ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಸೆಮಿಫೈನಲ್‌ ಪ್ರವೇಶ


Team Udayavani, Apr 13, 2019, 10:03 AM IST

sindhu

ಸಿಂಗಾಪುರ: ಪಿ.ವಿ. ಸಿಂಧು “ಸಿಂಗಾಪುರ ಓಪನ್‌’ ಬ್ಯಾಡ್ಮಿಂಟನ್‌ ಕೂಟದ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಸೈನಾ, ಶ್ರೀಕಾಂತ್‌ ಸಹಿತ ಉಳಿದೆಲ್ಲ ಆಟಗಾರರು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಗುರುವಾರ ನಡೆದ ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಚೀನದ ಕಿಯಾ ಯಾನ್‌ ಯಾನ್‌ ಅವರನ್ನು ಒಂದು ಗಂಟೆಯ ಹೋರಾಟದ ಬಳಿಕ 21-13, 17-21, 21-14 ಗೇಮ್‌ಗಳಿಂದ ಸೋಲಿಸಿದರು. ಮೊದಲ ಬಾರಿಗೆ ಯಾನ್‌ ಯಾನ್‌ ಅವರನ್ನು ಎದುರಿಸಿದ ಸಿಂಧು ಮೊದಲ ಗೇಮ್‌ ಅನ್ನು ಸುಲಭವಾಗಿ ಜಯಿಸಿದರು. ಆದರೆ ದ್ವಿತೀಯ ಗೇಮ್‌ನಲ್ಲಿ ಪ್ರತಿಸ್ಪರ್ಧಿಯಿಂದ ಸಿಂಧುಗೆ ತಕ್ಕ ಪೈಪೋಟಿಯೇ ದೊರಕಿದ ಕಾರಣ ಸೋಲನುಭವಿಸಿದರು.

ದ್ವಿತೀಯ ಗೇಮ್‌ನಲ್ಲಿ ಎಡವಿದ ಸಿಂಧು ನಿರ್ಣಾಯಕ ಗೇಮ್‌ನಲ್ಲಿ ಎಚ್ಚರಿಕೆ ಆಟವಾಡಿ 21-14 ಗೇಮ್‌ಗಳಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಜಪಾನಿನ ನೊಜೊಮಿ ಒಕುಹಾರ ಅವರನ್ನು ಎದುರಿಸಲಿದ್ದಾರೆ. ಒಕುಹಾರ ತನ್ನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್‌ ಅವರನ್ನು ಕೇವಲ 37 ನಿಮಿಷಗಳ ಆಟದಲ್ಲಿ 21-8, 21-13 ನೇರ ಗೇಮ್‌ಗಳಿಂದ ಸೋಲಿಸಿದರು.

ಶ್ರೀಕಾಂತ್‌ ಪರಾಭವ
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದ ಸಮೀರ್‌ ವರ್ಮ ಮತ್ತು ಕೆ. ಶ್ರೀಕಾಂತ್‌ ಜಯ ಸಾಧಿಸುವಲ್ಲಿ ವಿಫ‌ಲರಾದರು.  ಸಮೀರ್‌ ವರ್ಮ ಚೈನೀಸ್‌ ತೈಪೆಯ ಚುಹು ಟಿನ್‌ ಚೆನ್‌ ವಿರುದ್ಧ 10-21, 21-15, 15-21 ಗೇಮ್‌ಗಳಿಂದ ಸೋಲನುಭವಿಸಿದರು. ಈ ಸೋಲಿನ ಬೆನ್ನಲ್ಲೆ ಭಾರತದ ಭರವಸೆಯ ಸಿಂಗಲ್ಸ್‌ ಆಟಗಾರ ಕೆ. ಶ್ರೀಕಾಂತ್‌ ವಿಶ್ವದ ನಂ. ವನ್‌ ಆಟಗಾರ. ಜಪಾನಿನ ಕೆಂಟೊ ಮೊಮೊಟಾ ವಿರುದ್ಧ 18-21, 21-19, 9-21 ಗೇಮ್‌ಗಳಿಂದ ಪರಾಭವಗೊಂಡರು.

ಕೆಂಟೊ ವಿರುದ್ಧದ 15 ಮುಖಾಮುಖೀಯಲ್ಲಿ ಕೇವಲ 3 ಪಂದ್ಯ ಗೆದ್ದಿರುವ ಶ್ರೀಕಾಂತ್‌ ಈ ಪಂದ್ಯದಲ್ಲಿ ಜಯಿಸಿ ಗೆಲುವಿನ ಅಂತರವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೊದಲ ಗೇಮ್‌ನಲ್ಲಿ ಶ್ರೀಕಾಂತ್‌ ಸ್ವಲ್ಪ ಪೈಪೋಟಿ ನೀಡಿದರೂ ಕೊನೆಯಲ್ಲಿ ಸೋತರು. ದ್ವಿತೀಯ ಗೇಮ್‌ನಲ್ಲಿ ಶ್ರೀಕಾಂತ್‌ ಅತ್ಯುತ್ತಮ ಪ್ರದರ್ಶನ ನೀಡಿ ಜಯಿಸಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಹೀನಾಯವಾಗಿ ಸೋತು ಕೂಟದಿಂದ ನಿರ್ಗಮಿಸಿದರು.

ಮಿಕ್ಸೆಡ್‌ ಡಬಲ್ಸ್‌ ವಿಭಾಗದಲ್ಲಿ ಪ್ರಣವ್‌ ಚೆರ್ರಿ ಜೋಪ್ರಾ-ಎನ್‌. ಸಿಕ್ಕಿ ರೆಡ್ಡಿ ಜೋಡಿ ಥಾಯ್ಲೆಂಡ್‌ ಜೋಡಿಯೆದುರು 14-21, 16-21 ನೇರ ಗೇಮ್‌ಗಳ ಸೋಲನುಭವಿಸಿ ನಿರಾಸೆ ಮೂಡಿಸಿದ್ದಾರೆ.

ಟಾಪ್ ನ್ಯೂಸ್

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kollur ಯುವತಿ ಮೇಲೆ ಅತ್ಯಾಚಾರ; ದೂರು

Kollur ಯುವತಿ ಮೇಲೆ ಅತ್ಯಾಚಾರ; ದೂರು

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwew

IPL; ಚೆನ್ನೈ ವಿರುದ್ಧ ಅಬ್ಬರ; ಗುಜರಾತ್ ಪ್ಲೇ ಆಫ್ ಆಸೆ ಜೇವಂತ

1–wwqaeeq

Mangaluru; ಮಂಗಳಾ ಕಪ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟಕ್ಕೆ ಚಾಲನೆ

1-weewewq

Punjab ಅಭಿಮಾನಿಗಳ ಕ್ಷಮೆ ಕೋರಿದ ನಾಯಕ ಸ್ಯಾಮ್‌ ಕರನ್‌

1-wqeqewqewq

Tennis; ಇದೇ ಕೊನೆಯ ಸೀಸನ್‌:ಡೊಮಿನಿಕ್‌ ಥೀಮ್‌

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kollur ಯುವತಿ ಮೇಲೆ ಅತ್ಯಾಚಾರ; ದೂರು

Kollur ಯುವತಿ ಮೇಲೆ ಅತ್ಯಾಚಾರ; ದೂರು

1-wqeqwew

IPL; ಚೆನ್ನೈ ವಿರುದ್ಧ ಅಬ್ಬರ; ಗುಜರಾತ್ ಪ್ಲೇ ಆಫ್ ಆಸೆ ಜೇವಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.