ಜೊಕೋಗೆ ಆಘಾತವಿಕ್ಕಿದ ನಡಾಲ್

Team Udayavani, May 21, 2019, 6:00 AM IST

ರೋಮ್‌: ರಫೆಲ್ ನಡಾಲ್ 9ನೇ ಸಲ ರೋಮ್‌ ಕಿರೀಟವನ್ನು ಏರಿಸಿಕೊಂಡಿದ್ದಾರೆ. ರವಿವಾರ ರಾತ್ರಿ ನಡೆದ ‘ಇಟಾಲಿಯನ್‌ ಓಪನ್‌’ ಫೈನಲ್‌ನಲ್ಲಿ ಅವರು ವಿಶ್ವದ ನಂಬರ್‌ ವನ್‌ ಆಟಗಾರ ನೊವಾಕ್‌ ಜೊಕೋವಿಕ್‌ಗೆ 6-0, 4-6, 6-1 ಅಂತರದ ಸೋಲುಣಿಸಿದರು.

ಇದು ನಡಾಲ್-ಜೊಕೋವಿಕ್‌ ನಡುವಿನ 54ನೇ ಮುಖಾಮುಖೀ. ನಡಾಲ್ ಗೆದ್ದ 34ನೇ ಮಾಸ್ಟರ್ ಟ್ರೋಫಿ. ಇದರೊಂದಿಗೆ ಅವರು ಜೊಕೋವಿಕ್‌ ಅವರ 33 ಮಾಸ್ಟರ್ ಪ್ರಶಸ್ತಿಯ ಗೆಲುವಿನ ದಾಖಲೆಯನ್ನು ಮುರಿದರು. ಒಟ್ಟಾರೆ ಯಾಗಿ ಇದು ನಡಾಲ್ ಟೆನಿಸ್‌ ಬಾಳ್ವೆಯ 81ನೇ ಪ್ರಶಸ್ತಿ.

ಈ ಜಯದೊಂದಿಗೆ ಇನ್ನೊಂದೇ ವಾರದಲ್ಲಿ ಆರಂಭವಾ ಗಲಿರುವ ಫ್ರೆಂಚ್ ಓಪನ್‌ ಪಂದ್ಯಾವಳಿಗೆ ರಫೆಲ್ ನಡಾಲ್ ಹೊಸ ಹುರುಪಿನೊಂದಿಗೆ ಅಣಿಯಾದಂತಾಯಿತು.

ಮೊದಲ ಸೆಟ್‌ನಲ್ಲಿ ಜೊಕೋವಿಕ್‌ಗೆ ನಡಾಲ್ ಒಂದೂ ಅಂಕ ಬಿಟ್ಟುಕೊಡದಿದ್ದುದು ಈ ಕೂಟದ ವಿಶೇಷ. ಜೊಕೋ ವಿರುದ್ಧ ನಡಾಲ್ ಸಾಧಿಸಿದ ಮೊದಲ 6-0 ಗೆಲುವು ಇದಾ ಗಿತ್ತು. ಆದರೆ ದ್ವಿತೀಯ ಸೆಟ್‌ನಲ್ಲಿ 4 ಬ್ರೇಕ್‌ ಅವಕಾಶ ಕಳೆದು ಕೊಳ್ಳಬೇಕಾಯಿತು. 3ನೇ ಸೆಟ್‌ನಲ್ಲಿ ಮತ್ತೆ ತಿರುಗಿ ಬಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ