Viral Video: ದೈತ್ಯ ಗಿಳಿಯ ಫುಟ್ಬಾಲ್ ಮೋಹ ; ಆಟಗಾರ್ತಿಯ ತಲೆಯೇರಿದ್ದೇಕೆ ಗಿಣಿರಾಮ?
Team Udayavani, Sep 22, 2020, 8:33 PM IST
ಬ್ರಜಿಲ್: ಇಲ್ಲಿನ ಫುಟ್ಬಾಲ್ ತಂಡವೊಂದು ಅಭ್ಯಾಸ ನಡೆಸುತ್ತಿದ್ದ ವೇಳೆ ದೈತ್ಯ ಗಾತ್ರದ ಗಿಳಿಯೊಂದು ಅವರ ಅಭ್ಯಾಸಕ್ಕೆ ಅಡ್ಡಿಪಡಿಸುತ್ತಿರುವ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬ್ರಜಿಲ್ನ ರಾಷ್ಟ್ರೀಯ ತಂಡದ ಡಿಫೆಂಡರ್ ಬ್ರೂನಾ ಬೆನೈಟ್ಸ್ ಅವರು ಈ ವೀಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಬ್ರಜಿಲ್ನ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ತಂಡವು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಈ ಕುತೂಹಲಕಾರಿ ಸಂಗತಿ ನಡೆದಿದೆ. ಮೈದಾನಕ್ಕೆ ಹಾರಿ ಬಂದ ದೈತ್ಯ ಮಾಕಾವ್ ನೇರವಾಗಿ ಬ್ರೂನಾ ಅವರ ತಲೆ ಮೇಲೆ ಕುಳಿತುಕೊಳ್ಳುತ್ತದೆ.
ಆ ಸಂದರ್ಭದಲ್ಲಿ ಗಿಳಿಗೆ ಫುಟ್ಬಾಲನ್ನು ತೋರಿಸಲಾಯಿತು. ಆಗ ಪುಟ್ಬಾಲ್ ಮೇಲೆ ಕುಳಿತು ಬಳಿಕ ಅಲ್ಲಿಂದ ಹಾರಿ ನೇರವಾಗಿ ಹತ್ತಿರದಲ್ಲಿದ್ದ ಗೋಲ್ ಪೋಸ್ಟ್ ಒಂದರ ಮೇಲೆ ಕುಳಿಕೊಳ್ಳುವ ದೃಶ್ಯ ಈ ವೀಡಿಯೋದಲ್ಲಿ ದಾಖಲಾಗಿದೆ.
ಆಟಗಾರ್ತಿ ಬ್ರೂನಾ ಅವರು ಕೆಲವು ದಿನಗಳ ಹಿಂದೆ ಈ ವೀಡಿಯೋ ತುಣುಕನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. 38 ಸಾವಿರಕ್ಕೂ ಅಧಿಕ ಜನ ಈ ವೀಡಿಯೋ ವೀಕ್ಷಿಸಿದ್ದು, ವೈರಲ್ ಆಗಿದೆ.
ಬ್ರೂನಾ ಅವರು ಈ ವೀಡಿಯೋದ ಮೂಲಕ ಪಂತನಾಲ್ ಜೌಗು ಪ್ರದೇಶ ಮತ್ತು ಅಮೇಜಾನ್ ಮಳೆಕಾಡುಗಳಲ್ಲಿ ಹೆಚ್ಚುತ್ತಿರುವ ಕಾಡ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
‘ಲಾಭದಾಸೆಯಿಂದ ಇಂದು ಏನೆಲ್ಲ ನಡೆಯುತ್ತಿದೆ. ನಾನು ಮ್ಯಾಟೊ ಗ್ರೊಸೊದವಳಾಗಿದ್ದೂ ಕೂಡ, ಪಂತನಾಲ್ನಲ್ಲಿ ನಡೆಯುತ್ತಿರುವ ಇಂಥ ಘಟನೆಗಳಿಗೆ ದುಃಖ ವ್ಯಕ್ತಪಡಿಸಲಾಗದಂತಹ ಅಸಹಾಯಕ ಸ್ಥಿತಿಯಲ್ಲಿದ್ದೇನೆ. ಕಾಡ್ಗಿಚ್ಚಿನಿಂದಾಗಿ ಸಾವಿರಾರು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಇದು ಹೀಗೇ ಮುಂದುವರೆದರೆ, ಈ ವೀಡಿಯೋದಲ್ಲಿ ನೀವು ಕಾಣುತ್ತಿರುವಂಥ ದೃಶ (ಅಪರೂಪ)ಗಳನ್ನು ಮುಂದೊಂದು ದಿನ ನಾವು ಕಾಣುವುದು ಸಾಧ್ಯವೇ ಇಲ್ಲ. ಹಾಗಾಗಿ ನಾವು ಜಾಗೃತರಾಗೋಣ. ನಮ್ಮ ಅತೀ ದೊಡ್ಡ ಆಸ್ತಿಯಾದ ಪೃಕೃತಿಯನ್ನು ಕಾಪಪಾಡಿಕೊಳ್ಳೊಣ’ ಎಂದು ವೀಡಿಯೋದ ಕೆಳಗೆ ಅವರು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ