ಪಂಜಾಬ್‌ ವಿರುದ್ಧ ಮುಂಬೈಗೆ ಸೇಡಿನ ಪಂದ್ಯ


Team Udayavani, Apr 10, 2019, 6:30 AM IST

mumbai

ಮುಂಬಯಿ: ಸೋಮವಾರದ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದ ಬೆನ್ನಲ್ಲೇ ಪಂಜಾಬ್‌ ಮೊಹಾಲಿಯಿಂದ ಹೊರಟು ಮುಂಬಯಿಗೆ ಬಂದಿಳಿದಿದೆ. ಬುಧವಾರ ವಾಂಖೇಡೆಯಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಹೋರಾಡಲಿದೆ. ಆದರೆ ಈ ಸವಾಲು ಸುಲಭದ್ದಲ್ಲ. ಮೊಹಾಲಿಯಲ್ಲಿ ಪಂಜಾಬ್‌ ವಿರುದ್ಧ ಎಡವಿದ ಮುಂಬೈ ಪಡೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿ ಕುಳಿತಿದೆ.

ಮೊಹಾಲಿಯಲ್ಲಿ ನಡೆದ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಪಂಜಾಬ್‌ 8 ವಿಕೆಟ್‌ಗಳಿಂದ ರೋಹಿತ್‌ ಬಳಗವನ್ನು ಮಣಿಸಿತ್ತು. ಮುಂಬೈ 7 ವಿಕೆಟಿಗೆ 176 ರನ್‌ ಪೇರಿಸಿದರೂ ಪಂಜಾಬ್‌ 18.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 177 ರನ್‌ ಬಾರಿಸಿ ಗೆದ್ದು ಬಂದಿತ್ತು.

ಮುಂಬೈ ಬ್ಯಾಟಿಂಗ್‌ ಬಗ್ಗೆ ಹೇಳುವುದಾದರೆ, ನಾಯಕ ರೋಹಿತ್‌ ಶರ್ಮ ಇನ್ನೂ ಟಿ20 ಜೋಶ್‌ ತೋರದಿರುವುದು ದೊಡ್ಡ ಹಿನ್ನಡೆ. ಇದರಿಂದ ಉತ್ತಮ ಆರಂಭ ಸಾಧ್ಯವಾಗುತ್ತಿಲ್ಲ. ಆದರೆ ಡಿ ಕಾಕ್‌, ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಪೊಲಾರ್ಡ್‌, ಪಾಂಡ್ಯ ಬ್ರದರ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಇದೆ. ಇವರಲ್ಲಿ ಇಬ್ಬರು ಸಿಡಿದರೂ ಮುಂಬೈಯಿಂದ ದೊಡ್ಡ ಮೊತ್ತ ನಿರೀಕ್ಷಿಸಬಹುದು.

ಪಂಜಾಬ್‌ಗ ಕನ್ನಡಿಗರ ಬಲ
ಪಂಜಾಬ್‌ ತಂಡದ ದೊಡ್ಡ ಬಲವೆಂದರೆ ಕನ್ನಡಿಗರಾದ ಕೆ.ಎಲ್‌. ರಾಹುಲ್‌ ಮತ್ತು ಮಾಯಾಂಕ್‌ ಅಗರ್ವಾಲ್‌ ಉತ್ತಮ ಫಾರ್ಮ್ನಲ್ಲಿರುವುದು. ಮೊದಲ ಸುತ್ತಿನ ಪಂದ್ಯದಲ್ಲಿ ಇವರಿಬ್ಬರ ಜತೆಗೆ ಗೇಲ್‌ ಕೂಡ ಅಮೋಘ ಆಟವಾಡಿ ಪಂಜಾಬ್‌ಗ ಭರ್ಜರಿ ಜಯ ತಂದಿತ್ತಿದ್ದರು. ಸೋಮವಾರವಷ್ಟೇ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ರಾಹುಲ್‌ ಮತ್ತು ಅಗರ್ವಾಲ್‌ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂಬೈ ಎದುರಿನ ಮರು ಪಂದ್ಯದಲ್ಲೂ ಇವರ ಆಟ ನಿರ್ಣಾಯಕ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿದ “ಯುನಿವರ್ಸ್‌ ಬಾಸ್‌’ ಗೇಲ್‌ ಅವರ ಬ್ಯಾಟ್‌ ಸದ್ದು ಮಾಡದಿರುವುದು ಪಂಜಾಬ್‌ಗ ಕೊಂಚ ಹಿನ್ನಡೆಯಾಗಿದೆ. ಗೇಲ್‌ ಮತ್ತೆ ಅಬ್ಬರಿಸಿದರೆ ಪಂಜಾಬ್‌ ದೊಡ್ಡ ಮೊತ್ತ ಕಲೆಹಾಕುವಲ್ಲಿ ಅನುಮಾನವಿಲ್ಲ.

ಎದುರಾಗಿದೆ ಅಲ್ಜಾರಿ ಭೀತಿ
ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಮುಂಬೈ ಈಗ ಚಿಗುರಿಕೊಂಡಿದೆ. ಐದರಲ್ಲಿ 3 ಪಂದ್ಯ ಗೆದ್ದು 5ನೇ ಸ್ಥಾನದಲ್ಲಿದೆ. ಅಲ್ಜಾರಿ ಜೋಸೆಫ್ ಎಂಬ ವೇಗದ ಅಸ್ತ್ರ ಬೌಲಿಂಗ್‌ ಬತ್ತಳಿಕೆಯನ್ನು ಸೇರಿಕೊಂಡಿರುವುದರಿಂದ ಮುಂಬೈ ಸಾಮರ್ಥ್ಯವನ್ನು ಬೇರೆಯೇ ದೃಷ್ಟಿಯಿಂದ ನೋಡಬೇಕಿದೆ. ಹೈದರಾಬಾದ್‌ ವಿರುದ್ಧ ಕೇವಲ 136 ರನ್‌ ಗಳಿಸಿಯೂ ಮುಂಬೈ ಗೆಲ್ಲುವಂತಾದದ್ದು ಜೋಸೆಫ್ ಅವರ ಘಾತಕ ದಾಳಿಯಿಂದ ಎಂಬುದನ್ನು ಮರೆಯುವಂತಿಲ್ಲ. ಐಪಿಎಲ್‌ನ ಪದಾರ್ಪಣ ಪಂದ್ಯದಲ್ಲೇ ಅವರು 12 ರನ್ನಿಗೆ 6 ವಿಕೆಟ್‌ ಉರುಳಿಸಿ ಇತಿಹಾಸ ಬರೆದರು. ಇವರೊಂದಿಗೆ ಬುಮ್ರಾ, ಬೆಹೆÅಂಡಾಫ್ì, ಪಾಂಡ್ಯಾ ಸಹೋದರರನ್ನು ಒಳಗೊಂಡ ಮುಂಬೈ ಬೌಲಿಂಗ್‌ ವಿಭಾಗ ಘಾತಕವಾಗಿದೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.