IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ
Team Udayavani, Mar 27, 2024, 11:39 PM IST
ಚೆನ್ನೈ: ಕಳೆದ ಐಪಿಎಲ್ ಹರಾಜಿನಲ್ಲಿ 8.4 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ಚೆನ್ನೈ ಪಾಲಾಗಿದ್ದ ಸಮೀರ್ ರಿಝ್ವಿ ಸದ್ದು ಮಾಡಲಾರಂಭಿಸಿದ್ದಾರೆ. ಐಪಿಎಲ್ನಲ್ಲಿ ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗೆ ಬಡಿದಟ್ಟಿ ದಾಖಲೆ ಪುಟವನ್ನು ಸೇರಿದ್ದಾರೆ. ಅದೂ ರಶೀದ್ ಖಾನ್ ಎಸೆತಕ್ಕೆ!
“ನಿನ್ನ ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಬೇಡ ಎಂದು ಭೈಯ್ನಾ (ಧೋನಿ) ಸೂಚಿಸಿದ್ದರು. ಐಪಿಎಲ್ ನಲ್ಲಿ ಬ್ಯಾಟಿಂಗ್ ಕೌಶಲ ಮಾಮೂ ಲಾಗಿರುತ್ತದೆ, ಆದರೆ ಮನಸ್ಥಿತಿ ತುಸು ಬೇರೆ ಇರುತ್ತದೆ. ಇದಕ್ಕೆ ಹೊಂದಿ ಕೊಳ್ಳ ಬೇಕಾಗುತ್ತದೆ. ಯಾವುದೇ ಒತ್ತಡ ತಂದುಕೊಳ್ಳಬೇಡ, ನರ್ವಸ್ ಆಗಲೂ ಬೇಡ, ಪರಿಸ್ಥಿತಿಗೆ ತಕ್ಕಂತೆ ಆಡು ಎಂಬುದು ಧೋನಿ ಭೈಯ್ನಾ ನೀಡಿದ ಸಲಹೆ ಆಗಿತ್ತು’ ಎಂಬುದಾಗಿ ರಿಝ್ವಿ ಹೇಳಿದರು.
“ಹರಾಜಿನಲ್ಲಿ ನಾನು ಚೆನ್ನೈ ಪಾಲಾ ದಾಗ ಉಂಟಾದ ಖುಷಿ ಅಷ್ಟಿಷ್ಟಲ್ಲ. ನನಗೆ ಲಭಿಸಿದ ಮೊತ್ತಕ್ಕಿಂತ ಮಿಗಿಲಾಗಿ ಧೋನಿ ಭೈಯ್ನಾ ಅವರನ್ನು ಭೇಟಿಯಾಗುವ, ಅವರ ಜತೆ ಆಡುವ ಕನಸು ನನಸಾದುದಕ್ಕೆ ಹೆಚ್ಚು ಖುಷಿ ಆಗಿತ್ತು’ ಎಂಬುದಾಗಿ ಉತ್ತರಪ್ರದೇಶ ಕ್ರಿಕೆಟರ್ ಹೇಳಿದರು. 10 ಟಿ20 ಇನ್ನಿಂಗ್ಸ್ ಗಳಿಂದ 309 ರನ್ ಬಾರಿಸಿದ ಸಾಧನೆ ರಿಝ್ವಿ ಅವರದು. ಇದರಲ್ಲಿ 2 ಅರ್ಧ ಶತಕಗಳಿವೆ. ಸ್ಟ್ರೈಕ್ರೇಟ್ 137.33.
ತಮ್ಮ ಜೆರ್ಸಿ ಕುರಿತು ರಿಝ್ವಿ ಇದೇ ಸಂದರ್ಭದಲ್ಲಿ ಹೇಳಿಕೊಂಡರು. “ನನ್ನ ಜೆರ್ಸಿ ನಂಬರ್ ಕೂಡ 7. ಆದರೆ ಧೋನಿಯೇ ಇದರ ಮಾಲಿಕ. ಹೀಗಾಗಿ ನಾನಿದನ್ನು ಧರಿಸುವ ಹಾಗಿಲ್ಲ. ಇದರಿಂದ ಒಂದನೇ ನಂಬರ್ ಇಷ್ಟಪಟ್ಟೆ. ಇದೇ ಲಭಿಸಿತು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್