ಮತ್ತೂಂದು ತೆಂಡುಲ್ಕರ್‌ ದಾಖಲೆ ಮುರಿಯಲು ಕೊಹ್ಲಿ ಸಜ್ಜು

Team Udayavani, Nov 29, 2018, 6:45 AM IST

ಸಿಡ್ನಿ: ಒಂದರ ಹಿಂದೆ ಒಂದರಂತೆ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯನ್ನು ಮುರಿಯುತ್ತಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಈಗ ಮತ್ತೂಂದು ದಾಖಲೆ ಮುರಿಯಲು ಸಜ್ಜಾಗಿ ನಿಂತಿದ್ದಾರೆ. 

ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯ ವಿರುದ್ಧ ಗರಿಷ್ಠ ಟೆಸ್ಟ್‌ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಹತ್ತಿರಾಗಿದ್ದಾರೆ. ಪ್ರಸ್ತುತ ಆಸೀಸ್‌ನಲ್ಲಿ ಅವರು 5 ಶತಕ ಬಾರಿಸಿದ್ದಾರೆ. 

ಇನ್ನೆರಡು ಶತಕ ಬಾರಿಸಿದರೆ ಸಚಿನ್‌ ದಾಖಲೆ ಪತನವಾಗಲಿದೆ. ಸದ್ಯ 8 ಪಂದ್ಯಗಳಲ್ಲಿ 5 ಶತಕ ಬಾರಿಸಿ ಸುನೀಲ್‌ ಗಾವಸ್ಕರ್‌ ಜೊತೆಗೆ ಕೊಹ್ಲಿ ಸಮಬಲ ಹೊಂದಿದ್ದಾರೆ. ಸಚಿನ್‌ ತೆಂಡುಲ್ಕರ್‌ ಆಸ್ಟ್ರೇಲಿಯ ವಿರುದ್ಧ 6 ಶತಕ ಬಾರಿಸಲು 20 ಪಂದ್ಯ ಬಳಸಿಕೊಂಡಿದ್ದಾರೆ. ಅದೇ ಕೊಹ್ಲಿ ಬರೀ 8 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸಚಿನ್‌ 1809 ರನ್‌ ಗಳಿಸಿದ್ದರೆ, ಕೊಹ್ಲಿ 992 ರನ್‌ ಗಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ