ಪ್ರೊ ಕಬಡ್ಡಿ:ತೆಲುಗು ಟೈಟಾನ್ಸ್‌ ವಿರುದ್ಧ ಪುನೇರಿ ಗೆದ್ದರೂ ಪ್ಲೇ-ಆಫ್ ನಿಂದ ಔಟ್‌

ಸಂಪೂರ್ಣ ಮುಳುಗಿದ ತೆಲುಗು ಟೈಟಾನ್ಸ್‌

Team Udayavani, Oct 3, 2019, 10:19 PM IST

ಪಂಚಕುಲ (ಹರ್ಯಾಣ): ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ ಪ್ರೊ ಕಬಡ್ಡಿ 7ನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಪುನೇರಿ ಪಲ್ಟಾನ್‌ 53-50 ಅಂಕಗಳ ಅಂತರದಿಂದ ತೆಲುಗು ಟೈಟಾನ್ಸ್‌ ತಂಡವನ್ನು ಮಣಿಸಿತು.

ಇದರೊಂದಿಗೆ ತೆಲುಗು ಟೈಟಾನ್ಸ್‌ ಸಂಪೂರ್ಣ ಮುಳುಗಿತು. ಗೆದ್ದರೂ ಈಗಾಗಲೇ 21 ಪಂದ್ಯ ಆಡಿರುವ ಪುನೇರಿ ತಂಡ ಪ್ಲೇ-ಆಫ್ನಿಂದ ಹೊರಬಿತ್ತು. ಯುಪಿ ಯೋಧಾ ಸದ್ಯ 6ನೇ ಸ್ಥಾನದಲ್ಲಿದೆ. ಇನ್ನೂ 4 ಪಂದ್ಯ ಆಡಲು ಬಾಕಿ ಇದೆ. ಹೀಗಾಗಿ ಯೋಧಾ ಪ್ಲೇ-ಆಫ್ಗೆ ಅವಕಾಶ ಪಡೆಯುವ ನಿರೀಕ್ಷೆ ಇದೆ. ದಬಾಂಗ್‌ ಡೆಲ್ಲಿ, ಬೆಂಗಾಲ್‌ ವಾರಿಯರ್, ಹರ್ಯಾಣ ಸ್ಟೀಲರ್ಸ್‌, ಯು ಮುಂಬಾ, ಬೆಂಗಳೂರು ಬುಲ್ಸ್‌ ಸೇರಿದಂತೆ ಒಟ್ಟು 5 ತಂಡಗಳು ಈಗಾಗಲೇ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಉಳಿದ ಒಂದು ಸ್ಥಾನಕ್ಕೆ ಪೈಪೋಟಿ ಮುಂದುವರಿದಿದೆ.

ಪುನೇರಿ ಸಂಘಟಿತ ಪ್ರದರ್ಶನ
ದೇವಿಲಾಲ್‌ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪುನೇರಿ ಪಲ್ಟಾನ್‌ ಸಂಘಟಿತ ಆಟ ಪ್ರದರ್ಶಿಸಿತು, ಮಂಜೀತ್‌ (12 ಆಲ್‌ರೌಂಡಿಂಗ್‌ ಅಂಕ), ಸುಶಾಂತ್‌ ಸೈಲ್‌ (11 ಆಲ್‌ರೌಂಡಿಂಗ್‌ ಅಂಕ), ಸುರ್ಜಿತ್‌ ಸಿಂಗ್‌ (7 ಟ್ಯಾಕಲ್‌ ಅಂಕ) ಹಾಗೂ ನಿತಿನ್‌ ತೋಮರ್‌ (5 ಆಲ್‌ರೌಂಡಿಂಗ್‌ ಅಂಕ) ಬಿರುಸಿನ ಆಟ ಪ್ರದರ್ಶಿಸಿದರು. ಇದರಿಂದ ತಂಡ ಗೆಲುವು ಸಾಧಿಸಿತು.

ರಾಕೇಶ್‌ ಗುಡುಗು
ಟೈಟಾನ್ಸ್‌ ಪರ ರಾಕೇಶ್‌ ಗೌಡ ರೈಡಿಂಗ್‌ನಲ್ಲಿ ಮಿಂಚಿದರು. ಒಂದು ಆಕರ್ಷಕ ಟ್ಯಾಕಲ್‌ ಕೂಡ ನಡೆಸಿದ ರಾಕೇಶ್‌ ವೈಯಕ್ತಿಕ 17 ಅಂಕ ಪಡೆದರು. ಇವರಿಗೆ ಆಕಾಶ್‌ ಹಾಗೂ ಕೃಷ್ಣ ತಲಾ 5 ಟ್ಯಾಕಲ್‌ ಅಂಕದಿಂದ ಸಾಥ್‌ ನೀಡಿದರು. ಆದರೆ ತಾರಾ ಆಟಗಾರ ಸಿದ್ಧಾರ್ಥ್ ದೇಸಾಯಿ ಕಳಪೆ ರೈಡಿಂಗ್‌ ಪ್ರದರ್ಶಿಸಿದ್ದು ತಂಡಕ್ಕೆ ಮುಳುವಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ