ವನಿತಾ ಹಾಕಿ: ಕಿವೀಸ್‌ಗೆ ಹೊಡೆತವಿಕ್ಕಿದ ಭಾರತ

ಭಾರತಕ್ಕೆ 4-0 ಗೆಲುವು; ನಾಯಕಿ ರಾಣಿ ರಾಮ್‌ಪಾಲ್‌ 2 ಗೋಲು

Team Udayavani, Jan 26, 2020, 12:41 AM IST

ಆಕ್ಲೆಂಡ್‌: ನ್ಯೂಜಿಲ್ಯಾಂಡ್‌ ವಿರುದ್ಧ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಹಾಕಿಯಲ್ಲೂ ಭಾರತ ಪಾರಮ್ಯ ಮೆರೆದಿದೆ. ಕಿವೀಸ್‌ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಶನಿವಾರ ನಡೆದ ಮೊದಲ ಪಂದ್ಯದಲ್ಲಿ 4-0 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ನಾಯಕಿ ರಾಣಿ ರಾಮ್‌ಪಾಲ್‌ ಅವಳಿ ಗೋಲು ಬಾರಿಸಿ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು.

ಮೊದಲರ್ಧದಲ್ಲಿ ಗೋಲಿಲ್ಲ
ಪಂದ್ಯದ ಮೊದಲ ಅವಧಿಯಲ್ಲಿ ಭಾರತ ಮಹಿಳಾ ತಂಡದ ಪ್ರದರ್ಶನ ಸಾಕಷ್ಟು ಏರಿಳಿತದಿಂದ ಕೂಡಿತ್ತು. ಆದರೆ 3ನೇ ಕ್ವಾರ್ಟರ್‌ನಲ್ಲಿ ನಾಯಕಿ ರಾಣಿ ರಾಮ್‌ಪಾಲ್‌ ಗೋಲಿನ ಖಾತೆ ತೆರೆದು 1-0 ಮುನ್ನಡೆ ತಂದುಕೊಟ್ಟರು. ಅನಂತರ ಸತತವಾಗಿ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತಾದರೂ ಭಾರತ ಗೋಲು ಗಳಿಸುವಲ್ಲಿ ವಿಫ‌ಲವಾಯಿತು.

4ನೇ ಕ್ವಾರ್ಟರ್‌ನಲ್ಲಿ ಯುವ ಆಟಗಾರ್ತಿ ಶರ್ಮಿಳಾ ಸಾಹಸದಿಂದ ಭಾರತಕ್ಕೆ 2-0 ಮುನ್ನಡೆ ಸಿಕ್ಕಿತು. ಇದರ ಬೆನ್ನಲ್ಲೇ ನಾಯಕಿ ರಾಣಿ ರಾಮ್‌ಪಾಲ್‌ 2ನೇ ಗೋಲು ಸಿಡಿಸಿ ತಂಡಕ್ಕೆ 3-0 ಮುನ್ನಡೆ ತಂದುಕೊಟ್ಟರು. ನಮೀತಾ ಟೊಪ್ಪೊ ಅವರಿಂದ 4ನೇ ಗೋಲು ದಾಖಲಾಯಿತು.

ಅಂತಿಮ ಕ್ವಾರ್ಟರ್‌ನಲ್ಲಿ ಕಿವೀಸ್‌ ವನಿತೆಯರು ಒತ್ತಡ ಹೇರಿದರೂ ಆಗಲೇ ಕಾಲ ಮಿಂಚಿತ್ತು. ಗೋಲು ಗಳಿಕೆಯ ಅವರ ಎಲ್ಲ ಪ್ರಯತ್ನ ವಿಫ‌ಲವಾಯಿತು.

ಆರಂಭದಲ್ಲಿ ತುಸು ಹಿನ್ನಡೆ
“ಪಂದ್ಯದ ಆರಂಭದಲ್ಲಿ ನಾವು ಕೊಂಚ ಎಡವಿದೆವು. ಬಳಿಕ ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸಿ ಗೋಲು ಗಳಿಸುವಲ್ಲಿ ಯಶಸ್ವಿಯಾದೆವು’ ಎಂದು ಕೋಚ್‌ ಸೋರ್ಡ್‌ ಮರಿನ್‌ ಹೇಳಿದರು.

ಭಾರತ ತಂಡ ನ್ಯೂಜಿಲ್ಯಾಂಡ್‌ ವಿರುದ್ಧ 4 ಹಾಗೂ ಗ್ರೇಟ್‌ ಬ್ರಿಟನ್‌ ವಿರುದ್ಧ ಒಂದು ಪಂದ್ಯವನ್ನಾಡಲಿದೆ.

ಕಿರಿಯರ ವಿಶ್ವಕಪ್‌ ಹಾಕಿಗೂ ಒಡಿಶಾ ಆತಿಥ್ಯ?
ಭುವನೇಶ್ವರ: ಪುರುಷರ ವಿಶ್ವಕಪ್‌ ಹಾಕಿ ಕೂಟಕ್ಕೆ ಒಂದರ ಹಿಂದೊಂದರಂತೆ ಆತಿಥ್ಯ ವಹಿಸುತ್ತಿರುವ ಬೆನ್ನಲ್ಲೇ ಒಡಿಶಾದ ಭುವನೇಶ್ವರ ಈಗ ಕಿರಿಯರ ವಿಶ್ವಕಪ್‌ ಹಾಕಿ ಪಂದ್ಯಾವಳಿಯನ್ನೂ ಸಂಘಟಿಸಲಿದೆ ಎನ್ನಲಾಗಿದೆ. ಒಡಿಶಾ ಕ್ರೀಡಾ ಸಚಿವ ತುಷಾರ್‌ಕಾಂತಿ ಬೆಹೆರಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

“ಆತಿಥ್ಯದ ಸಾಧ್ಯತೆ ಬಗ್ಗೆ ಪ್ರತಿಯೊಂದು ಹಂತದಲ್ಲೂ ಮಾತುಕತೆ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಕಿರಿಯ ಹಾಕಿ ವಿಶ್ವಕಪ್‌ ಪಂದ್ಯಾವಳಿಗೂ ನಾವೇ ಆತಿಥ್ಯ ವಹಿಸಲಿದ್ದೇವೆ’ ಎಂದು ಬೆಹೆರಾ ಹೇಳಿದ್ದಾರೆ.

ಈ ಪಂದ್ಯವನ್ನು ಒಲಿಂಪಿಕ್ಸ್‌ ರೀತಿಯಲ್ಲೇ 16 ಆಟಗಾರ್ತಿಯರೊಂದಿಗೆ ಆಡಲಾಗುವುದು. ಪ್ರತೀ ಪಂದ್ಯದಲ್ಲೂ ಆಟಗಾರ್ತಿಯರನ್ನು ಬದಲಾಯಿಸಲಾಗುತ್ತದೆ. ತೀವ್ರ ಒತ್ತಡವನ್ನು ಹೇಗೆ ನಿಭಾಯಿಸಬೇಕು, ಆಟಗಾರರ ಒಟ್ಟಾರೆ ಪ್ರದರ್ಶನ ಹೇಗಿರಲಿದೆ ಎನ್ನುವುದನ್ನೆಲ್ಲ ಗಮನಿಸಿ ಟೋಕಿಯೊ ಒಲಿಂಪಿಕ್ಸ್‌ಗೆ ಸಮರ್ಥ ತಂಡವನ್ನು ರಚಿಸುವುದೇ ನಮ್ಮ ಮುಖ್ಯ ಗುರಿ.
-ಸೋರ್ಡ್‌ ಮರಿನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ