ಐಪಿಎಲ್ ಹರಾಜು: ಭಾರೀ ಮೊತ್ತ ಪಡೆದ ಅಯ್ಯರ್, ರಬಾಡ; ಹುಸಿಯಾಯಿತು ವಾರ್ನರ್ ನಿರೀಕ್ಷೆ
Team Udayavani, Feb 12, 2022, 12:53 PM IST
ಬೆಂಗಳೂರು: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೆಗಾ ಹರಾಜು ಆರಂಭವಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಡೆಯುತ್ತಿರುವ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಪಡೆಯಲು ಫ್ರಾಂಚೈಸಿಗಳು ಭಾರೀ ಕಸರತ್ತು ನಡೆಸುತ್ತಿವೆ.
ಹರಾಜು ಪ್ರಕ್ರಿಯೆಗೆ ಬಂದ ಮೊದಲ ಹೆಸರು ಆರಂಭಿಕ ಆಟಗಾರ ಶಿಖರ್ ಧವನ್. ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಭಾರಿ ಬಿಡ್ ನಡೆಸಿದವು. ನಂತರ ಸೇರ್ಪಡೆಯಾದ ಪಂಜಾಬ್ ಕಿಂಗ್ಸ್ ತಂಡವು ಶಿಖರ್ ಧವನ್ ಅವರನ್ನು 8.25 ಕೋಟಿ ರೂ. ಗೆ ಖರೀದಿ ಮಾಡಿತು.
ರವಿ ಅಶ್ವಿನ್: ಸ್ಟಾರ್ ಸ್ಪಿನ್ನರ್ ರವಿ ಅಶ್ವಿನ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು 5 ಕೋಟಿ ರೂ ಬೆಲೆಗೆ ಖರೀದಿ ಮಾಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ ಅಶ್ವಿನ್ ಗೆ ಸಾಕಷ್ಟು ಬಿಡ್ ನಡೆಸಿತ್ತು.
ಪ್ಯಾಟ್ ಕಮಿನ್ಸ್: ಕಳೆದ ಬಾರಿ ಭಾರಿ ಮೊತ್ತಕ್ಕೆ ಪ್ಯಾಟ್ ಕಮಿನ್ಸ್ ಅವರನ್ನು ಖರೀದಿ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿ 7.25 ಕೋಟಿ ರೂ ಗೆ ಮತ್ತೆ ಖರೀದಿ ಮಾಡಿತು.
ಕಗಿಸೋ ರಬಾಡ: ದಕ್ಷಿಣ ಆಫ್ರಿಕಾದ ವೇಗಿಗೆ ಇಂದಿನ ಹರಾಜಿನಲ್ಲಿ ಭಾರಿ ಬೇಡಿಕೆ ಕಂಡುಬಂತು. ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪೈಪೋಟಿಯ ಬಳಿಕ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ 9.25 ಕೋಟಿ ರೂ ನೀಡಿ ರಬಾಡರನ್ನು ಖರೀದಿ ಮಾಡಿತು.
ಟ್ರೆಂಟ್ ಬೌಲ್ಟ್: ಮಾಜಿ ಮುಂಬೈ ಆಟಗಾರ ಟ್ರೆಂಟ್ ಬೌಲ್ಟ್ ಈ ಬಾರಿ ರಾಜಸ್ಥಾನ ಪಾಲಾದರು. ಮುಂಬೈ-ಆರ್ ಸಿಬಿ ಪೈಪೋಟಿಯ ಬಳಿಕ ರಾಯಲ್ಸ್ ತಂಡ 8 ಕೋಟಿ ರೂ ಗೆ ಬೌಲ್ಟ್ ರನ್ನು ಖರೀದಿಸಿದರು.
ಶ್ರೇಯಸ್ ಅಯ್ಯರ್: ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಯ್ಯರ್ ಹೆಸರು ಕೂಗುತ್ತಿದ್ದಂತೆ ಆರ್ ಸಿಬಿ ಬಿಡ್ ಆರಂಭಿಸಿತು. ಆದರೆ ನಂತರ ಸತತ ಬಿಡ್ ಮಾಡಿದ ಕೆಕೆಆರ್ ಬಿಡ್ ನ್ನು ಎತ್ತರಕ್ಕೇರಿತು. ಕೊನೆಗೆ 12.25 ಕೋಟಿ ರೂ ಗೆ ಶ್ರೇಯಸ್ ಅಯ್ಯರ್ ಕೆಕೆಆರ್ ಪಾಲಾದರು.
ಮೊಹಮ್ಮದ್ ಶಮಿ: ಮಾಜಿ ಪಂಜಾಬ್ ಕಿಂಗ್ಸ್ ಆಟಗಾರ ಮೊಹಮದ್ ಶಮಿಗಾಗಿ ಆರಂಭದಲ್ಲಿ ಆರ್ ಸಿಬಿ ಉತ್ತಮ ಬಿಡ್ ನಡೆಸಿತು. ಅಂತಿಮವಾಗಿ 6.25 ಕೋಟಿ ರೂ ಗಾಗಿ ಶಮಿ ಗುಜರಾತ್ ಟೈಟನ್ಸ್ ಪಾಲಾಯಿತು.
ಫಾಫ್ ಡುಪ್ಲೆಸಿಸ್: ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡುಪ್ಲೆಸಿಸ್ ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು. ಸಿಎಸ್ ಕೆ ಮತ್ತು ಆರ್ ಸಿಬಿ ನಡುವಿನ ಬಿಡ್ ವಾರ್ ಬಳಿಕ ಫಾಫ್ 7 ಕೋಟಿ ರೂಗೆ ಆರ್ ಸಿಬಿ ಪಾಲಾದರು.
ಕ್ವಿಂಟನ್ ಡಿಕಾಕ್: ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರಿಗೂ ಹಲವು ತಂಡಗಳು ಬಿಡ್ ನಡೆಸಿದವು. ಅಂತಿಮವಾಗಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ತಂಡವು ಕ್ವಿಂಟನ್ ರನ್ನು 6.25 ಕೋಟಿ ರೂ ಗೆ ಖರೀದಿಸಿತು.
ಡೇವಿಡ್ ವಾರ್ನರ್: ಮಾಜಿ ಎಸ್ ಆರ್ ಎಚ್ ಆಟಗಾರ ಡೇವಿಡ್ ವಾರ್ನರ್ ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತು. ಭಾರಿ ಮೊತ್ತ ಪಡೆಯುವ ನಿರೀಕ್ಷೆ ಮೂಡಿಸಿದ್ದ ವಾರ್ನರ್ ಗೆ ಡೆಲ್ಲಿ 6.25 ಕೋಟಿ ರೂ ನೀಡಿ ಖರೀದಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ