ಜಾಕ್ಸನ್ 103; ಹಿಡಿತ ಸಾಧಿಸಿದ ಸೌರಾಷ್ಟ್ರ
Team Udayavani, Mar 2, 2020, 12:48 AM IST
ರಾಜ್ಕೋಟ್: ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಮತ್ತೂಂದು ಸೆಮಿಫೈನಲ್ನಲ್ಲಿ ಗುಜರಾತ್ ವಿರುದ್ಧ ಆತಿಥೇಯ ಸೌರಾಷ್ಟ್ರ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸೌರಾಷ್ಟ್ರದ 304 ರನ್ನುಗಳ ಮೊದಲ ಇನ್ನಿಂಗ್ಸ್ಗೆ ಉತ್ತರವಾಗಿ ಗುಜರಾತ್ 6 ವಿಕೆಟಿಗೆ 119 ರನ್ ಗಳಿಸಿ ದ್ವಿತೀಯ ದಿನದಾಟ ಮುಗಿಸಿದೆ. ಇನ್ನೂ 185 ರನ್ನುಗಳ ಹಿನ್ನಡೆಯಲ್ಲಿದೆ.
ಸೌರಾಷ್ಟ್ರದ ಮೊತ್ತವನ್ನು ಮುನ್ನೂರರಾಚೆ ದಾಟಿಸುವಲ್ಲಿ ಶೆಲ್ಡನ್ ಜಾಕ್ಸನ್ ಅವರ ಶತಕದಾಟ ಪ್ರಮುಖ ಪಾತ್ರ ವಹಿಸಿತು. ಅವರು 103 ರನ್ ಬಾರಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಜಾಕ್ಸನ್ ಬಾರಿಸಿದ 19ನೇ ಶತಕ, ಪ್ರಸಕ್ತ ಋತುವಿನಲ್ಲಿ ಮೂರನೆಯದು. 204 ಎಸೆತ ಎದುರಿಸಿದ ಜಾಕ್ಸನ್, 15 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಗುಜರಾತ್ ಪರ ಅರ್ಜಾನ್ 5, ಅಕ್ಷರ್ ಪಟೇಲ್ 3, ರೂಶ್ ಕಲಾರಿಯ 2 ವಿಕೆಟ್ ಉರುಳಿಸಿದರು.
ಜವಾಬು ನೀಡಲಾರಂಭಿಸಿದ ಗುಜರಾತ್ ಒಂದು ರನ್ ಮಾಡುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಈ ಕುಸಿತದಿಂದ ಪಾರಾಗಲು ಇನ್ನೂ ಸಾಧ್ಯವಾಗಿಲ್ಲ.
ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ-304 (ಜಾಕ್ಸನ್ 103, ಪರ್ಮಾರ್ 37, ಅರ್ಜಾನ್ 81ಕ್ಕೆ 5, ಅಕ್ಷರ್ ಪಟೇಲ್ 56ಕ್ಕೆ 3). ಗುಜರಾತ್-6 ವಿಕೆಟಿಗೆ 119 (ರಾವಲ್ 35, ರುಜುಲ್ ಭಟ್ ಬ್ಯಾಟಿಂಗ್ 27, ಪಾರ್ಥಿವ್ ಪಟೇಲ್ 27, ಡಿ. ಜಡೇಜ 10ಕ್ಕೆ 2, ಉನಾದ್ಕತ್ 42ಕ್ಕೆ 2).