ಪ್ರಿಯಾಂಕಾ, ಕೊಹ್ಲಿ ಇನ್ಸ್ಟಾಗ್ರಾಮ್ ಜಾಹೀರಾತಿಗೆ ಕೋಟಿ ಕೋಟಿ ರೂ.

Team Udayavani, Jul 26, 2019, 5:00 AM IST

ನವದೆಹಲಿ: ಫೇಸ್‌ಬುಕ್‌ ಮಾಲಿಕತ್ವದ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಅಚ್ಚರಿಯೆಂದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಭಾರತದ ಇಬ್ಬರು ಮಾತ್ರ. ಒಬ್ಬರು ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ, ಇನ್ನೊಬ್ಬರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ! ಪ್ರಿಯಾಂಕಾ ಇನ್ಸ್ಟಾಗ್ರಾಮ್ ನಲ್ಲಿ 4.33 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಈ ಶ್ರೀಮಂತರ ಪಟ್ಟಿಯಲ್ಲಿ 19ನೇ ಸ್ಥಾನ ಪಡೆದಿದ್ದಾರೆ. ಅವರು ಒಂದು ಜಾಹೀರಾತನ್ನು ಹಾಕಿದರೆ, ಅದಕ್ಕೆ 1.86 ಕೋಟಿ ರೂ. ಪಡೆಯಲಿದ್ದಾರೆ. ಕೊಹ್ಲಿ 23ನೇ ಸ್ಥಾನದಲ್ಲಿದ್ದಾರೆ. ಅವರ ಒಂದು ಜಾಹೀರಾತು ಪೋಸ್ಟ್‌ಗೆ 1.35 ಕೋಟಿ ರೂ. ಪಡೆಯಲಿದ್ದಾರೆ!


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ