ಗಾಯಾಳು ಧವನ್‌ ಸ್ಥಾನಕ್ಕೆ ಯುವ ಕ್ರಿಕೆಟಿಗ ರಿಷಭ್‌ ಪಂತ್‌, ಲಂಡನ್‌ಗೆ ಪ್ರಯಾಣ

Team Udayavani, Jun 12, 2019, 12:25 PM IST

ನಾಟಿಂಗಂ : ಗಾಯಾಳುವಾಗಿ ಮೂರು ಪಂದ್ಯಗಳಿಗೆ ಅಲಭ್ಯರಿರುವ ಆರಂಭಕಾರ ಶಿಖರ್‌ ಧವನ್‌ ಅವರಿಗೆ ಬದಲಿಯಾಗಿ 21ರ ಹರೆಯದ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಭಾರತೀಯ ವಿಶ್ವಕಪ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಪಂತ್‌ ಅವರು ಕಳೆದೊಂದು ವರ್ಷದಿಂದ ಅತ್ಯುತ್ತಮ ಪಾರ್ಮ್ ನಲ್ಲಿದ್ದ ಹೊರತಾಗಿಯೂ ವಿಶ್ವ ಕಪ್‌ ತಂಡದಿಂದ ಅವರನ್ನು ಕೈಬಿಟ್ಟದ್ದು ಭಾರೀ ಚರ್ಚೆ, ಟೀಕೆಗೆ ಕಾರಣವಾಗಿತ್ತು.

ರಿಷಭ್‌ ಪಂತ್‌ ಅವರು ನ್ಯೂಜೀಲ್ಯಾಂಡ್‌ ಪಂದ್ಯದ ಮುನ್ನಾ ದಿನ ಭಾರತೀಯ ತಂಡವನ್ನು ಸೇರಿಕೊಳ್ಳುವರು.

ಹಾಗಿದ್ದರೂ ಧವನ್‌ ಅವರು ವಿಶ್ವಕಪ್‌ ಪಂದ್ಯಾವಳಿಯ ಶೇಷ ಭಾಗಕ್ಕೆ ಲಭ್ಯರಿರುವ ಬಗ್ಗೆ ತಂಡದ ಆಡಳಿತೆಯು ಅಂತಿಮ ನಿರ್ಧಾರ ಕೈಗೊಳ್ಳುವ ತನಕ ಪಂತ್‌ ಅವರ ಸೇರ್ಪಡೆಯನ್ನು ಪರಿಗಣಿಸಲಾಗದು ಎಂದು ಮೂಲಗಳು ಹೇಳಿವೆ.

“ಭಾರತೀಯ ತಂಡದ ಆಡಳಿತೆಯ ಕೋರಿಕೆಯ ಪ್ರಕಾರ ರಿಷಭ್‌ ಪಂತ್‌ ಅವರನ್ನು ವಿಮಾನದಲ್ಲಿ ಕಳುಹಿಸಲಾಗುತ್ತಿದೆ’ ಎಂದು ಪ್ರಕೃತ ಇಂಗ್ಲಂಡ್‌ನ‌ಲ್ಲಿರುವ ಹಿರಿಯ ಬಿಸಿಸಿಐ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ