ಐಸಿಸಿ ಚುನಾವಣೆ: ಶಶಾಂಕ್‌ಗೆ ಬಿಸಿಸಿಐ ಸಡ್ಡು?

Team Udayavani, Nov 15, 2019, 5:27 AM IST

ದುಬಾೖ: ಸದ್ಯದಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಚುನಾವಣೆ ನಡೆಯಲಿದೆ. ಮೂರನೇ ಬಾರಿಗೆ ಐಸಿಸಿ ಮುಖ್ಯಸ್ಥರಾಗಿ ಪುನರಾಯ್ಕೆಗೊಳ್ಳಲು ಶಶಾಂಕ್‌ ಮನೋಹರ್‌ ಸಿದ್ಧವಾಗಿದ್ದಾರೆ.

ಇದಕ್ಕೆ ತಡೆ ಹಾಕಲು ಬಿಸಿಸಿಐ ಸಜ್ಜುಗೊಂಡಿದೆ. ಡಿ. ಒಂದರಂದು ವಿನೋದ್‌ ರಾಯ್‌ ಸಮಿತಿ ರಚಿಸಿರುವ ಆಡಳಿತಾತ್ಮಕ ತಿದ್ದುಪಡಿಗಳಿಗೆ ಮತ್ತೆ ತಿದ್ದುಪಡಿ ತಂದು, ಎನ್‌. ಶ್ರೀನಿವಾಸನ್‌ ಅವರನ್ನು ಬಿಸಿಸಿಐ ಪ್ರತಿನಿಧಿಯಾಗಿ ಐಸಿಸಿಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ.

ಡಿ. 1ರಂದು ಬಿಸಿಸಿಐ ಸರ್ವ ಸದಸ್ಯರ ಸಭೆಯಿದೆ. ಅಲ್ಲಿ 4ರಲ್ಲಿ 3ರಷ್ಟು ಬಹುಮತದ ಮೂಲಕ ತಿದ್ದುಪಡಿಗಳಿಗೆ ಬೆಂಬಲ ಪಡೆದರೆ, ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಲು ಸಾಧ್ಯವಾಗುತ್ತದೆ. ಒಂದುವೇಳೆ ತಿದ್ದುಪಡಿಯನ್ನು ಸರ್ವೋಚ್ಚ ನ್ಯಾಯಾಲಯ ಮನ್ನಿಸಿದರೆ, ಐಸಿಸಿಗೆ ಶ್ರೀನಿವಾಸನ್‌ ಬಿಸಿಸಿಐ ಪ್ರತಿನಿಧಿಯಾಗಿ ತೆರಳಲು ಸಾಧ್ಯವಿದೆ. ಅಷ್ಟೇ ಅಲ್ಲ, ಐಸಿಸಿ ಚುನಾವಣೆಗೂ ಸ್ಪರ್ಧಿಸಬಹುದಾಗಿದೆ. ಆಗ ಇಬ್ಬರು ಭಾರತೀಯರ ನಡುವೆ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ