ಸಚಿನ್‌ ತೆಂಡುಲ್ಕರ್‌ ಸಾಲಿಗೆ ಸೇರಿದ ಪೂಜಾರ!

Team Udayavani, Dec 30, 2018, 12:40 AM IST

ಮೆಲ್ಬರ್ನ್: ಒಂದು ಟೆಸ್ಟ್‌ ಪಂದ್ಯದ ಒಂದು ಇನಿಂಗ್ಸ್‌ನಲ್ಲಿ ಶತಕ ಬಾರಿಸಿ, ಮತ್ತೂಂದರಲ್ಲಿ ಸೊನ್ನೆಗೆ ಔಟಾದ ಅಪರೂಪದ ದಾಖಲೆಯಲ್ಲಿ ಭಾರತದ ಖ್ಯಾತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ, ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ರೊಂದಿಗೆ ಸಮಬಲ ಸಾಧಿಸಿದ್ದಾರೆ. 

ಪ್ರಸ್ತುತ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಅವರು 2ನೇ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದರು. ಈ ರೀತಿ ತಮ್ಮ 63 ಟೆಸ್ಟ್‌ಗಳ ವೃತ್ತಿಜೀವನದಲ್ಲಿ ಪೂಜಾರ 2 ಬಾರಿ ಮಾಡಿದ್ದಾರೆ. ಸಚಿನ್‌ ತೆಂಡುಲ್ಕರ್‌ ಎರಡು ಬಾರಿ ಹೀಗೆಯೇ ಮಾಡಿದ್ದಾರೆ. ಇವರನ್ನು ಬಿಟ್ಟರೆ ಡಾನ್‌ ಬ್ರಾಡ್ಮನ್‌, ಗ್ಯಾರಿ ಸೋಬರ್ಸ್‌, ಜಾಕಸ್‌ ಕಾಲಿಸ್‌ರಂತಹ ದಿಗ್ಗಜರು ಈ ಅನಪೇಕ್ಷಿತ ದಾಖಲೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವೆಸ್ಟ್‌ ಇಂಡೀಸ್‌ನ ಶಿವನಾರಾಯಣ್‌ ಚಂದ್ರಪಾಲ್‌. ಅವರು 3 ಬಾರಿ ಹೀಗೆ ಮಾಡಿದ್ದಾರೆ.
 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ