ಪ್ರೊ ಕಬಡ್ಡಿ: ನವೀನ್‌ ದಾಳಿಗೆ ಬೆಚ್ಚಿಬಿದ್ದ ಯೋಧಾ

Team Udayavani, Jan 8, 2022, 11:15 PM IST

ಪ್ರೊ ಕಬಡ್ಡಿ: ನವೀನ್‌ ದಾಳಿಗೆ ಬೆಚ್ಚಿಬಿದ್ದ ಯೋಧಾ

ಬೆಂಗಳೂರು:  ಶನಿವಾರ ನಡೆದ ಪ್ರೊ ಕಬಡ್ಡಿ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡ 37-33 ಅಂಕಗಳಿಂದ ಯುಪಿ ಯೋಧಾ ತಂಡವನ್ನು ಸೋಲಿಸಿ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು.

ಎರಡೂ ತಂಡಗಳ ನಡುವೆ ಕೊನೆ ಯವರೆಗೆ ಸಮಬಲದ ಪೈಪೋಟಿ ನಡೆಯಿತು. ಅಂತಿಮವಾಗಿ ಡೆಲ್ಲಿ ಗೆಲುವಿನ ಸರದಾರನಾಗಿ ಅಜೇಯ ಗೆಲುವಿನ ಓಟವನ್ನು ಮುಂದುವರೆಸಿದೆ.

ಪಂದ್ಯದ ಮೊದಲ 20 ನಿಮಿಷಗಳಲ್ಲಿ ಡೆಲ್ಲಿ ಹಿನ್ನಡೆ ಸಾಧಿಸಿತ್ತು. ಆಗ ಡೆಲ್ಲಿಯ ಅಂಕ 13, ಯೋಧಾ ಅಂಕ 18. ಆದರೆ ದ್ವಿತೀಯಾರ್ಧದ 20 ನಿಮಿಷಗಳಲ್ಲಿ ಪರಿಸ್ಥಿತಿ ಬದಲಾಯಿತು. ಡೆಲ್ಲಿ ಗಳಿಕೆ 24ಕ್ಕೇರಿದರೆ, ಯೋಧಾ 15 ಅಂಕ ಮಾತ್ರ ಗಳಿಸಿತು. ಒಟ್ಟಾರೆ ಯೋಧಾಗಿಂತ ಹೆಚ್ಚುವರಿ ನಾಲ್ಕು ಅಂಕ ಗಳಿಸಿ ಡೆಲ್ಲಿ ಗೆಲುವು ಸಾಧಿಸಿತು.

ಡೆಲ್ಲಿ ಪರ ದಾಳಿಗಾರ ನವೀನ್‌ ಕುಮಾರ್‌ ಮೆರೆದಾಡಿದರು. ಅವರು 27 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 12 ಅಂಕ ಕಲೆಹಾಕಿದರು. ಒಟ್ಟಾರೆ 18 ಅಂಕ ಗಳಿಸಿದರು. ಇದರಲ್ಲಿ ಒಂದು ಅಂಕ ಡ್ಯಾಕಲ್‌ನಿಂದ ದಾಖಲಾಯಿತು.ಇನ್ನು ಆಲ್‌ರೌಂಡರ್‌ ವಿಜಯ್‌ ಕೂಡ ದಾಳಿಯಲ್ಲಿ ಮಿಂಚಿದರು. ಅವರು 12 ದಾಳಿಗಳಲ್ಲಿ 7 ಅಂಕ ಸಂಪಾದಿಸಿದರು.

ಯೋಧಾ ಪರ ಪ್ರದೀಪ್‌ ನರ್ವಾಲ್‌, ಸುರೇಂದರ್‌ ಗಿಲ್‌ ತಲಾ 9 ಅಂಕ ಸಂಪಾದಿಸಿದರು. ಆದರೆ ಇವರ ಆಟ ತಂಡದ ನಿರೀಕ್ಷೆಯ ಮಟ್ಟಕ್ಕಿರಲಿಲ್ಲ. ಪ್ರೊ ಕಬಡ್ಡಿಯ ಸೂಪರ್‌ ಸ್ಟಾರ್‌ ಆಗಿರುವ ನರ್ವಾಲ್‌ 20 ಬಾರಿ ಡೆಲ್ಲಿ ಕೋಟೆಯನ್ನು ಪ್ರವೇಶಿಸಿದರೂ, ಅದನ್ನು ಭೇದಿಸುವಲ್ಲಿ ಬಹಳ ಯಶಸ್ಸು ಕಾಣಲಿಲ್ಲ. ಪ್ರದೀಪ್‌ಗೆ ಹೋಲಿಸಿದರೆ ಸುರೇಂದರ್‌ ಗಿಲ್‌ 17 ದಾಳಿಗಳಲ್ಲಿ 9 ಅಂಕ ಗಳಿಸಿದರು.

ಇದನ್ನೂ ಓದಿ:ಟೆನಿಸ್‌: ಪ್ರಶಸ್ತಿ ಸುತ್ತಿಗೇರಿದ ಬೋಪಣ್ಣ-ರಾಮ್‌ಕುಮಾರ್‌

ಸೋಲಿನ ಅಭಿಯಾನ ಮುಂದುವರೆಸಿದ ತೆಲುಗು
ದಿನದ ಮತ್ತೊಂದು ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ಇರಾದೆಯೊಂದಿಗೆ ಆಡಲಿಳಿದ ತೆಲುಗು ಟೈಟಾನ್ಸ್‌ ತಂಡ ಯು ಮುಂಬಾ ವಿರುದ್ಧ 48-38 ಅಂತರದಿಂದ ಸೋಲನುಭವಿಸಿ ತನ್ನ ಸೋಲಿನ ಅಭಿಯಾನವನ್ನು ಮುಂದುವರೆಸಿದೆ.

ಮುಂಬಾ ಪರ ರೈಡರ್‌ ಅಭಿಷೇಕ್‌ ಸಿಂಗ್‌ (13), ಅಜೀತ್‌ (8), ರಿಂಕೂ (7), ನಾಯಕ ಅಟ್ರಾಚೆಲಿ (4) ಅಂಕ ಗಳಿಸಿ ಮಿಂಚಿದರು.

ಟಾಪ್ ನ್ಯೂಸ್

ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್‌ ತರಲಿದ್ದಾನೆ ಅಂಚೆಯಣ್ಣ

ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್‌ ತರಲಿದ್ದಾನೆ ಅಂಚೆಯಣ್ಣ

news basavaraj

ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..

ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ

ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಫಾಝಿಲ್‌ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ

ಫಾಝಿಲ್‌ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ

ವಿವೋ ವಿ25 ಪ್ರೋ ಫೋನ್‌ ಬಿಡುಗಡೆ; ಕಲರ್‌ ಚೇಂಜ್‌ ಮಾಡಿಕೊಳ್ಳುವ ಫೋನ್‌

ವಿವೋ ವಿ25 ಪ್ರೋ ಫೋನ್‌ ಬಿಡುಗಡೆ; ಕಲರ್‌ ಚೇಂಜ್‌ ಮಾಡಿಕೊಳ್ಳುವ ಫೋನ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ಏಕದಿನ ಸರಣಿ: ಜಿಂಬಾಬ್ವೆ ವಿರುದ್ಧ ಜಬರ್ದಸ್ತ್ ಆಟದ ನಿರೀಕ್ಷೆ

ಇಂದಿನಿಂದ ಏಕದಿನ ಸರಣಿ: ಜಿಂಬಾಬ್ವೆ ವಿರುದ್ಧ ಜಬರ್ದಸ್ತ್ ಆಟದ ನಿರೀಕ್ಷೆ

2023-2027 ಕ್ರಿಕೆಟ್‌ ಋತು: 38 ಟೆಸ್ಟ್‌ , 39 ಏಕದಿನ ಪಂದ್ಯ ಆಡಲಿದೆ ಭಾರತ

2023-2027 ಕ್ರಿಕೆಟ್‌ ಋತು: 38 ಟೆಸ್ಟ್‌ , 39 ಏಕದಿನ ಪಂದ್ಯ ಆಡಲಿದೆ ಭಾರತ

thumb news bcci

ವಿನೋದ್‌ ಕಾಂಬ್ಳಿ ಈಗ ನಿರುದ್ಯೋಗಿ; ಬಿಸಿಸಿಐ ಪಿಂಚಣಿಯೇ ಜೀವನಕ್ಕೆ ಆಧಾರ

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಪ್ಯಾರಾ ಏಷ್ಯನ್‌ ಗೇಮ್ಸ್‌ :ಪರಿಷ್ಕೃತ ದಿನಾಂಕ ಪ್ರಕಟ

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

MUST WATCH

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

ಹೊಸ ಸೇರ್ಪಡೆ

ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್‌ ತರಲಿದ್ದಾನೆ ಅಂಚೆಯಣ್ಣ

ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್‌ ತರಲಿದ್ದಾನೆ ಅಂಚೆಯಣ್ಣ

news basavaraj

ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..

ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ

ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಎಪಿಕ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್‌ ಮೇಲೆ ಪೊಲೀಸ್‌ ಕಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.