ಮಿಥಾಲಿ ಪುರುಷರ ಕ್ರಿಕೆಟ್ ತಂಡಕ್ಕೆ ಕೋಚ್ ಆಗಲಿ: ಶಾರುಖ್ ಖಾನ್
Team Udayavani, Jan 4, 2018, 9:42 AM IST
ಕೋಲ್ಕತಾ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಪುರುಷರ ತಂಡದ ಕೋಚ್ ಆಗಲಿ ಎಂದು ಬಾಲಿವುಡ್ ತಾರೆ ಶಾರುಖ್ ಖಾನ್ ಹೇಳಿದ್ದಾರೆ. ಟೀವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಮಿಥಾಲಿ ಪ್ರತಿಭಾವಂತೆ. ಭವಿಷ್ಯದಲ್ಲಿ ಆಕೆ ಇನ್ನಷ್ಟು ಸಾಧನೆ ಮಾಡುವ ಅವಕಾಶವಿದೆ. ಅಷ್ಟೇ ಅಲ್ಲ ಪುರುಷರ ತಂಡಕ್ಕೆ ಮಿಥಾಲಿ ರಾಜ್ ಕೋಚ್ ಆಗುವುದನ್ನು ನೋಡಬಯಸುತ್ತೇನೆ ಎಂದರು. ಇದೇ ವೇಳೆ ಮಾತನಾಡಿದ ಮಿಥಾಲಿ ರಾಜ್, ಕ್ರಿಕೆಟ್ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದರೆ ಸ್ಪಷ್ಟವಾಗಿ ಫಲಿತಾಂಶ ಕಾಣುವ ಅವಕಾಶವಿದೆ ಎಂದು ತಿಳಿಸಿದರು. ಮಿಥಾಲಿ ರಾಜ್ ನೇತೃತ್ವದಲ್ಲಿ ಭಾರತ ಮಹಿಳಾ ತಂಡ ಏಕದಿನ ಕ್ರಿಕೆಟ್ನಲ್ಲಿ ಫೈನಲ್ ತನಕ ಪ್ರವೇಶಿಸಿದ್ದನ್ನು ಸ್ಮರಿಸಬಹುದು.