ಆಮ್ರಪಾಲಿ ಪ್ರಕರಣ: ಧೋನಿಗೆ ಕಳಂಕ

Team Udayavani, Dec 3, 2019, 12:12 AM IST

ಹೊಸದಿಲ್ಲಿ: “ಆಮ್ರಪಾಲಿ ಗ್ರೂಪ್‌ ರಿಯಲ್‌ ಎಸ್ಟೇಟ್‌’ ಸಂಸ್ಥೆಯ ರಾಯಭಾರಿ ಯಾದ ತಪ್ಪಿಗೆ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಈಗಲೂ ಪಶ್ಚಾತ್ತಾಪಪಡುವಂತಾಗಿದೆ. ಸಂಸ್ಥೆ ಮಾಡಿದ ಮೋಸ ದೊಡ್ಡ ಉರುಳಾಗಿ ಪರಿಣಮಿಸಿದೆ.

“ಧೋನಿಯ ಮುಖ ನೋಡಿ ನಾವು ಆಮ್ರಪಾಲಿಗೆ ಫ್ಲ್ಯಾಟ್‌ಗಾಗಿ ಹಣ ನೀಡಿದ್ದೆವು. ಆದ್ದರಿಂದ ಅವರನ್ನೂ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಬೇಕು’ ಎಂದು ಹಲವರು ಎಫ್ಐಆರ್‌ ದಾಖಲಿಸಿದ್ದಾರೆ. ಈಗಾಗಲೇ ಗುಂಪಿನಿಂದ ಸಂಬಂಧ ಕಡಿದುಕೊಂಡಿರುವ ಧೋನಿ, ಸ್ವತಃ ತನಗೂ ಸಂಸ್ಥೆ ವಂಚಿಸಿದೆ ಎಂದು ದೂರು ದಾಖಲಿಸಿದ್ದಾರೆ. ಆದರೂ ಜನ ಮಾತ್ರ ಧೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದನ್ನು ನಿಲ್ಲಿಸಿಲ್ಲ.

ಈಗಾಗಲೇ ಸರ್ವೋಚ್ಚ ನ್ಯಾಯಾಲಯ “ಆಮ್ರಪಾಲಿ’ಯನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸಿದೆ. ಜು. 23ರಂದು ನೀಡಿದ ತೀರ್ಪಿನಲ್ಲಿ, ಆಮ್ರಪಾಲಿ ಅಕ್ರಮವಾಗಿ ಜನರ ಹಣವನ್ನು ವಿವಿಧ ಕಂಪೆನಿಗಳಲ್ಲಿ ತೊಡಗಿಸಿದೆ ಎಂದು ಹೇಳಿತ್ತು. ಇದರಲ್ಲಿ ಧೋನಿ ಪತ್ನಿ ಸಾಕ್ಷಿ ಮಾಲಕತ್ವದ ಕಂಪೆನಿಯೂ ಸೇರಿದೆ ಎನ್ನುವುದು ಗಮನಾರ್ಹ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ