ ಸಮಬಲ

ನಾಗ್ಪುರ: ಎಂಟು ಓವರ್‌ಗಳಿಗೆ ಸೀಮಿತಗೊಂಡ ದ್ವಿತೀಯ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಭಾರತ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 5 ವಿಕೆಟಿಗೆ 90 ರನ್‌ ಮಾಡಿದರೆ, ಭಾರತ 7.2 ಓವರ್‌ಗಳಲ್ಲಿ 4 ವಿಕೆಟಿಗೆ 92 ರನ್‌ ಬಾರಿಸಿತು. ಮೊದಲ ಪಂದ್ಯವನ್ನು ಆಸೀಸ್‌ 4 ವಿಕೆಟ್‌ಗಳಿಂದ ಗೆದ್ದಿತ್ತು. ಅಂತಿಮ ಏಕದಿನ ಪಂದ್ಯ ರವಿವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.

ಚೇಸಿಂಗ್‌ ವೇಳೆ ನಾಯಕ ರೋಹಿತ್‌ ಶರ್ಮ ಸಿಡಿದು ನಿಂತರು. ಹೇಝಲ್‌ವುಡ್‌ ಅವರ ಮೊದಲ ಓವರ್‌ನಲ್ಲೇ 3 ಸಿಕ್ಸರ್‌ ಎತ್ತಿದರು. ಕಪ್ತಾನನ ಕೊಡುಗೆ ಅಜೇಯ 46 ರನ್‌ (20 ಎಸೆತ, 4 ಬೌಂಡರಿ, 4 ಸಿಕ್ಸರ್‌). ದಿನೇಶ್‌ ಕಾರ್ತಿಕ್‌ ಅಂತಿಮ ಓವರ್‌ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌ ಹಾಗೂ ಬೌಂಡರಿ ಬಾರಿಸಿ ಗೆಲುವು ಸಾರಿದರು.
ಒದ್ದೆ ಅಂಗಳದಿಂದಾಗಿ ಪಂದ್ಯ ಎರಡೂವರೆ ಗಂಟೆ ವಿಳಂಬಗೊಂಡಿತು. 9.15ಕ್ಕೆ ಟಾಸ್‌ ಹಾರಿಸಿ, 9.30ಕ್ಕೆ ಪಂದ್ಯವನ್ನು ಪ್ರಾರಂಭಿಸಲಾಯಿತು.

ಭಾರತದ ಬೌಲಿಂಗ್‌ ಆರಂಭಿ ಸಿದವರು ಹಾರ್ದಿಕ್‌ ಪಾಂಡ್ಯ. ಇದರಲ್ಲಿ ಎರಡು ಬೌಂಡರಿ ಸೇರಿದಂತೆ 10 ರನ್‌ ಬಂತು. ಅಕ್ಷರ್‌ ಪಟೇಲ್‌ ಅವರಿಗೂ ಬೌಂಡರಿ ಸ್ವಾಗತ ಸಿಕ್ಕಿತು. ಆದರೆ 3ನೇ ಎಸೆತದಲ್ಲಿ ಕ್ಯಾಮರಾನ್‌ ಗ್ರೀನ್‌ ರನೌಟಾಗಿ ನಿರ್ಗಮಿಸಿದರು. ಕಳೆದ ಪಂದ್ಯದ ಹೀರೋ ಗ್ರೀನ್‌ ಇಲ್ಲಿ ಐದೇ ರನ್ನಿಗೆ ವಾಪಸಾದರು. ಓವರ್‌ನ ಅಂತಿಮ ಎಸೆತದಲ್ಲಿ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಬೌಲ್ಡ್‌ ಆದರು. ಅವರದು ಗೋಲ್ಡನ್‌ ಡಕ್‌ ಆಗಿತ್ತು.

ಚಹಲ್‌ ಎಸೆದ 3ನೇ ಓವರ್‌ ದುಬಾರಿಯಾಯಿತು. ಆಸೀಸ್‌ 12 ರನ್‌ ಬಾರಿಸಿತು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಅಕ್ಷರ್‌ ಪಟೇಲ್‌ ಮತ್ತೊಂದು ವಿಕೆಟ್‌ ಬೇಟೆಯಾಡಿದರು. ಟಿಮ್‌ ಡೇವಿಡ್‌ ಬೌಲ್ಡ್‌ ಆದರು. ಈ ಓವರ್‌ನಲ್ಲಿ ಅವರು ನೀಡಿದ್ದು ನಾಲ್ಕೇ ರನ್‌.

ಬುಮ್ರಾ ದಾಳಿಗೆ ಇಳಿದದ್ದು 5ನೇ ಓವರ್‌ನಲ್ಲಿ. ಇಲ್ಲಿ ಅವರಿಗೆ ಆಸೀಸ್‌ ನಾಯಕನ ವಿಕೆಟ್‌ ಸಿಕ್ಕಿತು. ಆರನ್‌ ಫಿಂಚ್‌ 31 ರನ್‌ ಮಾಡಿ ಬೌಲ್ಡ್‌ ಆದರು. 5 ಓವರ್‌ ಮುಕ್ತಾಯಕ್ಕೆ ಆಸೀಸ್‌ 4 ವಿಕೆಟಿಗೆ 46 ರನ್‌ ಮಾಡಿತ್ತು.

ಮೊದಲ ಪಂದ್ಯದಲ್ಲಿ ತಂಡವನ್ನು ದಡ ಮುಟ್ಟಿಸಿದ ಮ್ಯಾಥ್ಯೂ ವೇಡ್‌ ಅಜೇಯ 43 ರನ್‌ (20 ಎಸೆತ, 4 ಬೌಂಡರಿ, 3 ಸಿಕ್ಸರ್‌) ಬಾರಿಸಿ ಆಸೀಸ್‌ ಸರದಿಯ ಟಾಪ್‌ ಸ್ಕೋರರ್‌ ಎನಿಸಿದರು. ಅವರು ಹರ್ಷಲ್‌ ಪಟೇಲ್‌ ಅವರ ಕೊನೆಯ ಓವರ್‌ನಲ್ಲಿ 3 ಸಿಕ್ಸರ್‌ ಸಿಡಿಸಿದರು. ವೇಡ್‌, ಫಿಂಚ್‌ ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಗಡಿ ದಾಟಲಿಲ್ಲ.

ಬುಮ್ರಾ, ಪಂತ್‌ ಆಗಮನ
ಭಾರತ ಈ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿತು. ಭುವನೇಶ್ವರ್‌ ಕುಮಾರ್‌ ಮತ್ತು ಉಮೇಶ್‌ ಯಾದವ್‌ ಬದಲು ಜಸ್‌ಪ್ರೀತ್‌ ಬುಮ್ರಾ ಹಾಗೂ ರಿಷಭ್‌ ಪಂತ್‌ ಅವರನ್ನು ಸೇರಿಸಿಕೊಳ್ಳಲಾಯಿತು.
ಆಸ್ಟ್ರೇಲಿಯ ತಂಡದಲ್ಲೂ ಎರಡು ಪರಿವರ್ತನೆ ಕಂಡುಬಂತು. ಗಾಯಾಳು ನಥನ್‌ ಎಲ್ಲಿಸ್‌ ಹಾಗೂ ಜೋಶ್‌ ಇಂಗ್ಲಿಸ್‌ ಸ್ಥಾನಕ್ಕೆ ಸೀನ್‌ ಅಬೋಟ್‌ ಮತ್ತು ಡೇನಿಯಲ್‌ ಸ್ಯಾಮ್ಸ್‌ ಬಂದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-5 ವಿಕೆಟಿಗೆ 90 (ವೇಡ್‌ ಔಟಾಗದೆ 43, ಫಿಂಚ್‌ 31, ಅಕ್ಷರ್‌ ಪಟೇಲ್‌ 13ಕ್ಕೆ 2, ಬುಮ್ರಾ 23ಕ್ಕೆ 1). ಭಾರತ-7.2 ಓವರ್‌ಗಳಲ್ಲಿ 4 ವಿಕೆಟಿಗೆ 92 (ರೋಹಿತ್‌ ಔಟಾಗದೆ 46 , ಕೊಹ್ಲಿ 11, ಕಾರ್ತಿಕ್‌ ಔಟಾಗದೆ 10, ರಾಹುಲ್‌ 10, ಪಾಂಡ್ಯ 9, ಝಂಪ 10ಕ್ಕೆ 3).

ಟಾಪ್ ನ್ಯೂಸ್

ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಆರಗ ಜ್ಞಾನೇಂದ್ರ

ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಆರಗ ಜ್ಞಾನೇಂದ್ರ

ಸಂಜಯ್ ರಾವತ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಸಂಜಯ್ ರಾವತ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವು

ಮಧುಗಿರಿ: ಆಟೋ ತಲೆ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

Matthew Wade set to be named Australia’s captain for T20 World Cup

ಗಾಯಗೊಂಡ ಫಿಂಚ್; ಟಿ20 ವಿಶ್ವಕಪ್ ಗೆ ಆಸ್ಟ್ರೇಲಿಯಾಗೆ ಹೊಸ ನಾಯಕ

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

ಟಿ20 ರ್‍ಯಾಂಕಿಂಗ್‌: ಅಗ್ರಸ್ಥಾನ ಕಾಯ್ದುಕೊಂಡ ಭಾರತ

ಟಿ20 ರ್‍ಯಾಂಕಿಂಗ್‌: ಅಗ್ರಸ್ಥಾನ ಕಾಯ್ದುಕೊಂಡ ಭಾರತ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಆರಗ ಜ್ಞಾನೇಂದ್ರ

ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಆರಗ ಜ್ಞಾನೇಂದ್ರ

ಸಂಜಯ್ ರಾವತ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಸಂಜಯ್ ರಾವತ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.