ಇಂಡಿಯನ್ ವೆಲ್ಸ್ ಟೆನಿಸ್: ರಫೆಲ್ ನಡಾಲ್-ಫ್ರಿಟ್ಜ್ ಪ್ರಶಸ್ತಿ ಪೈಪೋಟಿ
Team Udayavani, Mar 20, 2022, 10:54 PM IST
ಇಂಡಿಯನ್ ವೆಲ್ಸ್: ರಫೆಲ್ ನಡಾಲ್ ಮತ್ತು ಅಮೆರಿಕದ ಟೇಲರ್ ಫ್ರಿಟ್ಜ್ “ಇಂಡಿಯನ್ ವೆಲ್ಸ್ ಟೆನಿಸ್’ ಟೂರ್ನಿಯ ಫೈನಲ್ನಲ್ಲಿ ಸೆಣಸಾಡಲಿದ್ದಾರೆ.
21 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಒಡೆಯ ರಫೆಲ್ ನಡಾಲ್ ಸೆಮಿಫೈನಲ್ನಲ್ಲಿ ತಮ್ಮದೇ ದೇಶದ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ ವಿರುದ್ಧ 3 ಸೆಟ್ಗಳ ಕದನದಲ್ಲಿ ಗೆದ್ದು ಬಂದರು. ಅಂತರ 6-4, 4-6, 6-3. ಇದರೊಂದಿಗೆ ನಡಾಲ್ 2022ರ ತಮ್ಮ ಅಜೇಯ ಗೆಲುವಿನ ಓಟವನ್ನು 20 ಪಂದ್ಯಗಳಿಗೆ ವಿಸ್ತರಿಸಿದರು.
“ಅಲ್ಕರಾಜ್ ಅವರನ್ನು ನಾನು ಯುವ ಆಟಗಾರನೆಂದು ಪರಿಗಣಿಸಲೇ ಇಲ್ಲ. ವಿಶ್ವ ರ್ಯಾಂಕಿಂಗ್ನಲ್ಲಿ ಈಗಾಗಲೇ ಅಗ್ರ ನೂರರಲ್ಲಿದ್ದಾರೆ. ಅವರೋರ್ವ ಟಾಪ್ ಪ್ಲೇಯರ್ ಎಂದು ಭಾವಿಸಿಯೇ ಈ ಪಂದ್ಯವನ್ನು ಆಡಲಿಳಿದೆ. ವಿಶ್ವದ ಅತ್ಯುತ್ತಮ ಆಟಗಾರನೊಬ್ಬನ ವಿರುದ್ಧ ಆಡಿದ ಅನುಭವ ನನ್ನದಾಗಿತ್ತು. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದು ನಡಾಲ್ ಪ್ರತಿಕ್ರಿಯಿಸಿದರು.
ಇನ್ನೊಂದು ಸೆಮಿಫೈನಲ್ನಲ್ಲಿ ಟೇಲರ್ ಫ್ರಿಟ್ಜ್ 7-5, 6-4 ಅಂತರದಿಂದ ರಷ್ಯಾದ 7ನೇ ಶ್ರೇಯಾಂಕದ ಆಟಗಾರ ಆ್ಯಂಡ್ರೆ ರುಬ್ಲೇವ್ ಅವರನ್ನು ಮಣಿಸಿದರು. ಫ್ರಿಟ್ಜ್ ಫೈನಲ್ನಲ್ಲಿ ಗೆದ್ದರೆ 2001ರ ಬಳಿಕ ಅಮೆರಿಕನ್ ಆಟಗಾರನಿಗೆ ಇಂಡಿಯನ್ ವೆಲ್ಸ್ ಪ್ರಶಸ್ತಿ ಒಲಿದಂತಾಗುತ್ತದೆ. ಅಂದು ಆ್ಯಂಡ್ರೆ ಅಗಾಸ್ಸಿ ಚಾಂಪಿಯನ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ