ಮೆಕ್ಸಿಕೊ ಓಪನ್: ನಡಾಲ್,ವಾಟ್ಸನ್ ಚಾಂಪಿಯನ್ಸ್
Team Udayavani, Mar 2, 2020, 12:32 AM IST
ಲಾಸ್ ಏಂಜಲೀಸ್: ವಿಶ್ವದ ನಂ. 2 ಆಟಗಾರ, ಸ್ಪೇನ್ನ ರಫೆಲ್ ನಡಾಲ್ “ಮೆಕ್ಸಿಕೊ ಓಪನ್ ಟೆನಿಸ್’ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಫೈನಲ್ನಲ್ಲಿ ಅವರು ಯಾವುದೇ ಶ್ರೇಯಾಂಕ ಹೊಂದಿಲ್ಲದ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ 6-3, 6-2 ನೇರ ಸೆಟ್ಗಳ ಜಯ ಸಾಧಿಸಿದರು.
ಇದು ಈ ವರ್ಷ ನಡಾಲ್ ಗೆದ್ದ ಮೊದಲ ಪ್ರಶಸ್ತಿ. ಹಾಗೆಯೇ 3ನೇ ಮೆಕ್ಸಿಕೊ ಕಿರೀಟವೂ ಹೌದು. ಇದಕ್ಕೂ ಮೊದಲು 2005 ಮತ್ತು 2013ರಲ್ಲಿ ನಡಾಲ್ ಇಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಒಟ್ಟಾರೆಯಾಗಿ ಟೆನಿಸ್ ಬಾಳ್ವೆಯಲ್ಲಿ ನಡಾಲ್ಗೆ ಒಲಿದ 85ನೇ ಪ್ರಶಸ್ತಿ ಇದಾಗಿದೆ.
33 ವರ್ಷದ ನಡಾಲ್ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ಸೋತ ಬಳಿಕ ಆಡಿದ ಮೊದಲ ಪಂದ್ಯಾವಳಿ ಇದಾಗಿದೆ. ಆರಂಭದ ಸೆಟ್ನಲ್ಲಿ ಕೊಂಚ ಪೈಪೋಟಿ ನೀಡಿದ ಟೇಲರ್ ಮುಂದಿನ ಸುತ್ತಿನಲ್ಲಿ ನಡಾಲ್ ಅವರ ಬಲಿಷ್ಠ ಸರ್ವ್ಗಳ ಮುಂದೆ ಸಂಪೂರ್ಣ ವೈಫಲ್ಯ ಅನುಭವಿಸಿದರು.
ಹೀತರ್ ವಾಟ್ಸನ್ಗೆ ಪ್ರಶಸ್ತಿ
ಈ ಕೂಟದ ವನಿತಾ ಸಿಂಗಲ್ಸ್ ಪ್ರಶಸ್ತಿ ಅಮೆರಿಕದ ಹೀತರ್ ವಾಟ್ಸನ್ ಪಾಲಾಯಿತು. ತೀವ್ರ ಪೈಪೋಟಿಯ ಫೈನಲ್ನಲ್ಲಿ ಅವರು ಕೆನಡಾದ ಯುವ ಆಟಗಾರ್ತಿ ಲೇಯಾÉ ಫೆರ್ನಾಂಡಿಸ್ ವಿರುದ್ಧ 6-4, 6-7 (6-8), 6-1 ಅಂತರದ ಜಯ ಸಾಧಿಸಿದರು. ಇವರಿಬ್ಬರ ಹೋರಾಟ 2 ಗಂಟೆ, 46 ನಿಮಿಷಗಳ ತನಕ ಸಾಗಿತು.
ಇದು 3 ವರ್ಷಗಳ ಬಳಿಕ ವಾಟ್ಸನ್ ಗೆದ್ದ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಎಂಬುದು ವಿಶೇಷ.