ವಿಂಡೀಸಿಗರಿಗೆ ಲಾರಾ, ಸರವಣ್ ತರಬೇತಿ
Team Udayavani, Aug 17, 2019, 5:33 AM IST
ಆ್ಯಂಟಿಗುವಾ: ಏಕದಿನ ಮತ್ತು ಟಿ-20 ಸರಣಿಗಳನ್ನು ಕಳೆದುಕೊಂಡು ನಿರಾಶೆಗೊಂಡಿರುವ ವೆಸ್ಟ್ ಇಂಡೀಸ್ ತಂಡ ಟೆಸ್ಟ್ ನಲ್ಲಾದರೂ ಭಾರತಕ್ಕೆ ತಿರುಗಿ ಬೀಳುವ ಸನ್ನಾಹದಲ್ಲಿದೆ. ಇದಕ್ಕಾಗಿ ವೆಸ್ಟ್ ಇಂಡೀಸ್ನ ಕ್ರಿಕೆಟ್ ದಿಗ್ಗಜರಾದ ಬ್ರಿಯಾನ್ ಲಾರಾ ಮತ್ತು ರಾಮ್ನರೇಶ್ ಸರವಣ್ ತಂಡದ ನೆರವಿಗೆ ಧಾವಿಸಿದ್ದಾರೆ.
ವಿಂಡೀಸ್ ತಂಡ ಭಾರತದ ವಿರುದ್ಧ 2 ಟೆಸ್ಟ್ಗಳನ್ನು ಆಡಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಆ್ಯಂಟಿಗುವಾದಲ್ಲಿ ವಿಂಡಿಸಿಗರಿಗೆ ಪುಟ್ಟದಾದ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಆಡುವ ಬಳಗದಲ್ಲಿರುವ 13 ಮಂದಿ ಜತೆಗೆ ಲಾರಾ ಮತ್ತು ಸರವಣ್ ಕ್ರಿಕೆಟ್ ಕುರಿತಾಗಿರುವ ತಮ್ಮ ಜ್ಞಾನ, ಕೌಶಲ, ಅನುಭವ ಮತ್ತು ಪರಿಣತಿಗಳನ್ನು ಹಂಚಿಕೊಳ್ಳಲಿದ್ದಾರೆ.
ಇದೊಂದು ರೀತಿಯಲ್ಲಿ ಬ್ರೈನ್ಸ್ಟ್ರೋಮಿಂಗ್ ಸೆಶನ್ ಇದ್ದಂತೆ. ಅಂದರೆ ಕ್ರಿಕೆಟಿಗರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಕೆಲಸ. ದಿಗ್ಗಜರಿಬ್ಬರು ಮೈದಾನದಲ್ಲಿ ಮತ್ತು ಮೈದಾನದಾಚೆ ಈ ಕೆಲಸವನ್ನು ಮಾಡಲಿದ್ದಾರೆ. ಕ್ರಿಕೆಟ್ ಅಭ್ಯಾಸ ಮಾಡುವುದಕ್ಕಿಂತಲೂ ಕ್ರಿಕೆಟ್ ತಂತ್ರದ ಬಗ್ಗೆ ಹೇಳಿಕೊಡುವುದು ಅವರ ಕೆಲಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್