ಐಪಿಎಲ್: ಆರ್ಸಿಬಿ ಖರೀದಿ;ವಿರಾಟ್ ಕೊಹ್ಲಿ ಖುಷ್
Team Udayavani, Dec 20, 2019, 11:00 PM IST
ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಸಮರ್ಥ ಆಟಗಾರರನ್ನೇ ಖರೀದಿಸಿದೆ ಎಂದು ನಾಯಕ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಐಪಿಎಲ್ನಲ್ಲಿ “ಬೋಲ್ಡ್ ಗೇಮ್’ ಆಡುವುದು ತಂಡದ ಗುರಿ ಎಂದಿದ್ದಾರೆ.
ಗುರುವಾರ ಕೋಲ್ಕತಾದಲ್ಲಿ ನಡೆದ ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ಗಳಾದ ಆರನ್ ಫಿಂಚ್, ಕ್ರಿಸ್ ಮಾರಿಸ್, ವೇಗಿಗಳಾದ ಡೇಲ್ ಸ್ಟೇನ್, ಕೇನ್ ರಿಚರ್ಡ್ಸನ್ ಮೊದ ಲಾದವರಿಗೆ ಬಲೆ ಬೀಸುವಲ್ಲಿ ಆರ್ಸಿಬಿ ಯಶಸ್ವಿಯಾಗಿತ್ತು.
“ನಾವು ಆರಿಸಿದ ಆಟಗಾರರ ಬಗ್ಗೆ ಬಹಳ ಖುಷಿಯಾಗಿದೆ. ಇವರೆಲ್ಲರೂ ಟಿ20ಗೆ ಸಮರ್ಥರಿದ್ದಾರೆ. ಮುಂದಿನ ಐಪಿಎಲ್ ಋತುವನ್ನು ಕುತೂಹಲದಿಂದ ಎದುರು ನೋಡುವಂತಾಗಿದೆ. ಹರಾಜಿಗೂ ಮುನ್ನ ತಂಡದ ಸಮತೋಲನದ ಬಗ್ಗೆ ನಾವು ಬಹಳಷ್ಟು ಚರ್ಚೆ ನಡೆಸಿದ್ದೆವು. ಈಗಿನ ತಂಡ ಸಾಕಷ್ಟು ಬಲಿಷ್ಠವಾಗಿದೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.
“ಎಲ್ಲರೂ ವೈಯಕ್ತಿಕವಾಗಿ ಶ್ರೇಷ್ಠ ಪ್ರದರ್ಶನ ನೀಡುವುದರ ಜತೆಗೆ ದಿಟ್ಟ ಕ್ರಿಕೆಟ್ ಆಡಬೇಕು’ ಎಂದು ಕೊಹ್ಲಿ ಸೂಚಿಸಿದರು. ಆರ್ಸಿಬಿ ಅಧಿಕಾರಿ ಮೈಕ್ ಹೆಸನ್ ಕೂಡ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?